ಹುಬ್ಬಳ್ಳಿ-ಧಾರವಾಡ ಸುದ್ದಿ

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಹೂಗಾರ , ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಕುಂದರಗಿ ಪುನರಾಯ್ಕೆ

ಹುಬ್ಬಳ್ಳಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಧಾರವಾಡ ಜಿಲ್ಲಾ ಘಟಕದ ಚುನಾವಣೆಯಲ್ಲಿ ಸಂಜೆ ದರ್ಪಣದ ಕಾರ್ಯನಿರ್ವಾಹಕ ಸಂಪಾದಕ ಲೋಚನೇಶ ಹೂಗಾರ ಅಧ್ಯಕ್ಷರಾಗಿ ಗೆಲುವಿನ ನಗೆ ಬೀರಿದ್ದಾರೆ.
ಕಳೆದ ದಿ. 27ರಂದು ನಡೆದ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು 314 ಮತಗಳ ಪೈಕಿ 161 ಮತಗಳನ್ನು ಪಡೆದು ಅವರು ವಿಜಯಿಯಾದರೆ, ಪ್ರಧಾನ ಕಾರ್ಯದರ್ಶಿಯಾಗಿ ಸಂಯುಕ್ತ ಕರ್ನಾಟಕದ ಹಿರಿಯ ವರದಿಗಾರ ಸುಶಿಲೇಂದ್ರ ಕುಂದರಗಿ 163 ಮತಗಳನ್ನು ಪಡೆದು ಪುನರಾಯ್ಕೆಯಾದರು.


ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಸಂಜೆ ದರ್ಪಣ ಸಂಪಾದಕ ಗಣಪತಿ ಗಂಗೊಳ್ಳಿ, ಉಪಾಧ್ಯಕ್ಷರಾಗಿ ಡೆಕ್ಕನ್ ಹೆರಾಲ್ಡಿನ ಬಸವರಾಜ ವಿಜಾಪುರ, ವಿಜಯವಾಣಿಯ ಜಗದೀಶ ಬುರ್ಲಬಡ್ಡಿ, ಸಂಯುಕ್ತ ಕರ್ನಾಟಕದ ತನುಜಾ ನಾಯ್ಕ

ಕಾರ್ಯದರ್ಶಿಗಳಾಗಿ ನ್ಯೂಸ್ ಫಸ್ಟ್‌ನ ಪ್ರಕಾಶ ನೂಲ್ವಿ, ವಿಜಯ ಕರ್ನಾಟಕದ ಡಾ.ವಿರೇಶ ಹಂಡಗಿ, ಕುಂದಗೋಳದ ಅಶೋಕ ಘೋರ್ಪಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಉದಯವಾಣಿ ವರದಿಗಾರ ಬಸವರಾಜ ಹೂಗಾರ 159 ಮತ ಪಡೆದು ಜಯ ಸಾಧಿಸಿದರು.

ಕಾರ್ಯಕಾರಿ ಸಮಿತಿ 15 ಸ್ಥಾನಗಳಿಗೆ 28 ಅಭ್ಯರ್ಥಿಗಳು ಕಣದಲ್ಲಿದ್ದರು. ಅಂತಿಮವಾಗಿ ಪ್ರಜಾವಾಣಿಯ ಓದೇಶ ಸಕಲೇಶಪುರ(234), ಕನ್ನಡ ಪ್ರಭದ ಶಿವಾನಂದ ಗೊಂಬಿ (210), ವಿಜಯ ಕರ್ನಾಟಕದ ಕಾಶಪ್ಪ ಕರದಿನ(194), ವಿಜಯವಾಣಿಯ ಕೇಶವಮೂರ್ತಿ ಬೇಲೂರಪ್ಪನವರ (194), ಪಬ್ಲಿಕ್ ಟಿವಿಯ ನಾರಾಯಣಗೌಡ (187), ಟೈಮ್ಸ ಆಪ್ ಇಂಡಿಯಾದ ಸಂಗಮೇಶ ಮೆಣಸಿನಕಾಯಿ (187), ಟವಿ9 ನ ದತ್ತಾತ್ರೇಯ ಪಾಟೀಲ(185), ಸಂಯುಕ್ತ ಕರ್ನಾಟಕದ ಪ್ರಕಾಶ ಚಳಗೇರಿ(185), ವಿಜಯ ಕರ್ನಾಟಕದ ಮಲ್ಲಿಕಾರ್ಜುನ ಬಾಳನಗೌಡರ (184), ವಿಜಯವಾಣಿಯ ಗುರು ಭಾಂಡಗೆ (179), ವಿಜಯ ಕರ್ನಾಟಕದ ಬಂಡು ಕುಲಕರ್ಣಿ(179), ಟಿವಿ 5ದ ಯಲ್ಲಪ್ಪ ಸೋಲಾರಗೊಪ್ಪ(189), ಹೊಸ ದಿಗಂತದ ಮಂಜುನಾಥ ಜರತಾರಘರ(163), ಸಂಜೆ ದರ್ಪಣದ ಪ್ರಸನ್ನ ಹಿರೇಮಠ (154), ಬಿಟಿವಿಯ ಮೆಹಬೂಬ್ ಮುನವಳ್ಳಿ(148) ಗೆಲುವಿನ ದಡ ತಲುಪಿದರು.

ಪತ್ರಕರ್ತರ ಭವನದಲ್ಲಿ ಚುನಾವಣಾಧಿಕಾರಿ ಪಿ.ಎಸ್.ಪರ್ವತಿ, ಸಹಾಯಕ ಚುನಾವಣಾಧಿಕಾರಿ ಸಿ.ಪಿ.ಮಾಯಾಚಾರಿ, ವೀಕ್ಷಕರಾಗಿ ಆಗಮಿಸಿದ್ದ ಕಾರ್ಮಿಕ ಇಲಾಖೆ ಅಧಿಕಾರಿ ವಿನಾಯಕ ಪ್ರಕ್ರಿಯೆ ನಡೆಸಿಕೊಟ್ಟರು.
ಫಲಿತಾಂಶ ಘೋಷಣೆಗೆ ಹೈಕೋರ್ಟ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಅಧಿಕೃತ ಘೋಷಣೆ ಆಗಿಲ್ಲವಾಗಿದ್ದು, ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶ ಹೈಕೋರ್ಟಗೆ ಸಲ್ಲಿಸಿದ್ದು, ನ್ಯಾಯಾಲಯ ಅನುಮತಿ ನಂತರ ಅಧಿಕೃತವಾಗಿ ಪ್ರಕಟಗೊಳ್ಳಲಿದೆ.

administrator

Related Articles

Leave a Reply

Your email address will not be published. Required fields are marked *