ಹುಬ್ಬಳ್ಳಿ-ಧಾರವಾಡ ಸುದ್ದಿ
ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ: ಪ್ರತಿಭಟನೆ

ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ: ಪ್ರತಿಭಟನೆ

ಹುಬ್ಬಳ್ಳಿ: ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿರುವ ಘಟನೆ ಖಂಡಿಸಿ ವಿಕೃತಿ ಮೆರೆದಿರುವ ರಾಯಚೂರ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಶಿಸ್ತು ಕ್ರಮಕ್ಕೆ ಆಗ್ರಹಿಸಿ ಹುಬ್ಬಳ್ಳಿ-ಧಾರವಾಡ ವಿವಿಧ ದಲಿತ ಸಂಘಗಳ ಮಹಾಮಂಡಳ ವತಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.


ಸ್ಟೇಶನ್ ರಸ್ತೆಯ ಮುಖ್ಯ ಅಂಚೆ ಕಚೇರಿ ಬಳಿಯ ಅಂಬೇಡ್ಕರ್ ಪುತ್ಥಳಿಯ ಬಳಿಯಿಂದ ಬೃಹತ್ ಮೆರವಣಿಗೆಯಲ್ಲಿ ಬಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಕರ್ನಾಟಕದ ಎಲ್ಲ ನ್ಯಾಯಾಲಯಗಳಲ್ಲಿ 30 ದಿನದೊಳಗೆ ಅಂಬೇಡ್ಕರ್ ಭಾವಚಿತ್ರ ಅಳವಡಿಸಲು ಆಗ್ರಹಿಸಲಾಯಿತು.
ಅಂಬೇಡ್ಕರ್ ವೃತ್ತದಲ್ಲಿರುವ ಡಾ ಅಂಬೇಡ್ಕರ್ ಪುತ್ಥಳಿಗೆ ಶಾಸಕ ಪ್ರಸಾದ್ ಅಬಯ್ಯ ರವರು ಪುಷ್ಪನಮನ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ಗುರುನಾಥ್ ಉಳ್ಳಿಕಾಶಿ ಪ್ರೇಮನಾಥ್ ಚಿಕ್ಕತುಂಬಳ, ವೆಂಕಟೇಶ್ ಮೇಸ್ತ್ರಿ, ಚೇತನ ಹಿರೇಕೆರೂರ, ದೊರೆರಾಜ ಮಣಿಕುಂಟ್ಲಾ ರಾಜು ಗಾಣದಾಳ್, ಮುಖಂಡರುಗಳಾದ ಎ.ಎಂ.ಹಿಂಡಸಗೇರಿ, ನಾಗರಾಜ ಗೌರಿ, ಯೂಸುಫ್ ಸವಣೂರ, ಅಲ್ತಾಫ್ ಕಿತ್ತೂರ, ಅನ್ವರ್ ಮುಧೋಳ್, ಮಹ್ಮದಯೂಸೂಫ ಸವಣೂರ, ಅಲ್ತಾಫ್ ಹಳ್ಳೂರ್ ಶಫಿ ಮುದ್ದೇಬಿಹಾಳ್, ಬಾಬಾಜಾನ್ ಮುಧೋಳ್, ನಿರಂಜನ ಹಿರೇಮಠ, ಮೊಹಮ್ಮದ ಕೋಳೂರ, ವಾದಿರಾಜ ಕುಲಕರ್ಣಿ, ರಾಜಶೇಖರ್ ಮೆಣಸಿನಕಾಯಿ, ಬಂಗಾರೇಶ್ ಹಿರೇಮಠ್, ಇನ್ನಿತರ ಸಂಘಟನೆ ಮುಖಂಡರುಗಳಾದ ಬಸವರಾಜ್ ಕಲಾದಗಿ, ಪರಶುರಾಮ್ ಅರಕೇರಿ, ಶಾಮ್ ಜಾಧವ್ ಬರ್ನಾಬಸ್ ಕುಮಾರ್ ಕುಂದನಳ್ಳಿ, ಸಂದಿಲ್ ಕುಮಾರ್, ಎಂ.ಭದ್ರಾಪುರ, ಮಹ್ಮದಯೂಸೂಫ ಸವಣೂರ, ವೀರಣ್ಣ, ಶ್ರೀನಿವಾಸ ಬೆಳದಡಿ, ರೇವಣಸಿದ್ದಪ್ಪ ಹೊಸಮನಿ, ರಫೀಕ ದರಗಾದ, ಲೋಹಿತ ಗಾಮನಗಟ್ಟಿ, ಮಂಜುನಾಥ ಉಳ್ಳಿಕಾಸಿ, ಇಮ್ತಿಯಾಜ ಬಿಜಾಪುರ, ರಮೇಶ ಸಾಂಬ್ರಾಣಿ, ಕಿರಣಕುಮಾರ ಗಾಮನಗಟ್ಟಿ, ಬಸವರಾಜ ಕಲಾದಗಿ, ಎ.ಬಿ.ಕಂಬಿ, ಕೆ.ಕೆ.ಬೆಟಗೇರಿ, ಬಸವರಾಜ ವಿಠಲಾಪುರ, ಗಣೇಶ ದೊಡ್ಡಮನಿ, ಮಲ್ಲಿಕಾರ್ಜುನ ಯಾತಗೇರಿ, ಸಂಜಯ ಕದಂ, ಬಸವರಾಜ ನಾರಾಯಣಕಲ್ಲ, ಚಿದಾನಂದ ಘೋಡಕೆ, ಗುರುಪಾದ ಬೆಟಗೇರಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು

administrator

Related Articles

Leave a Reply

Your email address will not be published. Required fields are marked *