Skip to content
ಅಧಿಕಾರಿಗಳಿಬ್ಬರು ಕೂದಲೆಳೆ ಅಂತರದಲ್ಲಿ ಪಾರು
ಹುಬ್ಬಳ್ಳಿ: ಹುಬ್ಬಳ್ಳಿ ಹೊರವಲಯದ ರಿಂಗ್ ರೋಡ್‌ನಲ್ಲಿರುವ ಮಂಟೂರ ಕ್ರಾಸ್ ಬಳಿ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಜಾಗೃತಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿಯೇ ಇಂದು ಬೆಳಿಗ್ಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಚಾಲಕ ಸ್ಥಳದಲ್ಲಿ ಸಾವಿಗೀಡಾಗಿದ್ದಾನೆ.
ಇಲಾಖೆಯ ವಾಹನದಲ್ಲಿದ್ದ ಸಹಾಯಕ ಆಯುಕ್ತ ಶ್ರೀಶೈಲ ದೊಡ್ಡಮನಿ ಹಾಗೂ ಇಲಾಖೆಯ ಇನ್ಸಪೆಕ್ಟರ್ ಈಶ್ವರ ಸುಧೆ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ಸಾರೆ.

ಪ್ರತಿನಿತ್ಯದಂತೆ ಇಂದೂ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಲಾರಿಯೊಂದರ ಪತ್ರಗಳನ್ನ ನೋಡಲು ವಾಹನ ನಿಲ್ಲಿಸಲಾಗಿತ್ತು. ಮುಂದೆ ನಿಂತಿದ್ದ ಲಾರಿ ಚಾಲಕನ ಬಳಿ ಪತ್ರಗಳನ್ನ ಪಡೆಯಲು ಇಲಾಖೆಯ ಚಾಲಕ, ಅಮರಗೋಳದ ನಿವಾಸಿ ಮಹ್ಮದರಫೀಕ ಅಬ್ದುಲ್ ಸಾಹೇಬ್ ನದಾಫ (೩೪) ಕೆಳಗಿಳಿದು ನಿಂತಿದ್ದಾರೆ. ಅದೇ ಸಮಯದಲ್ಲಿ ಲಾರಿಯೊಂದು ಬಂದು ಇವರಿಗೆ ಡಿಕ್ಕಿ ಹೊಡೆದು ಮುಂದಿನ ಲಾರಿಗೂ ಗುದ್ದಿದೆ.

ಸ್ಥಳಕ್ಕೆ ಸಂಚಾರ ಡಿಸಿಪಿ ಗೋಪಾಲ ಬ್ಯಾಕೋಡ, ಎಸಿಪಿ ವಿನೋದ ಮುಕ್ತೆದಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ದಕ್ಷಿಣ ಸಂಚಾರಿ ಠಾಣೆಯ ಪಿಎಸ್‌ಐ ರಮಜಾನ ನದಾಫ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.