ಹುಬ್ಬಳ್ಳಿ-ಧಾರವಾಡ ಸುದ್ದಿ

ಹು.ಧಾ ನೂತನ ಡಿಸಿಪಿಯಾಗಿ ಕುಶಾಲ ಚೌಕ್ಷೆ ನೇಮಕ

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ನೂತನ ಡಿಸಿಪಿಯಾಗಿ ಕುಶಾಲ ಚೌಕ್ಷೆ ನಿಯುಕ್ತಿಗೊಂಡಿದ್ದಾರೆ. ಸದ್ಯ ಬೆಂಗಳೂರಿನ ವಿಧಿ ವಿಜ್ಞಾನ ವಿಭಾಗದ ವಿಭಾಗದ ಜಂಟಿ ನಿರ್ದೇಶಕರಾಗಿರುವ 2018ನೇ ಬ್ಯಾಚಿನ ಕರ್ನಾಟಕ ಕೇಡರ್ ಅಧಿಕಾರಿಯಾಗಿದ್ದು ಇವರನ್ನು ನೇಮಕ ಮಾಡಿ ಸರ್ಕಾರ ಇಂದು ಆದೇಶ ಹೊರಡಿಸಿದೆ.


ರಾಜ್ಯ ಗೃಹ ಸಚಿವರು ಇಂದು ಹುಬ್ಬಳ್ಳಿಗೆ ಆಗಮಿಸುತ್ತಿದ್ದು ಅದಕ್ಕೂ ಮೊದಲೆ ಈ ನೇಮಕವಾಗಿದೆ. ಅಂಜಲಿ ಕೊಲೆ ಪ್ರಕರಣದಲ್ಲಿ ಪೊಲೀಸ್ ವೈಫಲ್ಯದ ಹಿನ್ನೆಲೆಯಲ್ಲಿ ಮೊದಲು ಬೆಂಡಿಗೇರಿ ಠಾಣೆಯ ಇನ್ಸ್‌ಪೆಕ್ಟರ್ , ಮುಖ್ಯ ಪೇದೆ ಅಮಾನತಿನ ನಂತರ ಡಿಸಿಪಿ ರಾಜೀವರನ್ನು ಅಮಾನತುಗೊಳಿಸಲಾಗಿತ್ತು.ಅಮಾನತುಗೊಂಡಿರುವ ರಾಜೀವ ಸ್ಥಾನದಲ್ಲಿ ಚೌಕ್ಸೆಯವರನ್ನು ಸರ್ಕಾರ ನೇಮಕ ಮಾಡಿದೆ.

administrator

Related Articles

Leave a Reply

Your email address will not be published. Required fields are marked *