ಹುಬ್ಬಳ್ಳಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಆಡಳಿತ ಶಾಖೆ ಉಪ ನಿರ್ದೇಶಕರಾಗಿರುವ ಮಂಜುನಾಥ ಡೊಳ್ಳಿನ ಅವರು ಆಡಳಿತ ಶಾಖೆ ಮತ್ತು ಸುದ್ದಿ ಮತ್ತು ಪತ್ರಿಕಾ ಶಾಖೆಯ ಪ್ರಭಾರ ಜಂಟಿ ನಿರ್ದೇಶಕರಾಗಿ ಅಧಿಕಾರಿ ವಹಿಸಿಕೊಂಡರು.
ಈ ಹಿಂದೆ ಧಾರವಾಡದಲ್ಲಿ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ಡೊಳ್ಳಿನ ಅವರು ಕಳೆದ ವರ್ಷ ಉಪನಿರ್ದೇಶಕರಾಗಿ ಬಡ್ತಿ ಹೊಂದಿ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರು.
ಉಪನಿರ್ದೇಶಕರುಗಳಾದ ಪಲ್ಲವಿ ಹೊನ್ನಾಪುರ ( ಛಾಯಾಚಿತ್ರ ಮತ್ತು ಚಲನಚಿತ್ರ ಶಾಖೆ,), ಸಿದ್ದೇಶ್ವರಪ್ಪ( ಕ್ಷೇತ್ರ ಪ್ರಚಾರ ಶಾಖೆ), ಸಿ.ಆರ್.ನವೀನ (ವಾಣಿಜ್ಯ ಪ್ರಚಾರ ಹಾಗೂ ಪ್ರಕಟಣೆ ಶಾಖೆ)ಪ್ರಭಾರ ಜಂಟಿ ನಿರ್ದೇಶಕರುಗಳಾಗಿದ್ದು, ಹಾಗೂ ರಾಮಲಿಂಗಪ್ಪ ಇವರು ವಾಣಿಜ್ಯ ಶಾಖೆ ಉಪನಿರ್ದೇಶಕರಾಗಿ ನಿಯುಕ್ತಿಗೊಂಡಿದ್ದಾರೆ.