ಹುಬ್ಬಳ್ಳಿ-ಧಾರವಾಡ ಸುದ್ದಿ

ಕೆಸಿಸಿ ಬ್ಯಾಂಕ್: ಮತ್ತೆ 4 ಫಲಿತಾಂಶ ಪ್ರಕಟ

ಮುರಳ್ಳಿ, ಕಲಗುಡಿ, ಅಜ್ಜನವರ, ಪಾಟೀಲ ಆಯ್ಕೆ

ಧಾರವಾಡ: ಅವಿಭಜಿತ ಧಾರವಾಡ ಜಿಲ್ಲೆಯ ಮಧ್ಯವರ್ತಿ ಬ್ಯಾಂಕ್ ಆದ ಇಲ್ಲಿನ ಕೆಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ನಾಲ್ಕು ನಿರ್ದೇಶಕ ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವಲಯದ ಗದಗ ತಾಲೂಕಿನ ಅಭ್ಯರ್ಥಿ ಮಲ್ಲಪ್ಪ ಕಲಗುಡಿ ಅವರು ಒಟ್ಟು 47 ರ ಪೈಕಿ 37 ಮತಗಳನ್ನು ಪಡೆದು ನಾಲ್ಕನೇ ಬಾರಿಗೆ ವಿಜಯಿಯಾಗಿದ್ದಾರೆ. ಇವರ ಪ್ರತಿಸ್ಪರ್ಧಿ ನಿಂಗಪ್ಪ ಮಣ್ಣೂರ ಕೇವಲ 12 ಮತಗಳಿಗೆ ತೃಪ್ತಿ ಪಡುವಂತಾಗಿದೆ.


ಕಲಘಟಗಿ ತಾಲೂಕಿನಿಂದ ಮಂಜುನಾಥಗೌಡ ಮುರಳ್ಳಿ ಅವರು 16 ಮತಗಳನ್ನು ಪಡೆದು ಆಯ್ಕೆಯಾಗುವ ಮೂಲಕ ಮೂರನೇ ಬಾರಿ ನಿರ್ದೇಶಕರಾಗಿದ್ದಾರೆ.
ಇವರಿಗೆ ಬಾರಿ ಪೈಪೋಟಿ ನೀಡಿದ್ದ ಶಂಕ್ರಪ್ಪ ರಾಯನಾಳ 12 ಮತಗಳನ್ನು ಪಡೆದು ಪರಾಭವ ಅನುಭವಿಸಿದ್ದಾರೆ.


ತಾಲೂಕಾ ಕೃಷಿ ಉತ್ಪನ್ನ ಮಾರಾಟ ಸಂಘಗಳ ಕ್ಷೇತ್ರದಿಂದ ತಿರುಪತಿ ಅಜ್ಜನವರ 11 ಮತ ಪಡೆದು ಆಯ್ಕೆಯಾಗಿದ್ದರೆ, ಪ್ರತಿಸ್ಪರ್ಧಿ ಧರಿಯಪ್ಪಗೌಡ ಪಾಟೀಲ 7 ಮತಗಳನ್ನು ಪಡೆದಿದ್ದಾರೆ. ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಸಿ.ಎಂ. ಪಾಟೀಲ 38 ಮತಗಳನ್ನು ಗಿಟ್ಟಿಸಿ ಆಯ್ಕೆಯಾಗಿ, ಎರಡನೇ ಬಾರಿ ಬ್ಯಾಂಕ್ ಆಡಳಿತ ಮಂಡಳಿ ಸೇರಿದ್ದಾರೆ.ಇವರ ಪ್ರತಿಸ್ಪರ್ಧಿ ಶಂಕ್ರಮ್ಮ ಪಾಟೀಲ 36 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.


ಕಳೆದ ಸೆಪ್ಟೆಂಬರ 30 ರಂದು ಆಡಳಿತ ಮಂಡಳಿಯ 20 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಆದರೆ ವಿವಿಧ ಕಾರಣಗಳಿಂದ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿದ್ದರಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವಲಯದ ಕಲಘಟಗಿ, ಗದಗ, ನರಗುಂದ, ಶಿರಹಟ್ಟಿ ತಾಲೂಕಿನ ಕ್ಷೇತ್ರಗಳು, ತಾಲೂಕಾ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರ ಮತ್ತು ಇತರೆ ಸಹಕಾರ ಕ್ಷೇತ್ರ ಸೇರಿದಂತೆ ಒಟ್ಟು 6 ಕ್ಷೇತ್ರಗಳನ್ನು ಹೊರತುಪಡಿಸಿ 14 ಕ್ಷೇತ್ರಗಳ ಫಲಿತಾಂಶವನ್ನು
ಮಾತ್ರ ಘೋಷಿಸಲಾಗಿತ್ತು.ಇದೀಗ ನ್ಯಾಯಾಲಯದ ನಿರ್ದೇಶನದಂತೆ ನಾಲ್ಕು ಸ್ಥಾನಗಳ ಫಲಿತಾಂಶ ಘೋಷಿಸಲಾಗಿದೆ. ಇನ್ನೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ ನರಗುಂದ ಮತ್ತು ಶಿರಹಟ್ಟಿ ತಾಲೂಕುಗಳ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಹೀಗಾಗಿ ಇವುಗಳ ಫಲಿತಾಂಶ ಬಾಕಿ ಇದೆ. ನ್ಯಾಯಾಲಯದ ನಿರ್ದೇಶನ ಬಂದ ಬಳಿಕ ಇವೆರಡು ತಾಲೂಕುಗಳ ಫಲಿತಾಂಶ ಪ್ರಕಟಣೆಯಾಗಲಿವೆ.

administrator

Related Articles

Leave a Reply

Your email address will not be published. Required fields are marked *