ಹುಬ್ಬಳ್ಳಿ-ಧಾರವಾಡ ಸುದ್ದಿ

ಮರಾಠಾ ವಿದ್ಯಾ ಪ್ರಸಾರಕ ಮಂಡಳ ಚುನಾವಣೆ: 34 ಜನ ಕಣದಲ್ಲಿ

ಮನೋಹರ ಮೋರೆ V/S ಪ್ರತಾಪ ಚವ್ಹಾಣ ಜಿದ್ದಾಜಿದ್ದಿ

ಧಾರವಾಡ: ಇಲ್ಲಿನ ಪ್ರತಿಷ್ಠಿತ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ನೂತನ ಆಡಳಿತ ಮಂಡಳಿಗೆ ತ್ರೈವಾರ್ಷಿಕ ಚುನಾವಣೆ ಜರುಗುತ್ತಿದ್ದು, ಈ ಬಾರಿ ಎರಡು ಬಣಗಳು ಪರಸ್ಪರ ಸೆಣಸಾಡಲು ಸಜ್ಜಾಗಿವೆ.
ಮನೋಹರ ಮೋರೆ ನೇತೃತ್ವದ ಹಾಲಿ ಆಡಳಿತ ಮಂಡಳಿಯ ಬಣ ಈ ಬಾರಿಯೂ ಕಣಕ್ಕಿಳಿಯಲು ಬಯಸಿ ನಾಮಪತ್ರ ಸಲ್ಲಿಸಿದೆ. ಈ ಬಣದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಯಲ್ಲಪ್ಪ ಚವ್ಹಾಣ, ಮತ್ತು ನಿರ್ದೇಶಕ ಸ್ಥಾನಗಳಿಗೆ ಈಶ್ವರ ಬಾಬು ಪಾಟೀಲ, ಶಿವಾಜಿ ಸೂರ್ಯವಂಶಿ, ಸುಭಾಸ ಪವಾರ, ರಾಜು ಬಿರ್ಜೆನವರ, ಸುಭಾಸ ಶಿಂಧೆ, ದತ್ತಾತ್ರೇಯ ಮೋಟೆ, ಅನಿಲ ಭೋಸಲೆ, ಮಹೇಶ ಶಿಂಧೆ, ಪುರುಷೋತ್ತಮ ಜಾಧವ, ರಾಜು ಉರ್ಫ ಮಹದೇವ ಕಾಳೆ, ಸುನೀಲ ಮೋರೆ ಮತ್ತು ಪ್ರಸಾದ ಹಂಗಳಕಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.


ಕಳೆದ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದ ಪ್ರತಾಪ ಚವ್ಹಾಣ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ರಮೇಶ ಚೂಡಾಮಣಿ ನಾಮಪತ್ರ ಸಲ್ಲಿಸಿದ್ದಾರೆ. ಪ್ರತಾಪ ಅವರ ಸಾರಥ್ಯದಲ್ಲಿ ನಾರಾಯಣ ಹುಬ್ಬಳ್ಳಿ, ಮಂಜುನಾಥ ಮಾನೆ, ವಿಜಯ ಭೋಸಲೆ, ವಿನಾಯಕ ಜಾಧವ, ಕಿರಣ ಪವಾರ, ನಾರಾಯಣ ಜಾಧವ, ನವೀನ ಕದಂ, ವಿನಾಯಕ ಗಾಯಕವಾಡ, ಮಂಜುನಾಥ ಜಾಧವ, ಮಾರುತಿ ಪವಾರ, ರಾಜೇಶ ಜಾಧವ, ಕೃಷ್ಣಕುಮಾರ ರಾಣೋಜಿ, ನೀಲಕಂಠ ಜಾಧವ ಕಣಕ್ಕಿಳಿದಿದ್ದಾರೆ.


ನಗರದ ಹೃದಯ ಭಾಗದಲ್ಲಿರುವ ಮರಾಠಾ ವಿದ್ಯಾ ಪ್ರಸಾರಕ ಮಂಡಳವು ಮರಾಠಾ ಸಮಾಜದ ಪ್ರತಿಷ್ಠಿತ ಮತ್ತು ಪ್ರಾತಿನಿಧಿಕ ಸಂಸ್ಥೆಯಾಗಿದೆ. ಸಮಾಜದ ಸಾವಿರಾರು ಜನರ ಸದಸ್ಯತ್ವ ಹೊಂದಿರುವ ಮಂಡಳದ ಅಧೀನದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳಿವೆ.
ಕಳೆದ ಚುನಾವಣೆಯಲ್ಲಿ ಮಂಜು ಕದಂ, ಪ್ರತಾಪ ಚವ್ಹಾಣ, ಉದಯ ಲಾಡ್ ಮತ್ತು ಎಂ.ಎನ್.ಮೋರೆ ನೇತೃತ್ವದಲ್ಲಿ ನಾಲ್ಕು ಬಣಗಳು ಸ್ಪರ್ಧಿಸಿದ್ದವು. ಈ ಬಾರಿ ಎರಡು ಬಣಗಳು ಮಂಡಳಿಯ ಅಧಿಕಾರಕ್ಕೆ ಸೆಣಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಕುತುಹಲಕೆರಳಿಸಿದೆ.


ಕಳೆದ ಚುನಾವಣೆಯಲ್ಲಿ ಚುನಾವಣೆಯಲ್ಲಿ ಮೋಹನ ಮೋರೇ ನೇತೃತ್ವದ ಗುಂಪಿಗೆ ಜಯ ಲಭಿಸಿತ್ತು. ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಕೊಂಡಿರುವ ಮೋರೆ ನಾಯಕತ್ವದ ತಂಡ ಪುನಃ ಗದ್ದುಗೆ ಏರುವ ಸಂಭವವಿದೆ. ಸಮಾಜದ ಜನರಲ್ಲಿ ಮಂಡಳದ ಬಗ್ಗೆ ಅಪಾರ ಕಾಳಜಿ ಇದ್ದು, ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತವನ್ನು ನಿರೀಕ್ಷಿಸುತ್ತಿರುವುದು ಸಹಜ ಎನ್ನಲಾಗುತ್ತಿದೆ.
ಈ ಚುನಾವಣೆಗೆ ಚುನಾವಣಾ ಅಧಿಕಾರಿಯಾಗಿ ಮ.ಅ.ಮಲ್ಲಾಪೂರ, ಅಧ್ಯಕ್ಷರಾಗಿ ಬಸವಂತಪ್ಪ ಮಾಲನವರ, ಉಪಾಧ್ಯಕ್ಷರಾಗಿ ಸಂಭಾಜಿ ಘೋಡಸೆ, ಸದಸ್ಯರಾಗಿ ನೇತಾಜಿ ಕದಂ, ಕೃಷ್ಣಾ ಭೋಸಲೆ ಕಾರ್ಯನಿರ್ವಹಸಲಿದ್ದಾರೆ.

administrator

Related Articles

Leave a Reply

Your email address will not be published. Required fields are marked *