ಧಾರವಾಡ: ಮಹಿಳಾ ಮಂಟಪ ಅನುಭವ ಮಂಟಪವಾಗಬೇಕು. ಮಹಿಳಾ ಸಾಹಿತ್ಯ, ಸಂಸ್ಕೃತಿ, ಕಲೆ ಉತ್ತೇಜಿಸುವ ಕಾರ್ಯವಾಗಬೇಕು ಜೊತೆಗೆ ಗ್ರಾಮೀಣ ಪ್ರದೇಶದಲ್ಲಿಯ ಮಹಿಳಾ ಅಶಿಕ್ಷಿತರನ್ನು ಸುಶಿಕ್ಷಿತರನ್ನಾಗಿ ಮಾಡುವ ಕಾರ್ಯವಾಗಬೇಕು ಎಂದು ವಿಶ್ರಾಂತ ಪ್ರಾಚಾರ್ಯೆ ಡಾ.ರಾಜೇಶ್ವರಿ ಮಹೇಶ್ವರಯ್ಯ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ’ಮಹಿಳಾ ಮಂಟಪದ ಪ್ರಸಕ್ತ ಸಾಲಿನ ಕಾರ್ಯಚಟುವಟಿಕೆಗಳನ್ನು ದೀಪ ಬೆಳಗಿಸಿ, ಭುವನೇಶ್ವರಿ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರತಿನಿತ್ಯ ಸಮಾಜದಲ್ಲಿ ನಡೆಯುವ ಒಂದಿಲ್ಲೊಂದು ಮಹಿಳೆಯರ, ಮಕ್ಕಳ ಮೇಲಿನ ದೌರ್ಜನ್ಯ, ಕೋಮುವಾದದ ಛಾಯೆ ಮುಂತಾದ ಘಟನೆಗಳು ನಮ್ಮ ಮನಸನ್ನು ಘಾಸಿಗೊಳಿಸುತ್ತಿದ್ದು, ಇಂತಹ ಘಟನೆಗಳಿಗೆ ಬಲಿಯಾಗದಂತೆ ಸಮಾಜದಲ್ಲಿಅರಿವುಜಾಗೃತಿ ಮೂಡಿಸುವ ದಿಶೆಯಲ್ಲಿಚರ್ಚೆ, ಸಂವಾದ, ಉಪನ್ಯಾಸ ನಡೆಯಲಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ(ನಿ) ಉಪನಿರ್ದೇಶಕಿ ನೀಲಗಂಗಾ ಚರಂತಿಮಠ ಮಾತನಾಡಿದರು. ಸಂಘದ ಉಪಾಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಮಹಿಳಾ ಮಂಟಪ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾದ ಸದಸ್ಯರಿಗೆ ಪ್ರಮಾಣಪತ್ರ ವಿತರಿಸಿ ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ವೇದಿಕೆಯಲ್ಲಿದ್ದರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮಂಟಪ ಸಂಚಾಲಕಿ ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು. ಡಾ.ವಿ.ಶಾರದಾ ಮತ್ತು ಡಾ.ಅರುಣಾ ಹಳ್ಳಿಕೇರಿ ಅತಿಥಿಗಳನ್ನು ಪರಿಚಯಿಸಿದರು. ಗಂಗವ್ವಾ ಕೋಟಿಗೌಡರ ವಂದಿಸಿದರು. ಅಮೂಲ್ಯ ಕಲ್ಲಟ್ಟಿ ಮತ್ತು ಡಾ. ನಿರ್ಮಲಾ ಪ್ರಾರ್ಥಿಸಿದರು.
ಮಹಿಳಾ ಮಂಟಪದ ಸಲಹಾ ಸಮಿತಿ ಸದಸ್ಯರಾದ ಜ್ಯೋತಿ ಭಾವಿಕಟ್ಟಿ, ರೇಖಾ ಅಂತಕ್ಕನವರ, ಸವಿತಾ ಕುಸುಗಲ್ಲ, ಸುಜಾತಾ ಹಡಗಲಿ, ಆನಂದ ಅಮರಶೆಟ್ಟಿ, ಪ್ರಸನ್ನಕುಮಾರ ಹಿರೇಮಠ ಮತ್ತು ಶಂಕರ ಹಲಗತ್ತಿ, ಶಂಕರ ಕುಂಬಿ, ಡಾ ಸಂಜೀವ ಕುಲಕರ್ಣಿ, ಡಾ.ಜಿನದತ್ತ ಹಡಗಲಿ, ವೀರಣ್ಣ ಒಡ್ಡೀನ, ಡಾ. ಧನವಂತ ಹಾಜವಗೋಳ, ಡಾ. ಮಹೇಶ ಹೊರಕೇರಿ, ಡಾ.ಲಿಂಗರಾಜ ಅಂಗಡಿ, ಮಲ್ಲಿಕಾರ್ಜುನ ಚಿಕ್ಕಮಠ, ಸಿ.ಜೆ. ಹಿರೇಮಠ, ರಾಮಚಂದ್ರ ಧೋಂಗಡೆ, ಅರುಂಧತಿ ಸವದತ್ತಿ, ಜಯಶ್ರೀ ಗುತ್ತಲ, ಡಾ.ಭಾಗ್ಯಜ್ಯೋತಿ ಕೋಟಿಮಠ, ಪ್ರಜ್ಞಾ ಮತ್ತಿಹಳ್ಳಿ, ಡಿ.ಎಸ್.ಕೆಂಗಾನವರ, ಮಹಾಂತೇಶ ನರೇಗಲ್ಲ ಮುಂತಾದವರು ಭಾಗವಹಿಸಿದ್ದರು.