ಹುಬ್ಬಳ್ಳಿ-ಧಾರವಾಡ ಸುದ್ದಿ

ಹೆಣ್ಣು ಬಾಳಿನ ಕಣ್ಣು

ಶಿರೂರು(ತಾ.ನವಲಗುಂದ): ಇಲ್ಲಿಯ ಶ್ರೀ ಎಂ.ಜಿ.ಬಾಳನಗೌಡ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತರರಾಷ್ಟ್ರೀಯ ಹಣ್ಣುಗಳ ತರಕಾರಿಗಳ ವರ್ಷಾಚರಣೆ ಜತೆ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.
ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಧಾರವಾಡ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಲಾ ಮುಖ್ಯ ಶಿಕ್ಷಕಿ ಭಾಗ್ಯಜ್ಯೋತಿ ಕೋಟಿಮಠ ಮಾತನಾಡಿ, ಹೆಣ್ಣು ಬಾಳಿನ ಕಣ್ಣು. ಊಟ ಎಂದರೆ ಕೆವಲ ಎಲೆಯಲ್ಲಿನ ಉಪ್ಪು ಅಥವಾ ಅನ್ನವಲ್ಲ. ಅಲ್ಲಿ ವಿವಿಧ ತರಹದ ಪಲ್ಲೆಗಳು ಚಟ್ನಿಗಳು, ಸಿಹಿ ತಿನಿಸುಗಳು ಮುಂತಾದವು ಇರುತ್ತವೆ. ಅವೆಲ್ಲವನ್ನ ಮಹಿಳೆಯರು ಪರಿಪೂರ್ಣವಾಗಿ ಬಳಸುತ್ತಾರೆ. ಅದೇ ನಮ್ಮ ಮಹಿಳೆಯರ ವ್ಯಕ್ತಿತ್ವ. ಅದಕ್ಕಾಗಿ ಇಲ್ಲಿ ನೆರೆದಿರುವ ತಾಯಂದಿರಿಗೆ ಹಣ್ಣು ತರಕಾರಿ ಮಹತ್ವವನ್ನು ಈ ಕಾರ್ಯಾಗಾರದಲ್ಲಿ ತಿಳಿಸಲಾಗುವುದು ಎಂದರು.
’ಮಹಿಳಾ ದಿನಾಚರಣೆ’ ಅಂದರೆ, ಮಹಿಳೆ ತನ್ನ ಅಸ್ಮಿತೆಯನ್ನು ಗುರುತಿಸುವುದು ತನ್ನ ಅಸ್ತಿತ್ವವನ್ನು ಮತ್ತೊಬ್ಬರಿಗೆ ತೋರಿಸಿ ಕೊಡತಕ್ಕಂತಹ ಕೆಲಸವನ್ನು ಮಾಡುವುದು ಮಹಿಳಾ ದಿನಾಚರಣೆಯ ಉದ್ದೇಶ ಎಂದು ಹೇಳಿದರು.
ತೋಟಗಾರಿಕೆ ಉಪನಿರ್ದೇಶಕ ಕಾಶಿನಾಥ ಭದ್ರಣ್ಣವರ ಕಾರ್ಯಕ್ರಮ ಉದ್ಘಾಟಿಸಿದರು.
ನವಲಗುಂದ ಬಿಇಒ ಬಸವರಾಜ್ ಮಾಯಾಚಾರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಜಯಲಕ್ಷ್ಮಿ ಮಾಯಾಚಾರ, ವಿಜ್ಞಾನ ವಿಷಯದ ಪರಿವೀಕ್ಷಕರಾದ ಸಂಜಯ ಮಾಳಿ, ಶೋಭಾ ಮಾಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬನಪ್ಪ ಗೌಡ ಗೌಡ್ರ, ಭೂ ದಾನಿಗಳಾದ ಶಂಕರಗೌಡ ಬಾಳನ ಗೌಡ್ರ , ಈರಣ್ಣ ಕಡೆಮನಿ, ಮಹಾಂತೇಶ ಬೆನಕಣ್ಣವರ, ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಲಕ್ಷ್ಮಣ ಕುಕನೂರ, ಸುಮಂಗಲಾ ಬಾದಾಮಿ ಇದ್ದರು.
ಡಾ. ಲಿಂಗರಾಜ ರಾಮಪುರ, ಶಿಕ್ಷಕರಾದ ಪ್ರಭುಲಿಂಗ ನರೇಗಲ್ಲ, ಸಿದ್ದು ಮಾದರ, ಶ್ರೀಕಾಂತಗೌಡ ಗೌಡ್ರ, ಲಲಿತಾ ಆಕ್ಷಿ ಯಮುನಾಳ, ಸುಮಂಗಲಾ ಪಾರ್ವತಿ, ದೇವಕಿ ಕನ್ನೂರ, ಭಾಗಿರತಿ ಮಳಲಿ, ಡಾ.ಆಶಾ ಇದ್ದರು. ಗ್ರಾಮದ ಶಂಕ್ರಪ್ಪ ಯಮನೂರು, ಪಕೀರಗೌಡ ಪಾಟೀಲ ಸೇರಿದಂತೆ ಇತರರಿದ್ದರು.
ವಿದ್ಯಾರ್ಥಿಗಳ ಮಾತೆಯರು ಕೂಡ ಭಾಗವಹಿಸಿದ್ದರು. ಶಿವಾನಂದ ನಾಗುರ ನಿರೂಪಿಸಿದರು. ಪ್ರೀತಿ ನಾಯಕ ಸ್ವಾಗತಿಸಿದರು. ಮಹಾಂತೇಶ ಶಾಂತಿಗಿರಿ ಪ್ರಾರ್ಥಿಸಿದರು. ಗ್ರಾಮ ಪಂಚಾಯತ್ ಸಿಬ್ಬಂದಿ, ನದಾಫ, ಗೋಕಾವಿ, ಬಳಿಗೆರೆ, ಮಡಿವಾಳರ, ವಿದ್ಯಾರ್ಥಿಗಳು, ಗುಮ್ಮಗೋಳ ಶಿಕ್ಷಕಿಯರು ಹಾಜರಿದ್ದರು.

ಧಾರವಾಡದ ವಿದ್ಯಾಗಿರಿಯಲ್ಲಿರುವ ಜೆ.ಎಸ್.ಎಸ್ ಸಂಸ್ಥೆಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮಹಿಳಾ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಾಂಪ್ರದಾಯಿಕ ಭಾರತೀಯ ಉಡುಗೆ ಧರಿಸಿ ಸಂಭ್ರಮಿಸಿದರು.

 

ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವಾದ ಇಂದು ತುತ್ತು ಹೊತ್ತಿನ ಗಂಜಿಗಾಗಿ ಜಮಖಾನ ನೇಯುತ್ತಿರುವ ನವಲಗುಂದ ಪಟ್ಟಣದ ಮಹಿಳಾ ಕಾರ್ಮಿಕರು.

 

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತದ ಸಂಭ್ರಮದಲ್ಲಿ ಧಾರವಾಡದ ಸಾಯಿ ಡೆವಲಪ್ಪರ್ಸ್ ಸಂಸ್ಥೆ ಸಿಬ್ಬಂದಿ.
administrator

Related Articles

Leave a Reply

Your email address will not be published. Required fields are marked *