ಹುಬ್ಬಳ್ಳಿ-ಧಾರವಾಡ ಸುದ್ದಿ

ಕೆಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ: ಫಲಿತಾಂಶ

ಗೆದ್ದವರ ಯಾರು? ಸೋತವರು ಯಾರು ಎಂದು ತಿಳಿಯಲು ಲಿಂಕ್ ಕ್ಲಿಕ್ ಮಾಡಿ

ಧಾರವಾಡ: ಅವಿಭಜಿತ ಧಾರವಾಡ ಜಿಲ್ಲೆಯ ಮಧ್ಯವರ್ತಿ ಬ್ಯಾಂಕ್ ಆದ ಇಲ್ಲಿನ ಕೆಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಶನಿವಾರ
ಇಲ್ಲಿನ ಮುರುಘಾಮಠದ ಶ್ರೀ ಮೃತ್ಯುಂಜಯ ಪ್ರೌಢಶಾಲೆಯ ಆವರಣದಲ್ಲಿ ನಡೆದ ಚುನಾವಣೆಯಲ್ಲಿ 11 ಕ್ಷೇತ್ರದಕ್ಕೆ ಅಭ್ಯರ್ಥಿಗಳು ಜಯಶಾಲಿಯಾಗಿದ್ದಾರೆ.

ಫಲಿತಾಂಶ ಈ ಕೆಳಗಿನಂತಿದೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ

ಸಿದ್ದಪ್ಪ ಸಪೂರಿ (ಧಾರವಾಡ)., ಜಿ.ಪಿ.ಪಾಟೀಲ (ರೋಣ)., ಲಿಂಗರಾಜ ಚಪ್ಪರದಹಳ್ಳಿ (ಹಿರೇಕೆರೂರ)., ನಾಗಪ್ಪ ಸಂಕದ (ನವಲಗುಂದ), 

ಕೊಟ್ರೇಶಪ್ಪ ಬಸೇಗಣ್ಣಿ (ಹಾವೇರಿ)., ಮಳ್ಳಪ್ಪ ನಿಂಗಜ್ಜನವರ (ರಾಣೆಬೆನ್ನೂರ)., ಸುಭಾಸ ಗಡೆಪ್ಪನವರ (ಸವಣೂರ)., ಚನ್ನಬಸಪ್ಪ ಹುಲ್ಲತ್ತಿ (ಬ್ಯಾಡಗಿ).

ಸದಾನಂದ ಮೆಳ್ಳಿಹಳ್ಳಿ (ಹಾನಗಲ್ಲ)., ಸಂಗಮೇಶ ಕಂಬಾಳಿಮಠ (ಶಿಗ್ಗಾಂವ)., ಪಟ್ಟಣ ಸಹಕಾರ ಬ್ಯಾಂಕ್ ಹಾಗೂ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ ನಿಂಗನಗೌಡ ಮರಿಗೌಡ್ರ.

ಮೂರು ಸ್ಥಾನಕ್ಕೆ ಅವಿರೋಧ ಆಯ್ಕೆಯಾದವರು: ಶಿವಕುಮಾರಗೌಡ ಪಾಟೀಲ( ಮುಂಡರಗಿ), ಮಲ್ಲಿಕಾರ್ಜುನ ಹೊರಕೇರಿ(ಹುಬ್ಬಳ್ಳಿ), ಯಲ್ಲಪ್ಪ ಹೆಬಸೂರ (ಕುಂದಗೋಳ).

