ಹುಬ್ಬಳ್ಳಿ-ಧಾರವಾಡ ಸುದ್ದಿ
ಮೇಯರ್ : ’ಪಂಚ ಪಾಂಡವರ’ ಶಾರ್ಟ ಲೀಸ್ಟ್!; ಸಂಜೆ ಅಭಿಪ್ರಾಯ ಆಲಿಸಿ ಅಂತಿಮ

ಮೇಯರ್ : ’ಪಂಚ ಪಾಂಡವರ’ ಶಾರ್ಟ ಲೀಸ್ಟ್!; ಸಂಜೆ ಅಭಿಪ್ರಾಯ ಆಲಿಸಿ ಅಂತಿಮ

ಧಾರವಾಡಕ್ಕೋ – ಹುಬ್ಬಳ್ಳಿಗೋ ತೀವ್ರ ಕುತೂಹಲ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯಲ್ಲಿ ಹೆಚ್ಚಿನ ಸದಸ್ಯ ಬಲ ಹೊಂದಿರುವ ಬಿಜೆಪಿ ನಾಳೆ ನಡೆಯಲಿರುವ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಅಧಿಕಾರಕ್ಕೇರುವುದು ಖಚಿತವಾಗಿದ್ದು,ಇಂದು ಸಾಯಂಕಾಲ ೫ರ ನಂತರ ಕೇಶ್ವಾಪುರದ ಅನಂತ ಎಕ್ಸಿಕ್ಯೂಟಿವ್‌ನಲ್ಲಿ ವರಿಷ್ಠರು ಎಲ್ಲ ಸದಸ್ಯರ ಅಭಿಪ್ರಾಯ ಆಲಿಸಲಿದ್ದಾರೆ.


ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಹಾನಗರ ಅಧ್ಯಕ್ಷ ಸಂಜಯ ಕಪಟಕರ ಸೇರಿದಂತೆ ಪ್ರಮುಖರು ಈ ಸಂದರ್ಭದಲ್ಲಿ ಇರಲಿದ್ದು ತದನಂತರ ಎಲ್ಲ ಸದಸ್ಯರ ಅಭಿಪ್ರಾಯ ಕ್ರೋಡಿಕರಿಸಿ ಅಂತಿಮ ತೀರ್ಮಾನಕ್ಕೆ ಬರುವರೆನ್ನಲಾಗಿದೆ.
ಈಗಾಗಲೇ ನಿನ್ನೆ ರಾತ್ರಿ ಜೋಶಿ ಮತ್ತು ಶೆಟ್ಟರ್ ಅವರು ಮೇಯರ್ ಆಕಾಂಕ್ಷಿಗಳಾಗಿರುವ 10 ಹೆಚ್ಚು ಜನರ ಅಭಿಪ್ರಾಯಗಳನ್ನು ಆಲಿಸಿದ್ದಾರೆನ್ನಲಾಗಿದ್ದರೂ
ನಾಳೆ ಬೆಳಿಗ್ಗೆಯವರೆಗೆ ಸಸ್ಪೆನ್ಸ್ ಮುಂದುವರಿಯುವುದು ನಿಶ್ಚಿತವಾಗಿದೆ
ಮೇಯರ್ ಗೌನ್ ಭಾಗ್ಯ ಅಂತಿಮವಾಗಿ ಧಾರವಾಡದ ಇಬ್ಬರು ಮತ್ತು ಹುಬ್ಬಳ್ಳಿಯ ಮೂವರ ನಡುವೆ ಅಂತಿಮ ಪೈಪೋಟಿ ಬೀಳಬಹುದು ಎನ್ನಲಾಗಿದೆ.
ಧಾರವಾಡ ಕೋಟಾದಡಿ ಪ್ರಬಲ ಆಕಾಂಕ್ಷಿಗಳಾದ ಈರೇಶ ಅಂಚಟಗೇರಿ,ವಿಜಯಾನಂದ ಶೆಟ್ಟಿ ಹುಬ್ಬಳ್ಳಿಯ ಕೋಟಾದಡಿ ಮಾಜಿ ಮೇಯರ್ ವೀರಣ್ಣ ಸವಡಿ , ರಾಜಣ್ಣ ಕೊರವಿ ಹಾಗೂ ಪೂರ್ವ ಕ್ಷೇತ್ರದ ಶಿವು ಮೆಣಸಿನಕಾಯಿ ಪೈಕಿ ಒಬ್ಬರು ಅಂತಿಮಗೊಳ್ಳಬಹುದೆಂದು ಹೇಳಲಾಗುತ್ತಿದೆ.
ಪೇಡೆ ನಗರಿಯ ಈರೇಶ ಅಂಚಟಗೇರಿ, ಶಿವು ಹಿರೇಮಠ, ವಿಜಯಾನಂದ ಶೆಟ್ಟಿ ಇದ್ದರೆ, ಶಂಕರ ಶೇಳಕೆ ಹುಬ್ಬಳ್ಳಿಯ ವೀರಣ್ಣ ಸವಡಿ, ರಾಮಣ್ಣ ಬಡಿಗೇರ, ರಾಜಣ್ಣಕೊರವಿ, ತಿಪ್ಪಣ್ಣ ಮಜ್ಜಗಿ, ಮಲ್ಲಿಕಾರ್ಜುನ ಗುಂಡೂರ, ಉಮೇಶ ಕೌಜಗೇರಿ, ಚಂದ್ರಶೇಖರ ಮನಗುಂಡಿ, ಶಿವು ಮೆಣಸಿನಕಾಯಿ, ಮುಂತಾದವರ ಹೆಸರುಗಳು ಪ್ರಸ್ತಾಪಕ್ಕೆ ಬಂದು ಅಂತಿಮವಾಗಿ ಐವರ ಶಾರ್ಟ ಲೀಸ್ಟ್ ಮಾಡಲಾಗಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.
ಈಗಾಗಲೇ ಪ್ರತ್ಯೇಕ ಪಾಲಿಕೆ ಹೋರಾಟ ಆರಂಭಗೊಂಡಿದ್ದು ಈ ಬಾರಿ ಧಾರವಾಡಕ್ಕೆ ಬೇಕೆಂಬ ವಾದಕ್ಕೆ ಶಾಸಕರುಗಳು ಬೆಂಬಲ ವ್ಯಕ್ತಪಡಿಸಿದ್ದು, ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಈ ಬಾರಿ ಪೇಡೆನಗರಿಗೆ ನೀಡಲು ಪಟ್ಟು ಹಿಡಿದಿದ್ದಾರೆನ್ನಲಾಗಿದೆಯಲ್ಲದೆ ಎಲ್ಲ ಸದಸ್ಯರುಗಳಿಗೆ ಸಂಜೆಯೊಳಗೆ ವಿಪ್ ಸಹ ಜಾರಿಯಾಗುವುದೆನ್ನಲಾಗಿದೆ.
ಮೇಯರ್ ಪಟ್ಟ ಧಾರವಾಡಕ್ಕೆ ಆದರೆ ಹುಬ್ಬಳ್ಳಿಗೆ ಉಪ ಮೇಯರ್ ಒಂದು ವೇಳೆ ಹುಬ್ಬಳ್ಳಿಯ ಸದಸ್ಯರಿಗೆ ಗೌನ ಭಾಗ್ಯ ದೊರಕಿದಲ್ಲಿ ಉಪಮಹಾಪೌರ ಹುದ್ದೆ ಧಾರವಾಡ ಪಾಲಾಗಲಿದೆ ಎಂಬುದು ಶತಃಸಿದ್ದ. ಉಪ ಮೇಯರ್ ಸ್ಥಾನ ಮಾತ್ರ ಹೊಸಬರಿಗೆ ಈ ಬಾರಿ ಅದೃಷ್ಟ ಖುಲಾಯಿಸುವ ಸಾಧ್ಯತೆಗಳಿದ್ದು,
ರೂಪಾ ಶೆಟ್ಟಿ , ಮೀನಾಕ್ಷಿ ವಂಟಮೂರಿ, ಪೂಜಾ ಶೇಜವಾಡಕರ, ಉಮಾ ಉಮಾ ಮುಕುಂದ ಸೀಮಾ ಮೊಗಲಿಶೆಟ್ಟರ್ ಪ್ರ
ಜ್ಯೋತಿ ಪಾಟೀಲ ಹಾಗೂ ಅನಿತಾ ಚಳಗೇರಿ ಇವರ ಹೆಸರು ಪ್ರಸ್ತಾಪಕ್ಕೆ ಬಂದು ಇವರಲ್ಲೊಬ್ಬರಿಗೆ ನಿಕ್ಕಿ ಎನ್ನಲಾಗುತ್ತಿದೆ.

