ಹುಬ್ಬಳ್ಳಿ-ಧಾರವಾಡ ಸುದ್ದಿ

ನಾಳೆ ’ವಾಣಿಜ್ಯ ರತ್ನ’ ಪ್ರಶಸ್ತಿ ಪ್ರದಾನ

ಅಂಕುಶ ಕೊರವಿ, ಶೇಖರ್ ಬಸವಣ್ಣ, ರೋಹಿಣಿ ಘಟಪಾಂಡೆಗೆ ನವೋದ್ಯಮಿ ಪ್ರಶಸ್ತಿ

ಹುಬ್ಬಳ್ಳಿ: ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಹಾಗೂ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆ.1ರಂದು ಸಂಜೆ 5 ಗಂಟೆಗೆ ನಗರದ ಗೋಕುಲ ರಸ್ತೆಯ ಕ್ಯೂಬಿಕ್ಸ್ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ವಿನಯ ಜೆ. ಜವಳಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.


ಸಮಾರಂಭಕ್ಕೆ ಮಹಿಕೋ ಪ್ರೈ.ಲಿ.ದ ರಾಜೇಂದ್ರ ಬರವಾಲೆ ಮುಖ್ಯ ಅತಿಥಿಗಳಾಗಿ ಹಾಗೂ ಶಿವಮೊಗ್ಗದ ಕೆಟಿಜಿ ಗ್ರೂಪ್ ಆಫ್ ಕಂಪನಿಯ ಸಂಸ್ಥಾಪಕ ಜೈರಾಮ್ ಜಿ. ಕಿಮ್ಮನೆ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದು, ಗಣ್ಯ ವ್ಯಕ್ತಿಗಳು, ಸದಸ್ಯರು ಹಾಗೂ ಸಾರ್ವಜನಿಕರು 350ರಿಂದ 400 ಸಂಖ್ಯೆಯಲ್ಲಿ ಭಾಗವಹಿಸುವರು ಎಂದರು.


ಸಂಸ್ಥಾಪಕರ ದಿನಾಚರಣೆ ನಿಮಿತ್ತ ನೀಡುವ ವಾಣಿಜ್ಯ ರತ್ನ ಪ್ರಶಸ್ತಿಯನ್ನು ಈ ಬಾರಿ ಶಿವಮೊಗ್ಗದ ಕೆಟಿಜಿ ಗ್ರೂಪ್ ಆಫ್ ಕಂಪನಿಯ ಸಂಸ್ಥಾಪಕ ಜೈರಾಮ್ ಜಿ.ಕಿಮ್ಮನೆ, ಮೆ. ಎಕ್ಸೀಡ ಕ್ರಾಪ್ ಸಾಯನ್ಸ ಪ್ರೈ.ಲಿ. ಹುಬ್ಬಳ್ಳಿಯ ಚಂದ್ರಶೇಖರ ಬಾಗೇವಾಡಿ, ಮೆ. ಗಂಗಾವತಿ ಸಿಲ್ಕ್ಸ, ಹುಬ್ಬಳ್ಳಿಯ ಆನಂದ ಬಸವರಾಜ ಕಮತಗಿ, ಓರಿಯನ್ ಹೈಡ್ರಾಲಿಕ್ಸ್ ಪ್ರೈ. ಲಿಮಿಟೆಡ್, ಬೆಳಗಾವಿ ಡೈರೆಕ್ಟರ್ ಕೀತ್ ಮಚಾಡೊ, ಶ್ರೀ ಸಾಯಿ ಗಣೇಶ ಕಾಟನ್ ಮಿಲ್, ಬಳ್ಳಾರಿ ವ್ಯವಸ್ಥಾಪಕ ನಿರ್ದೇಶಕ ಪಿ. ದೊಡ್ಡ ಬಸನವಗೌಡ, ವಿಭಾ ಫ್ಯಾಶನ್ ವೇರ್, ರಾಣೇಬೆನ್ನೂರನ ಹೇಮಲತಾ ಆರ್.ಯಡಕಿ ಹಾಗೂ ನವೋದ್ಯಮಿ 2023 ಪ್ರಶಸ್ತಿಯನ್ನು ಅಸ್ಟ್ರ ಡಿಫೆನ್ಸ್, ಹುಬ್ಬಳ್ಳಿಯ ಅಂಕುಶ ಕೊರವಿ, ವೈಡ್ ಮೊಬಿಲಿಟಿ ಮೆಕಾಟ್ರಾನಿಕ್ಸ ಪ್ರೈ.ಲಿ.ಹುಬ್ಬಳ್ಳಿಯ ಶೇಖರ್ ಬಸವಣ್ಣ ಮತ್ತು ರೋಹಿಣಿ ಘಟಪಾಂಡೆ ಅವರಿಗೆ ನೀಡಲಾಗುವುದು ಎಂದು ತಿಳಿಸಿದರು.


ವಾಣಿಜ್ಯೋದ್ಯಮ ಸಂಸ್ಥೆಯು ಪ್ರಾಮುಖ್ಯವಾಗಿ ವಾಣಿಜ್ಯೋದ್ದಿಮೆ ಕ್ಷೇತ್ರಗಳ ಅಭಿವೃದ್ಧಿ ಗಾಗಿ ವರ್ತಕರಿಗೆ ಹಾಗೂ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಸದಸ್ಯರಲ್ಲಿ ಒಗ್ಗಟ್ಟು ಮೂಡಿಸಿ ಹಾಗೂ ಪ್ರಗತಿಯನ್ನು ಸಾಧಿಸುವ ಗುರಿ ಹೊಂದಿದೆ. ಅಲ್ಲದೇ ವಾಣಿಜ್ಯ ಹಾಗೂ ಉದ್ದಿಮೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೂಲಂಕುಷವಾಗಿ ಚರ್ಚಿಸಿ ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಮಹತತ್ವದ ವೇದಿಕೆಯಾಗಿದೆ ಎಂದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರವೀಣ ಅಂಗಡಿ, ಸಂಸ್ಥಾಪಕರ ದಿನಾಚರಣೆ ಸಮಿತಿ ಚೇರಮನ್ ದೀಪಕ ಪಾಟೀಲ ಮತ್ತಿತರರಿದ್ದರು.

administrator

Related Articles

Leave a Reply

Your email address will not be published. Required fields are marked *