ಹುಬ್ಬಳ್ಳಿ-ಧಾರವಾಡ ಸುದ್ದಿ

ಕಲಘಟಗಿ ಸಂಪೂರ್ಣ ಬಂದ್

ತಾಲೂಕನ್ನು ಬರಪೀಡಿತ ಪ್ರದೇಶ ಪಟ್ಟಿಗೆ ಸೇರಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ

ರಾಜ್ಯ ಕಾಂಗ್ರೆಸ್ ಸರ್ಕಾರ, ಸಚಿವ ಲಾಡ್ ವಿರುದ್ಧ ರೈತಪರ ಸಂಘಟನೆ ಆಕ್ರೋಶ

ಕಲಘಟಗಿ: ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಾರತೀಯ ಜನತಾ ಪಕ್ಷವು ಕರೆಕೊಟ್ಟಿದ್ದ ಕಲಘಟಗಿ ಬಂದ್ ಪ್ರತಿಭಟನೆ ಬುಧವಾರ ಸಂಪೂರ್ಣ ಯಶಸ್ವಿಯಾಯಿತು.


ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಹುಬ್ಬಳ್ಳಿ ಕಾರವಾರ ಹೆದ್ದಾರಿಯಲ್ಲಿನ ಹಾಗೂ ವಿವಿಧ ಪ್ರಮುಖ ಬೀದಿಗಳಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಪ್ರತಿಭಟನೆಯಲ್ಲಿ ವಿವಿಧ ಜನಪರ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡಿದ್ದವು.
ಪಟ್ಟಣದ ಎಪಿಎಂಸಿಯಿಂದ ತಹಸೀಲ್ದಾರ್ ಕಚೇರಿ ವರೆಗಿನ ಪ್ರತಿಭಟನೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಪ್ರತಿಭಟನೆಯ ಉದ್ದಕ್ಕೂ ರಾಜ್ಯ ಕಾಂಗ್ರೆಸ್ ಸರ್ಕಾರದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ವಿರುದ್ಧ ಪ್ರತಿಭಟನಾಕಾರರು ಘೋಷಣೆಯನ್ನು ಕೂಗಿದರು. ವಿಧಾನ ಪರಿಷತ್ ಮಾಜಿ ಸದಸ್ಯ, ಬಿಜೆಪಿ ಮುಖಂಡ ನಾಗರಾಜ್ ಛಬ್ಬಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.


ಈ ಸಂದರ್ಭದಲ್ಲಿ ಸಾರಿಗೆ ಸಂಪರ್ಕ ಕಡಿತಗೊಂಡು ಸಂಚಾರ ಅವ್ಯವಸ್ಥೆಗೊಂಡು ಪ್ರಯಾಣಿಕರು ಪರದಾಡುವಂತಾಯಿತು. ತಾಲೂಕ ಬಿಜೆಪಿ ಅಧ್ಯಕ್ಷ ಬಸವರಾಜ ಸೆರೆವಾಡ, ಶಶಿಧರ್ ನಿಂಬಣ್ಣವರ್, ನಿಂಗಪ್ಪ ಸುತಗಟ್ಟಿ, ದೀಪಂ ಮಾಜಿ ಸದಸ್ಯರಾದ ಸಿ ಎಫ್ ಪಾಟೀಲ್ ಐಸಿ ಗೋಕುಲ್, ಅಣ್ಣಪ್ಪ ಓಲೆಕಾರ್, ಕಿರಣ್ ಪಾಟೀಲ್ ಕುಲಕರ್ಣಿ, ಸದು ಚಿಂತಾಮಣಿ, ಶಶಿಧರ್ ಹುಲಿಕಟ್ಟಿ, ನಿಂಗಪ್ಪ ಸುತಗಟ್ಟಿ,ವಜ್ರ ಕುಮಾರ್ ಮಾದನಬಾವಿ, ಬಸವರಾಜ ಹೊನ್ನೇಹಳ್ಳಿ, ಗಂಗಾಧರ ಗೌಳಿ, ಕಲ್ಲಪ್ಪ ಪುಟ್ಟಪ್ಪನವರ,ಶಿವರುದ್ರ ಗೋಕುಲ್, ಎಸ್ ಎನ್ ರಾಯನಾಳ,ಅರ್ಜುನ್ ಲಮಾಣಿ, ಎಸ್ ಎನ್ ಹೊಸಮನೆ, ಎಸ್ ಬಿ ಮುದಿಗೌಡರ, ನೀಲಕಂಠಗೌಡ ಪಾಟೀಲ್, ಮಂಜುನಾಥ್ ಕಾಗಲ್ಕರ್, ಪರಶುರಾಮ ಹುಲಿ ಹೊಂಡ, ಸುರೇಶ್ ಸಿಲವಂತರ, ಶಂಕರಗೌಡ ಪಾಟೀಲ್, ಗುರುನಾಥ್ ಗೌಡ ಕರಡಿ ಹೊಂಡ ಸೇರಿದಂತೆ ಕಲಘಟಗಿ ತಾಲೂಕಿನ ರೈತ ಜನರು ಪಾಲ್ಗೊಂಡಿದ್ದರು,


ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಶೈಲ್ ಕೌಜಲಗಿ ಅವರು ಮುಂಜಾಗ್ರತಾ ಕ್ರಮವಾಗಿ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿದ್ದರು.

administrator

Related Articles

Leave a Reply

Your email address will not be published. Required fields are marked *