ಕಾಂಗ್ರೆಸ್‌ನಿಂದ ಮೋರೆ ಕಣಕ್ಕೆ?

ಮೇಯರ್- ಉಪಮೇಯರ್ ಚುನಾವಣೆ ವಿಷಯದಲ್ಲಿ ೩-೪ ಸಂಖ್ಯಾ ಬಲದ ಕೊರತೆ ಹೊಂದಿರುವ ಕಾಂಗ್ರೆಸ್ ಎರಡೂ ಸ್ಥಾನಗಳಿಗೆ ಸ್ಪರ್ಧೆ ಖಚಿತವಾಗಿದ್ದು ಧಾರವಾಡದ ಪ್ರತ್ಯೇಕ ಪಾಲಿಕೆ ಕೂಗಿನ ಹಿನ್ನೆಲೆಯಲ್ಲಿ ಅಲ್ಲಿಯವರೊಬ್ಬರಿಗೆ ಮೇಯರ್ ಸ್ಥಾನಕ್ಕೆ ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ.ನಂಬಲರ್ಹ ಮೂಲಗಳ ಪ್ರಕಾರ ಹೊಟೆಲ್ ಉದ್ಯಮಿ ಮೋಹನ ಮೋರೆಯವರ ಪುತ್ರ ೨೪ನೇ ವಾರ್ಡಿನಿಂದ ಗೆಲುವು ಸಾಧಿಸಿರುವ ಮಯೂರ್ ಮೋರೆಯವರನ್ನು ಕಣಕ್ಕಿಳಿಸಬಹುದು ಎನ್ನಲಾಗಿದೆ.
ಅಂತಿಮ ಕ್ಷಣದಲ್ಲಿ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಲ್ಲಿ ಲಾಭ ಪಡೆಯುವ ಹಿನ್ನೆಲೆಯಲ್ಲಿ ಧಾರವಾಡದವರಿಗೆ ಮಣೆ ಹಾಕಬಹುದು ಎನ್ನಲಾಗಿದೆ. ಈಗಾಗಲೇ ನೂತನ ಪಾಲಿಕೆ ಸದಸ್ಯರ ಸಭೆಯನ್ನು ಮಯೂರ ರೆಸಾರ್ಟದಲ್ಲಿ ನಡೆಸಿದ್ದು ಎಲ್ಲರ ಅಭಿಪ್ರಾಯವನ್ನು ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ ಸಹಿತ ಹಿರಿಯ ಮುಖಂಡರು ಆಲಿಸಿದ್ದಾರೆ.ಮೇಯರ್ ಸ್ಥಾನಕ್ಕೆ ಮಯೂರ್ ಮೋರೆ, ನಿರಂಜನಯ್ಯಾ ಹಿರೇಮಠ, ಶಂಭು ಸಾಲಮನಿ ಮತ್ತಿತರರ ಹೆಸರು ಪ್ರಸ್ತಾಪವಾಗಿದೆ ಎನ್ನಲಾಗಿದೆ.

administrator

Related Articles

Leave a Reply

Your email address will not be published. Required fields are marked *