ಹುಬ್ಬಳ್ಳಿ-ಧಾರವಾಡ ಸುದ್ದಿ

17,18ರಂದು ಮಾಧ್ವ ತತ್ವಜ್ಞಾನ ಸಮ್ಮೇಳನ

ವಿದ್ವತ್‌ಗೋಷ್ಠಿ,ಸಂಗೀತ,ದಾಸವಾಣಿ ಆಯೋಜನೆ

ಹುಬ್ಬಳ್ಳಿ : ಶ್ರೀ ಮಧ್ವಾಚಾರ್ಯರು ಬೋಧಿಸಿದ ಮಾಧ್ವ ತತ್ವಗಳನ್ನು ಪ್ರಚುರಪಡಿಸಲು ಮತ್ತು ಅವುಗಳ ಬೆಳಕಿನಲ್ಲಿ ಇಂದಿನ ಬದುಕನ್ನು ಹಸನುಗೊಳಿಸಲು ಪೇಜಾವರ ಮಠದ ಪ್ರಸ್ತುತ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ 29 ನೇ ಅಖಿಲ ಭಾರತ ಮಾಧ್ವತತ್ವಜ್ಞಾನ ಸಮ್ಮೇಳನ ದಿ.17,18ರಂದು ನಡೆಯಲಿದೆ.


ಎರಡು ದಿನಗಳ ಸಮ್ಮೇಳನವನ್ನು ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್‌ದಲ್ಲಿ ನಡೆಯಲಿದ್ದು, ಮುಂಜಾನೆಯಿಂದ ಸಂಜೆಯವರೆಗೂ ವಿದ್ವತ್ ಗೋಷ್ಠಿಗಳು, ಸಂಗೀತ, ದಾಸವಾಣಿ, ಭಜನೆ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ದಿ.17ರಂದು ಶೋಭಾಯಾತ್ರೆ ಜರುಗಲಿದ್ದು, ವಿದ್ವಾನ್ ಎ.ಹರಿದಾಸ ಭಟ್ ಅಧ್ಯಕ್ಷತೆಯ ತತ್ವಜ್ಞಾನ ಸಮ್ಮೇಳನವನ್ನು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸುಬುಧೇಂದ್ರತೀರ್ಥ ಸ್ವಾಮೀಜಿ, ಭಂಡಾರಕೇರಿ ಮಠಾಧೀಶ ವಿದ್ಯೇಶತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಸೋದೆ ವಾದಿರಾಜಮಠದ ವಿಶ್ವವಲ್ಲಭತೀರ್ಥ ಸ್ವಾಮೀಜಿ ಉದ್ಘಾಟಿಸುವರು.
10.30ಕ್ಕೆ ಮಹಿಳಾ ಗೋಷ್ಠಿ, ಮಧ್ಯಾಹ್ನ 3.30 ಕ್ಕೆ ಚರ್ಚಾ ಗೋಷ್ಠಿ,

ಸಂಜೆ 4.30ಕ್ಕೆ ಅದಮಾರು ಮಠಾಧೀಶ ಈಶಪ್ರಿಯತೀರ್ಥ ಸ್ವಾಮೀಜಿ, ಪಲಿಮಾರು ಮಠದ ವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದ್ದು, ಡಾ. ಎನ್.ವಾದಿರಾಚಾರ್ಯ,ಡಾ.ವ್ಯಾಸನಕೆರೆಪ್ರಭಂಜನಾಚಾರ್ಯಶ್ರೀ ಬ್ರಹ್ಮಣ್ಯಾಚಾರ್ಯ(ಹರಿದಾಸರು ಕಂಡ ಮಧ್ವಸಿದ್ಧಾಂತ) ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಸಂಸದ ತೇಜಸ್ವಿ ಸೂರ್ಯ, ಮಾಜಿ ಮುಖ್ಯಮಂತ್ರಿಜಗದೀಶ್ ಶೆಟ್ಟರ್, ವಿ.ಆರ್.ಎಲ್.ಸಮೂಹದ ಮುಖ್ಯಸ್ಥ ವಿಜಯ ಸಂಕೇಶ್ವರ, ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಪ್ರಸಾದಅಬ್ಬಯ್ಯ, ಚಿಂತಕ ಚಕ್ರವರ್ತಿ ಸೂಲಿಬೆಲೆ ಆಗಮಿಸುವರು.