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವಲಯದ ಕಲಘಟಗಿ, ಗದಗ, ನರಗುಂದ, ಶಿರಹಟ್ಟಿ ತಾಲೂಕಿನ ಕ್ಷೇತ್ರಗಳು, ತಾಲೂಕಾ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರ ಮತ್ತು ಇತರೆ ಸಹಕಾರ ಕ್ಷೇತ್ರ ಸೇರಿದಂತೆ ಒಟ್ಟು 6 ಕ್ಷೇತ್ರಗಳ ಕುರಿತು ನ್ಯಾಯಾಲಯದಲ್ಲಿ ಪ್ರಕರಣಗಳಿವೆ. ಹೀಗಾಗಿ ಇಂದು ಆರು ಕ್ಷೇತ್ರಗಳನ್ನು ಹೊರತುಪಡಿಸಿ 11 ಕ್ಷೇತ್ರಗಳ ಫಲಿತಾಂಶವನ್ನು ಮಾತ್ರ ಘೋಷಿಸಲಾಗಿದೆ ಎಂದು ಚುನಾವಣಾಧಿಕಾರಿಯೂ ಆದ ಉಪ ವಿಭಾಗಾಧಿಕಾರಿ ಶಾಅಲ ಹುಸೇನ ತಿಳಿಸಿದರು.

ತಹಶಿಲ್ದಾರ ಡಾ.ದೊಡ್ಡಪ್ಪ ಹೂಗಾರ, ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಮುನಿಯಪ್ಪ, ಪ್ರಧಾನ ವ್ಯವಸ್ಥಾಪಕ ಎಸ್.ವಿ.ಹೂಗಾರ, ಸಹಕಾರ ಸಂಘಗಳ ಉಪ ನಿಬಂಧಕ ನಿಂಗರಾಜ ಬೆಣ್ಣಿ ಸೇರಿದಂತೆ ಕಂದಾಯ, ಸಹಕಾರ ಇಲಾಖೆ ಮತ್ತು ಬ್ಯಾಂಕ್ ಸಿಬ್ಬಂದಿ ಚುನಾವಣಾ ಕರ್ತವ್ಯ ನಿರ್ವಹಿಸಿದರು.
ಸಿಪಿಐಗಳಾದ ದಯಾನಂದ ಶೇಗುಣಸಿ,ಎನ್.ಸಿ. ಕಾಡದೇವರ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಮಾಜಿ ಅಧ್ಯಕ್ಷರಾದ ಐ.ಎಸ್.ಪಾಟೀಲ ಮತ್ತು ಬಾಪುಗೌಡ ಪಾಟೀಲ ಪರಾಜಯಗೊಂಡರು.

ಸಂಭ್ರಮಾಚರಣೆ: ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಿಜೇತ ಅಭ್ಯರ್ಥಿಗಳನ್ನು ಹಾರ ಹಾಕಿ ಅಭಿನಂದಿಸಿದ ಬೆಂಬಲಿಗರು, ಪಟಾಕಿ ಸಿಡಿಸಿ ನಂತರ ಸಿಹಿ ವಿತರಿಸಿ ಸಂಭ್ರಮಿಸಿದರು.
ಶಾಸಕರು, ಮುಖಂಡರು; ಬ್ಯಾಂಕ್ ಚುನಾವಣೆಯಲ್ಲಿ ತಮ್ಮ ಬೆಂನಲಿಗರನ್ನು ಗೆಲ್ಲಿಸುವ ಸಲುವಾಗಿ ಅನೇಕ ಶಾಸಕರು, ಮಾಜಿ ಶಾಸಕರು ಮತ್ತು ರಾಜಕೀಯ ಮುಖಂಡರು ಚುನಾವಣೆ ನಡೆಯುತಿದ್ದ ಮುರುಘಾಮಠದ ಬಳಿ ಕಾಣಿಸಿಕೊಂಡರು.
ಸಿ.ಸಿ.ಪಾಟೀಲ, ಅರುಣ ಪೂಜಾರ, ಜಿ.ಎಸ್.ಪಾಟೀಲ, ಎನ್.ಎಚ್.ಕೋನರಡ್ಡಿ ಮುಂತಾದವರು ಇದ್ದರು.

administrator

Related Articles

Leave a Reply

Your email address will not be published. Required fields are marked *