ಹುಬ್ಬಳ್ಳಿ-ಧಾರವಾಡ ಸುದ್ದಿ
ಮೊದ್ಲು ನೀರಿನ ಸಮಸ್ಯೆ ಬಗೆಹರಿಸಲು ಕೈ ಸದಸ್ಯರ ಪಟ್ಟು

ಮೊದ್ಲು ನೀರಿನ ಸಮಸ್ಯೆ ಬಗೆಹರಿಸಲು ಕೈ ಸದಸ್ಯರ ಪಟ್ಟು

ಯೋಜನೆ ಪರಿಚಯ ಓಕೆ .. ಐಷಾರಾಮಿ ಹೊಟೆಲ್‌ಗಳಲ್ಲಿ ಏಕೆ!

ಹುಬ್ಬಳ್ಳಿ : ಅವಳಿನಗರದಲ್ಲಿ ಅನುಷ್ಠಾನಗೊಳ್ಳುತ್ತಿರುವ ನಿರಂತರ ನೀರು ಪೂರೈಕೆ ಯೋಜನೆ ಕುರಿತು ಪರಿಚಯಿಸಲು ನಗರದ ನವೀನ ಹೊಟೆಲ್‌ನಲ್ಲಿ ನಡೆದ ಸಭೆಯಲ್ಲಿ ನೀರು, ನೌಕರರ ಸಮಸ್ಯೆ ಬಗೆಹರಿಸಲು ವಿಪಕ್ಷ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದ ಪರಿಣಾಮ ಪಾಲಿಕೆಯ ಮೊದಲ ಸರ್ವ ಸದಸ್ಯರ ಸಭೆಯನ್ನು ನೀರಿನ ಸಮಸ್ಯೆ ಚರ್ಚೆ ಮಾಡಲು ಮೀಸಲಿಡಲು ನಿರ್ಧರಿಸಲಾಯಿತು.


ಅವಳಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದ್ದು, ಈಗಾಗಲೇ ಯೋಜನೆ ಕುರಿತು ಸಮೀಕ್ಷೆ ನಡೆಸಲಾಗಿದ್ದು ಬರೇ ಮನವರಿಕೆ ಮಾಡುವ ಕಣ್ಣೊರೆಸುವ ತಂತ್ರ ಬೇಡ. ಒಮ್ಮೊಮ್ಮೆ ಹದಿನೈದು ದಿನಕ್ಕೊಮ್ಮೆ ನೀರು ಸರಭರಾಜಾಗುತ್ತಿದ್ದು ವಾಲ್ವಮನ್‌ಗಳ ಸಮಸ್ಯೆ ನಿವಾರಿಸಲು ಕಾಂಗ್ರೆಸ್ ಸದಸ್ಯರುಗಳಾದ ಸುವರ್ಣಾ ಕಲಕುಂಟ್ಲ, ಆರೀಪ ಭದ್ರಾಪುರ, ಇಕ್ಬಾಲ್ ನವಲೂರ, ಸೆಂದಿಲ್ ಕುಮಾರ, ಮಂಜು ಬಟಕುರ್ಕಿ, ದೀಪಾ ನೀರಲಕಟ್ಟಿ ಮುಂತಾದವರು ಆಕ್ರೋಶ ವ್ಯಕ್ತಪಡಿಸಿದರಲ್ಲದೇ ವಾರ್ಡಗಳಲ್ಲಿನ ವಾಸ್ತವ ಬಿಚ್ಚಿಟ್ಟರು.


ಯೋಜನೆ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ಎಲ್ ಆಂಡ್ ಟಿ ಕಂಪನಿಯವರಿಗೆ ನೀರಿನ ಸಮಸ್ಯೆ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯೇ ಇಲ್ಲ. ಅಲ್ಲದೇ ದೂರವಾಣಿ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ ಈ ಬಗ್ಗೆ ಮೇಯರ್ ನಿಲುವು ಪ್ರಕಟಿಸಲು ಹೇಳಿದಾಗ ಬರುವ ದಿ.೩೦ರಂದು ಪಾಲಿಕೆ ಸಾಮಾನ್ಯ ಸಭೆ ನಿಗದಿಪಡಿಸಿ ನೀರಿನ ವಿಷಯವನ್ನೇ ಚರ್ಚಿಸುವ ಭರವಸೆ ನೀಡಿದ ನಂತರ ಸಭೆ ಸುರಳಿತವಾಗಿ ನಡೆಯಿತು. ಮಾಜಿ ಮೇಯರ್ ವೀರಣ್ಣ ಸವಡಿ ಕೂಡ ವಿಶೇಷ ಸಾಮಾನ್ಯ ಸಭೆಗೆ ಒತ್ತಾಯಿಸಿದರು.


ಕಾಂಗ್ರೆಸ್ ಸದಸ್ಯರಾದ ಆರೀಪ್ ಭದ್ರಾಪುರ, ಇಕ್ಬಾಲ್ ನವಲೂರ ಮೊದಲಾದವರು ಯೋಜನೆ ತಿಳುವಳಿಕೆ ಸಭೆಯನ್ನು ಈ ರೀತಿ ಐಷಾರಾಮಿ ಹೊಟೆಲ್‌ಗಳಲ್ಲಿ ಮಾಡಿ ಹಣ ಪೋಲು ಮಾಡಲಾಗುತ್ತಿದೆ. ಈ ಹಿಂದೆ ಜಲ ಮಂಡಳಿ ಸಾಮಾನ್ಯವಾಗಿ ಪಾಲಿಕೆ ಸಭಾ ಭವನಗಳಲ್ಲಿ, ಸರ್ಕ್ಯೂಟ್ ಹೌಸ್‌ಗಳಲ್ಲಿ ಕರೆಯುತ್ತಿತ್ತು ಎಂದು ಹೇಳಿದರು.
ಪಾಲಿಕೆ ಆಯುಕ್ತ ಗೋಪಾಲಕೃಷ್ಣ, ಉಪಮೇಯರ್ ಉಮಾ ಮುಕುಂದ, ಹೆಚ್ಚುವರಿ ಆಯುಕ್ತ ಶಂಕರಾನಂದ, ಎಲ್ ಆಂಡ ಟಿ ಸಂಸ್ಥೆಯ ಶಶಿಕುಮಾರ ಸೇರಿದಂತೆ ಅನೇಕರಿದ್ದರು.

ಕುಡಿಯುವ ನೀರಿನ ಯೋಜನೆ ತಿಳುವಳಿಕೆ ನೀಡುವ ಸಭೆಯನ್ನು ಐಷಾರಾಮಿ ಹೊಟೆಲ್‌ಗಳಲ್ಲಿ ದುಂದುವೆಚ್ಚ ಮಾಡುವುದು ಸರಿಯಲ್ಲ. ಅಲ್ಲದೇ ಮೊದ್ಲು ಆಗಬೇಕಾಗಿದ್ದು ನೀರಿನ ಸಮಸ್ಯೆ ನಿವಾರಣೆ
ಆರೀಫ ಭದ್ರಾಪುರ
ಪಾಲಿಕೆ ಸದಸ್ಯ

administrator

Related Articles

Leave a Reply

Your email address will not be published. Required fields are marked *