ರಾತ್ರಿ 8ಕ್ಕೆ ಶ್ರೀ ಅನಂತಕುಲಕರ್ಣಿ ಹಾಗೂ ಶ್ರೀ ರಾಯಚೂರು ಶೇಷಗಿರಿದಾಸರ ದಾಸವಾಣಿಜುಗಲ್ ಬಂದಿ ಕಾರ್ಯಕ್ರಮ ಪ್ರಸ್ತುತಪಡಿಸುವರು. ಎರಡನೇ ದಿನ ದಿ.18ರಂದು ಪ್ರಾಚೀನ ಹಾಗೂ ಆಧುನಿಕ ವೈದ್ಯ ಪದ್ಧತಿ ಸಾಧಕ ಬಾಧಕಗಳ ಕುರಿತುವೈದ್ಯಗೋಷ್ಠಿ,ಮುಂಜಾನೆ 10.30ಕ್ಕೆ ದಾಸ ಸಾಹಿತ್ಯಗೋಷ್ಠಿ,ಮಧ್ಯಾಹ್ನ 12 ಕ್ಕೆ ದಾನಿಗಳಿಗೆ ಸನ್ಮಾನ, ಬಹುಮಾನ ವಿತರಣೆ ಕಾರ್ಯಕ್ರಮ, ನೃತ್ಯರೂಪಕ ನಡೆಯಲಿದೆ.

ಸೋಸಲೆ ಮಠಾಧೀಶ ವಿದ್ಯಾಶ್ರೀಶತೀರ್ಥ ಸ್ವಾಮೀಜಿ, ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ, ಕಣ್ವಮಠದ ವಿರಾಜತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಸಂಜೆ 5 ಕ್ಕೆ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ರಾಜ್ಯಸಭಾ ಸದಸ್ಯ ಸುಧಾಂಶುತ್ರಿವೇದಿ, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಉಪಕುಲಪತಿಡಾ.ಶ್ರೀನಿವಾಸಾಚಾರ್ಯ ವರಖೇಡಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.


ಸಮ್ಮೇಳನ ಯಶಸ್ಸಿಗೆ ಕಾರ್ಯಕಾರಿ, ಸ್ವಾಗತ, ಹಣಕಾಸು, ಪ್ರಸಾದ ವಿತರಣೆ, ಅತಿಥಿ ಸತ್ಕಾರ, ವೇದಿಕೆ ಅಲಂಕಾರ, ಪ್ರಚಾರ, ಬ್ಯಾಂಕಿಂಗ್ ವ್ಯವಹಾರ ಮೊದಲಾದ ಸಮಿತಿಗಳನ್ನು ರಚಿಸಲಾಗಿದ್ದು ಸಿದ್ಧತೆಗಳು ಭರದಿಂದ ನಡೆದಿವೆ.ಮಹತ್ವದ ಲೇಖನಗಳನ್ನೊಳಗೊಂಡ ಸ್ಮರಣ ಸಂಚಿಕೆಯನ್ನೂ ಬಿಡುಗಡೆ ಮಾಡಲಾಗುವುದು.

ಪತ್ರಿಕಾಗೋಷ್ಠಿಯಲ್ಲಿ ಈ ವಿವರಗಳನ್ನು ಸಮ್ಮೇಳನ ಸಂಚಾಲಕ ಬದರಿನಾಥಾಚಾರ್ಯ, ಉಪಾಧ್ಯಕ್ಷರಾದ ಎ.ಸಿ.ಗೋಪಾಲ, ಗೋಪಾಲ ಕೃಷ್ಣ ನಾಯಕ, ಕೃಷ್ಣರಾಜ ಭಟ್, ಪ್ರಧಾನ ಕಾರ್ಯದರ್ಶಿ ಶ್ರೀಪಾದ ಸಿಂಗನಮಲ್ಲಿ, ಕಾರ್ಯದರ್ಶಿ ಅನಂತರಾಜ ಭಟ್, ಸತ್ಯಮೂರ್ತಿ ಆಚಾರ್ಯ ಇವರುಗಳು ನೀಡಿದರು. ಗೋಷ್ಠಿಯಲ್ಲಿ ನರೇಂದ್ರ ಕುಲಕರ್ಣಿ, ಸುನೀಲ ಗುಮಾಸ್ತೆ, ಗುರುರಾಜ ಕೌಜಲಗಿ, ಮನೋಹರ ಪರ್ವತಿ, ವಿಶ್ವನಾಥ ಕುಲಕರ್ಣಿ ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *