ಹುಬ್ಬಳ್ಳಿ : ಧಾರವಾಡದಲ್ಲಿನ ಕರ್ನಾಟಕ ಉತ್ತರ ಸಭಾ ಪ್ರಾಂತಕ್ಕೆ 6ನೇಯ ಬಿಷಪ್ರಾಗಿ ರೈಟ್ ರೆವರೆಂಡ್ ಮಾರ್ಟಿನ್ ಸಿ ಬೋರಗಾಯಿ ಆಯ್ಕೆಯಾಗಿದ್ದಾರೆ.
19.9.2021 ರಂದು ರೈಟ್ ರೆವರೆಂಡ್ ಆರ್. ಜೆ ನಿರಂಜನ ಅವರ ನಿವೃತ್ತಿಯಿಂದ ತೆರವಾದ ಹುದ್ದೆಗೆ ದಿನಾಂಕ 14.09.2021 ರಂದು ಮೊಟೆಬೆನ್ನೂರಿನಲ್ಲಿ ಜರುಗಿದ ಕರ್ನಾಟಕ ಉತ್ತರ ಸಭಾ ಪ್ರಾಂತದ ಪರಿಷತ್ತಿನ ಚುನಾವಣೆಯಲ್ಲಿ ಪೌಲ ಶಿಂಧೆ, ಮಾರ್ಟಿನ್ ಬೋರ್ಗಾಯಿ, ರಾಜು ಮ್ಯಾದನೊಪ್ಪ, ಬಾಬಿರಾಜ ನಾಲ್ವರು ಆಯ್ಕೆಯಾಗಿದ್ದರು.
ನಂತರ ಆಯ್ಕೆ ಪ್ರಕ್ರಿಯೆಯು ಚೆನ್ನೈಯಲ್ಲಿರುವ ದಕ್ಷಿಣ ಭಾರತ ಕ್ರೆöÊಸ್ತ ಮಹಾ ಸಭೆಯ ಪದಾಧಿಕಾರಿಗಳು ಆಯ್ಕೆಯ ಪ್ರಕ್ರಿಯೆಯನ್ನು ಮಾಡಲಿದ್ದು, ದಿ. 17.12.2021 ರಂದು ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮಾರ್ಟಿನ್ ಸಿ ಬೋರಗಾಯಿ ಇವರನ್ನು ಆಯ್ಕೆ ಮಾಡಲಾಯಿತು.
ಇವರು ಕರ್ನಾಟಕ ಉತ್ತರ ಸಭಾ ಪ್ರಾಂತದ ಅಡಿಯಲ್ಲಿ ಬರುವ 13 ಜಿಲ್ಲೆಗಳ ಸಿ.ಎಸ್.ಆಯ್ ಸಭೆಗಳ (ಚರ್ಚ್) ಹಾಗೂ ಬಾಸೆಲ್ ಮಿಶನ್ ಉಚ್ಚ ಶಿಕ್ಷಣ ಸಂಸ್ಥೆ, ಬಾಸೆಲ್ ಮಿಶನ್ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಿಗೆ, ಗದಗ ಬೆಟಗೇರಿಯಲ್ಲಿರುವ ಜರ್ಮನ ಆಸತ್ರೆಗೂ ಹಾಗೂ ಸಭಾ ಪ್ರಾಂತದ ಅಡಿಯಲ್ಲಿ ಬರುವ ಸುಮಾರು 15 ವಸತಿ ನಿಲಯಗಳು ಮತ್ತು ಶಿಶುಪಾಲನ ನಿಲಯಗಳಿಗೆ ಧರ್ಮಾಧ್ಯಕ್ಷರಾಗಿ ಕಾರ್ಯನಿರ್ವಹಿಸುವರು.
ಗುರು ದೀಕ್ಷೆ : ಇಂದು ಹುಬ್ಬಳ್ಳಿಯ ಯೇಸುನಾಮ ಮಹಾ ದೇವಾಲಯದಲ್ಲಿ ರೆವರೆಂಡ್ ಮಾರ್ಟಿನ್ ಸಿ ಬೋರ್ಗಾಯಿಯವರಿಗೆ ದಕ್ಷಿಣ ಭಾರತ ಕ್ರೈಸ್ತ ಮಹಾ ಸಭೆಯ ಮಹಾ ಧರ್ಮಾಧ್ಯಕ್ಷರಾದ ದ ಮೊಸ್ಟ ರೆವರೆಂಡ್ ಎ, ಧರ್ಮರಾಜ ರಸಾಲಮ್ ಹಾಗೂ ರೈಟ್ ರೆವರೆಂಡ್ ಕೆ. ರುಬೇನ ಮಾರ್ಕ ಧರ್ಮಾಧ್ಯಕ್ಷರಿಂದ ಗುರುದೀಕ್ಷೆ ಕಾರ್ಯಕ್ರಮವು ನೆರವೆರಿತು.
ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ಕ್ರೆöÊಸ್ತ ಮಹಾ ಸಭೆಯ ಕಾರ್ಯದರ್ಶಿ ಫರ್ನಾಂಡಿಸ್ ರತಿನರಾಜ, ಖಜಾಂಚಿಗಳಾದ ಡಾ|| ಬಿ. ವಿಮಲ ಸುಕುಮಾರ ಹಾಗೂ ದಕ್ಷಿಣ ಭಾರತ ಕ್ರೈಸ್ತ ಮಹಾ ಸಭೆಯ 10 ಜನ ಬಿಹೋಪರು ಹಾಗೂ ಇಡೀ ರಾಜ್ಯದಿಂದ ಆಗಮಿಸಿದ ಪಾದ್ರಿಗಳು ಹಾಗೂ ಆನೇಕ ಭಕ್ತಾದಿಗಳು ಉಪಸ್ಥಿತರಿದ್ದರು.
ಬೋರಗಾಯಿ ಮೂಲತಃ ಹುಬ್ಬಳ್ಳಿಯವರಾಗಿದ್ದು ತಮ್ಮ ಶಿಕ್ಷಣವನ್ನು ಹುಬ್ಬಳ್ಳಿಯಲ್ಲಿ ಪೂರೈಸಿ ಮುಂದೆ ಅವರು ಏರ್ ಇಂಡಿಯಾ, ದುಬೈ ಏರ್ವೇಸ್, ಗಲ್ಪ ಏರ್ವೇಸ್, ಖತಾರ ದೇಶದ ರಾಜನ ಆಮೇರಿ ಪ್ರೆöÊಟನ ಏರಕ್ರಾಪ್ಟ ಇಂಜೀನಿಯರಾಗಿ ಸೇವೆಯನ್ನು ಸಲ್ಲಿತ್ತಿರುವಾಗ ದೊಡ್ಡ ಮೊತ್ತದ ಸಂಬಳವನ್ನು ತ್ಯಜಿಸಿ ಆಮೇರಿಕಾದಲ್ಲಿರುವ ದೈವಜ್ಞಾನಶಾಸ್ತçದ ವೇದ ವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಕರ್ನಾಟಕ ಉತ್ತರ ಸಭಾ ಪ್ರಾಂತದ ಆನೇಕ ಕಡೆಗಳಲ್ಲಿ ಸೇವೆಯನ್ನು ಸಲ್ಲಿಸಿ ಈ ಹುದ್ದೆಗೆ ಬಂದಿದ್ದಾರೆ.
ಸಿಎಸ್ ಐ ನಾರ್ದರ್ನ ಡಯಾಸಿಸ್ನ ವ್ಯಾಪ್ತಿಯಲ್ಲಿ ಏಳು ಜಿಲ್ಲೆಗಳಲ್ಲಿನ ಕೋಟ್ಯಾಂತರ ಮೌಲ್ಯದ ಚರ್ಚುಗಳು, ಶಿಕ್ಷಣ ಸಂಸ್ಥೆಗಳು ಇವುಗಳ ಅಧೀನದಲ್ಲಿರುವ ಆಸ್ತಿಗಳು ಬಿಷಪ್ರ ಕೈಯಲ್ಲೇ ಇರುತ್ತವೆ.ಪ್ರತಿವರ್ಷವೂ ಕೋಟ್ಯಾಂತರ ಹಣ ತರುವ ಶಿಕ್ಷಣ ಸಂಸ್ಥೆಗಳು ಇವರ ಅಡಿ ಕಾರ್ಯನಿರ್ವಹಿಸಬೇಕಿರುವುದರಿಂದ ಈ ಡಯಾಸಿಸ್ನ ಬಿಷಪ್ ಹುದ್ದೆಗೆ ಭಾರಿ ಪೈಪೋಟಿಯಿತ್ತು. ಬೋರಗಾಯಿ ಸಿಎಸ್ಐನ ಮಾಡರೇಟರೂ ಆಗಿದ್ದ ವಸಂತ ದಂಡಿನ ಅವರ ಹತ್ತಿರದ ಸಂಬ0ಧಿಯಾಗಿದ್ದಾರೆ.
ಸ0ಜೆ ದರ್ಪಣ ಕಳೆದ ಜೂನ್ 21ರಂದು ‘ನಾರ್ಥನ್ ಡಯಾಸಿಸ್ ಬಿಷಪ್ ಸ್ಥಾನಕ್ಕೆ ಪೈಪೋಟಿ’ ಶಿರೋನಾಮೆಯಲ್ಲಿ ವಿವಿರವಾಗಿ ಸುದ್ದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.
martin-borgayi3