ಹೊಸಕೇರಿ, ಪಟ್ಟಣಶೆಟ್ಟಿ, ಹಲಗತ್ತಿ, ಭಾವಿಕಟ್ಟಿ, ಕುಂಬಿ ಮುನ್ನಡೆ
ಧಾರವಾಡ: ಶತಮಾನದ ಇತಿಹಾಸ ಹೊಂದಿರುವ ಕರ್ನಾಟಕ ವಿದ್ಯಾವರ್ಧಕ ಸಂಘದ ನೂತನ ಆಡಳಿತ ಮಂಡಳಿಯ ಆಯ್ಕೆಗೆ ನಿನ್ನೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆದಿದ್ದು, ಅಧ್ಯಕ್ಷರಾಗಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಚುಕ್ಕಾಣಿ ಹಿಡಿಯುವುದು ನಿಶ್ಚಿತವಾಗಿದೆ.
ಉಳಿದಂತೆ ಮಾಲತಿ ಪಟ್ಟಣಶೆಟ್ಟಿ ಹಾಗೂ ಶಂಕರ ಹಲಗತ್ತಿ ನೇತೃತ್ವದ ಸಮಾನ ಮನಸ್ಕರ ವೇದಿಕೆ ತಂಡ ಉಳಿದ ಬಹುತೇಕ ಸ್ಥಾನಗಳಲ್ಲಿ ಮೇಲುಗೈ ಸಾಧಿಸಿದೆ.
ಪ್ರಾಥಮಿಕ ಏಣಿಕೆಯ ವರದಿಯಂತೆ ಅಧ್ಯಕ್ಷ ಹುದ್ದೆಗೆ ಅಖಾಡಾಕ್ಕಿಳಿದಿದ್ದ ಚಂದ್ರಕಾಂತ ಬೆಲ್ಲದ ಕ್ಲೀನ್ ಸ್ವೀಪ್ ಮಾಡಿದ್ದು ಉಳಿದವರು ಲೆಕ್ಕಕ್ಕಿಲ್ಲವಾಗಿದ್ದಾರೆ.
ಕಾರ್ಯಾಧ್ಯಕ್ಷ ಸ್ಥಾನದಲ್ಲಿ ಬಸವಪ್ರಭು ಹೊರಕೇರಿ ಉಪಾಧ್ಯಕ್ಷ ಹುದ್ದೆಗೆ ಮಾಲತಿ ಪಟ್ಟಣಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಶಂಕರ ಹಲಗತ್ತಿ, ಖಜಾಂಚಿ ಹುದ್ದೆಗೆ ಶಿವಾನಂದ ಭಾವಿಕಟ್ಟಿ ಇವರುಗಳು ಮುನ್ನಡೆ ಸಾದಿಸಿದ್ದಾರೆ. ಸಹ ಕಾರ್ಯದರ್ಶಿ ಹುದ್ದೆಗೆ ಮಾತ್ರ ಬೆಲ್ಲದ ಬಣದ ಶಂಕರ ಕುಂಬಿ ಬಹುತೇಕ ಗೆಲುವಿನಂಚಿಗೆ ಬಂದಿದ್ದಾರೆ.
ಕಾರ್ಯಕಾರಿ ಸಮಿತಿಗೆ ಡಾ. ಶೈಲಜಾ ಅಮರಶೆಟ್ಟಿ, ಈ ಹಿಂದೆ ಸೇವೆ ಸಲ್ಲಿಸಿರುವ ನ್ಯಾಯವಾದಿ ಗುರು ಹಿರೇಮಠ, ಸಂಜೀವ ಕುಲಕರ್ಣಿ,ಮಹೇಶ ಹೊರಕೇರಿ,ಜಿನದತ್ತ ಹಡಗಲಿ, ವೀರಣ್ಣ ಒಡ್ಡಿನ,ಮಹಿಳಾ ಮೀಸಲಿನಲ್ಲಿ ವಿಶ್ವೇಶ್ವರಿ ಹಿರೇಮಠ ಇವರುಗಳು ಮುನ್ನಡೆಯಲ್ಲಿದ್ದಾರೆನ್ನಲಾಗಿದೆ.ಹಾಗೂ ಎಸ್ ಸಿಎಸ್ ಟಿ ಮೀಸಲಾತಿಯಲ್ಲಿ ಬಿ.ಮಾರುತಿ ಗೆಲುವು ಖಚಿತವಾಗಿದೆ.