ಎಲ್ಲ ಶಿಕ್ಷಕರ ಸಂಘಟನೆಯಿಂದ ಗುರಿಕಾರಗೆ ಬೆಂಬಲ: ಕುಬೇರಪ್ಪ
ಹುಬ್ಬಳ್ಳಿ: 42 ವರ್ಷಗಳಿಂದ ಶಿಕ್ಷಕರ ಸಮಸ್ಯೆಗಳು ಜೀವಂತವಾಗಿದ್ದು, ಸದ್ಯ ಜಾರಿಯಾಗಬೇಕಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಶಿಕ್ಷಕರ ಸಂಘಟನೆಗಳು ಈ ಬಾರಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಬೆಂಬಲ ಸೂಚಿಸಿವೆ ಎಂದು ಕಾಂಗ್ರೆಸ್ ಮುಖಂಡ ಆರ್.ಎಂ. ಕುಬೇರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 42 ವರ್ಷಗಳಿಂದ ಶಿಕ್ಷಕರ ಸಮಸ್ಯೆಗಳು ಜೀವಂತವಾಗಿವೆ. ಆದರೆ ಈ ಬಾರಿಯ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿ ೮ನೇ ಬಾರಿ ಗಿನ್ನಿಸ್ ರಿಕಾರ್ಡ್ ಮಾಡಲಿಕ್ಕೆ ಮತ ನೀಡಿ ಎಂದು ಹೇಳುತ್ತಿದ್ದಾರೆ. ಅವರದ್ದು ರೆಕಾರ್ಡ್ ಆದರೇ ನಮ್ಮ ಹೊಟ್ಟೆ ಬರಿದಾಗುತ್ತದೆ ಎಂದು ಕಿಡಿಕಾರಿದರು.
ಬಹಳಷ್ಟು ಶಿಕ್ಷಕರು ಸಮಸ್ಯೆಯಿಂದ ಕಣ್ಣೀರು ಹಾಕುತ್ತಿದ್ದಾರೆ, 42 ವರ್ಷ ಶಿಕ್ಷಕರ ಕಲ್ಯಾಣಕೋಸ್ಕರ ಕೆಲಸ ಮಾಡಿ ಈ ಬಾರಿಯ ೮ನೇ ಚುನಾವಣೆ ಯಲ್ಲಿ ಸರ್ಕಾರದ ಜೊತೆಗೆ ಮಾತನಾಡುತ್ತೇನೆ ಎಂಬ ಹೇಳಿಕೆ ನೀಡುವುದು ಎಷ್ಟರಮಟ್ಟಿಗೆ ಸರಿ ಎಂದು ಹೊರಟ್ಟಿ ಅವರಿಗೆ ಪ್ರಶ್ನಿಸಿದರು.
ಸಾವಿರಾರು ಶಿಕ್ಷಕರು ಪಿಂಚಣಿಯಿಂದ ವಂಚಿತಗೊಂಡಿದ್ದಾರೆ, ಅತಿಥಿ ಶಿಕ್ಷಕರು ಸಮಸ್ಯೆ ಸೇರಿದಂತೆ ಶಿಕ್ಷಕರ ಸಮಸ್ಯೆಗಳು ಬಗೆಹರಿಯದೇ ಇರುವಾಗ ಯಾವ ರೀತಿ ಮತ ಹಾಕಬೇಕು ಎಂಬುದು ಸದ್ಯ ಸಮಸ್ತ ಶಿಕ್ಷಕರ ಪ್ರಶ್ನೆ ಯಾಗಿದೆ. ಪದವೀಧರ ಶಿಕ್ಷಕರು ಈ ಬಾರಿ ಬದಲಾವಣೆ ಬಯಸಿದ್ದು, ಈ ಬಾರಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರನ್ನು ಆಯ್ಕೆ ಮಾಡಿ, ವಿಧಾನ ಪರಿಷತ್ ಗೆ ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಶಿಕ್ಷಕ ಮತದಾರರಿಗೆ ಮನವಿ ಮಾಡಿದರು.
ಇನ್ನೂ ಶಿಕ್ಷಕರ ಸಂಘಟನೆ, ಉಪನ್ಯಾಸರ ಸಂಘ, ಅತಿಥಿ ಉಪನ್ಯಾಸಕರ ಸಂಘ, ಎಲ್ಲಾ ಶಿಕ್ಷಕರ ಸಮುದಾಯ ಹಾಗೂ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುರ್ಲೆ ಮತ್ತು ಹನುಮಂತಪ್ಪ ಗುರಿಕಾರ ಅವರು ಬೆಂಬಲ ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ಎಲ್ಲಾ ಶಿಕ್ಷಕ ಮತದಾರರು ಬದಲಾವಣೆ ಬಯಸಿದ್ದೇ ಎಂದು ಕುಬೇರಪ್ಪ ತಿಳಿಸಿದರು.
ಗೋಷ್ಠಿಯಲ್ಲಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುರ್ಲೆ, ಶ್ರೀಧರ ರೆಡ್ಡಿ ಉಪಸ್ಥಿತರಿದ್ದರು.