ಮಕ್ಕಳ ಬಸ್ಸಿನ ಸಮಸ್ಯೆಗೆ ಕಿವಿಯಾದ ಉಸ್ತುವಾರಿ ಸಚಿವ
ಕುಂದಗೋಳ: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಇಂದು ಮಳೆಯಿಂದ ಹಾನಿಗೊಳಗಾದ ಕುಂದಗೋಳ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅತಿವೃಷ್ಟಿ ಹಾನಿಯ ಪರಿಶೀಲನೆ ನಡೆಸಿದರು.
ಶೆರೆವಾಡ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ಹನುಮಂತಪ್ಪ ಮತ್ತಿಗಟ್ಟಿಯವರ ಮನೆಗೆ ತೆರಳಿ ಪರಿಶೀಲಿಸಿದರಲ್ಲದೇ ಬೆಟದೂರಿನ ಸಮೀಪದ ಫಕ್ಕೀರಪ್ಪ ಅವರ ಹೊಲಕ್ಕೆ ಭೇಟಿ ನೀಡಿ ಕೃಷಿ ಇಲಾಖೆಯ ಅಧಿಕಾರಿ ಭಾರತಿ ಮೆಣಸಿನಕಾಯಿ ಅವರಿಂದ ಮಾಹಿತಿ ಪಡೆದುಕೊಂಡರು. ಸರಿಯಾದ ರೀತಿಯಲ್ಲಿ ಕೃಷಿ ಬೆಳೆಗಳ ಕುರಿತು ವರದಿ ಮಾಡಬೇಕು. ಅನಗತ್ಯ ಮಾಹಿತಿ ನೀಡಬೇಡಿ ಖಡಕ್ಕಾಗಿ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಉಪವಿಭಾಗಾಧಿಕಾರಿ ಅಶೋಕ ತೇಲಿ, ಮಾಜಿ ಶಾಸಕರಾದ ಎಂ ಎಸ್ ಅಕ್ಕಿ, ಕುಸುಮಾವತಿ ಶಿವಳ್ಳಿ, ಮುಖಂಡರಾದ ಅನಿಲಕುಮಾರ ಪಾಟೀಲ, ನಾಗರಾಜ ಗೌರಿ, ಚಂದ್ರು ಜುಟ್ಟಲ, ದಾನಪ್ಪ ಗಂಗಾಯಿ ಸೇರಿದಂತೆ ಹಲವರಿದ್ದರು.
ಕುಂದಗೋಳಕ್ಕೆ ತೆರಳುವ ಮಾರ್ಗದಲ್ಲಿ ಶರೇವಾಡ ಗ್ರಾಮದ ನೂರಾರು ವಿದ್ಯಾರ್ಥಿಗಳು ನಿಂತಿರುವುದನ್ನು ಕಂಡು ಕಾರು ನಿಲ್ಲಿಸಿ ಮಕ್ಕಳ ಬಳಿ ತೆರಳಿ ಅವರ ಸಮಸ್ಯೆ ಆಲಿಸಿದರು. ಅಲ್ಲದೇ ಬಸ್ಸಿನ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಭರವಸೆ ನೀಡಿ ಮಕ್ಕಳಿಗೆ ಒಂದು ಸೆಲ್ಹೂಟ್ ಹೊಡೆದ ಸಚಿವ ಲಾಡ್, ಚೆನ್ನಾಗಿ ಓದಬೇಕು ಎಂದು ಹೇಳಿ ಮಳೆ ಹಾನಿ ಪ್ರದೇಶದತ್ತ ತೆರಳಿದರು.
ಕುಂದಗೋಳದಿಂದ ಬರುವ ಬಸ್‌ಗಳು ತುಂಬಿಕೊಂಡು ಬರುತ್ತವೆ. ಬೆಳಿಗ್ಗೆ ಮತ್ತು ಸಂಜೆ ಶಾಲೆಗೆ ತೆರಳಲು ಹಾಗೂ ಮರಳಿ ಬರಲು ಹೆಚ್ಚಿನ ಬಸ್ ವ್ಯವಸ್ಥೆ ಮಾಡಬೇಕು ಎಂದು ಶಾಸಕರಾದ ಎಂ.ಆರ್.ಪಾಟೀಲ ಸಹ ಮನವಿ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಾರಿಗೆ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಲಿದ್ದಾರೆ ಎಂದು ಭರವಸೆ ನೀಡಿದರು.