ಹುಬ್ಬಳ್ಳಿ-ಧಾರವಾಡ ಸುದ್ದಿ
ಸ್ಮಾರ್ಟ ಹಣಕಾಸು ವರದಿಗೆ ಮೇಯರ್ ಆಕ್ಷೇಪ

ಸ್ಮಾರ್ಟ ಹಣಕಾಸು ವರದಿಗೆ ಮೇಯರ್ ಆಕ್ಷೇಪ

ಎಂ.ಡಿ. ನಡೆ ಸಂಶಯಾಸ್ಪದ: ವಿವರ ನೀಡಲು ಪತ್ರ

ಹುಬ್ಬಳ್ಳಿ : ಇಂದು ಜರುಗಿದ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರತಿನಿಧಿಗಳಾಗಿ ಪಾಲ್ಗೊಂಡ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರ ಈರೇಶ ಅಂಚಟಗೇರಿ ಲೆಕ್ಕಪರಿಶೋಧನೆ ಹಾಗೂ ಹಣಕಾಸು ವರದಿಗಳ ಬಗ್ಗೆ ಲಿಖಿತ ರೂಪದಲ್ಲಿ ಆಕ್ಷೇಪಣಾ ಪತ್ರವನ್ನು ಸಲ್ಲಿಸಿದ್ದಾರೆ.


ಸ್ಮಾರ್ಟ್ ಸಿಟಿ ಅಧಿಕಾರಿ ವಿಶಾಲರವರಿಗೆ ಪತ್ರ ನೀಡಿದರಲ್ಲದೇ ನೀಡಲಾಯಿತು ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಲಾಯಿತು.
ಕಳೆದ ಜುಲೈ ತಿಂಗಳಲ್ಲೇ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಸಂಪೂರ್ಣ ವಿವರ ನೀಡಲು ಕೋರಲಾಗಿದ್ದರೂ ಸಂಬಂಧಿಸಿದ ನಕ್ಷೆ, ವಿನ್ಯಾಸ, ಮೂಲ ಅಂದಾಜು ವೆಚ್ಚದ ವಿವರ, ಗುತ್ತಿಗೆ ಕರಾರಿನ ಮೊತ್ತ ಮುಂತಾದವುಗಳನ್ನು ಪೂರೈಸಿಲ್ಲವಾಗಿದ್ದು, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರ ನಡೆಗಳು ಸಂಶಯಾಸ್ಪದವಾಗಿದೆ ಎಂದು ಅಂಚಟಗೇರಿ ಪತ್ರದಲ್ಲಿ ಹೇಳಿದ್ದಾರೆ.

5ನೇ ವಾರ್ಷಿಕ ವರದಿಯಲ್ಲಿ ಲೆಕ್ಕ ಪರಿಶೋಧಕರು ವ್ಯಕ್ತಪಡಿಸಿದ ಅಭಿಪ್ರಾಯಗಳ ಬಗ್ಗೆ ಸಹ ಚರ್ಚಿಸಬೇಕಾದ ಅನಿವಾರ್ಯ ತೆ ಇದ್ದುದರಿಂದ ಅಲ್ಲದೇ ಚರ್ಚೆಗೆ ಸಮಯ ಸಿಗದ ಕಾರಣ ಈ ಪತ್ರ ಬರೆದಿದ್ದು ಕೂಡಲೇ ಮಾಹಿತಿ ನೀಡಲು ಕೋರಿದ್ದಾರೆ.


31-3-2022 ರವರೆಗೆ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿಯಲ್ಲಿ 823.52 ಕೋಟಿಗಳ ಮೊತ್ತವನ್ನು ವೆಚ್ಚ ಮಾಡಿ 55 ಯೋಜನೆಗಳನ್ನು ಪೂರ್ಣಗೊಳಿಸಿರುವ ಮಾಹಿತಿ ಇದ್ದು ಈ ಕುರಿತು ಸಾರ್ವಜನಿಕರ ಉಪಯೋಗಕ್ಕೆ ಮತ್ತು ಅದರಿಂದ ಬರುವ ನಿರ್ದಿಷ್ಟ ಆಧಾಯದ ಬಗ್ಗೆ ಯಾವ ಮಾದರಿಗಳನ್ನು ಅಳವಡಿಸಲಾಗಿದೆ. ಸದ್ಯದಲ್ಲಿ ಶೇಖರಿಸಲಾಗುತ್ತಿರುವ ಆದಾಯವನ್ನು ಯಾವ ಖಾತೆಗೆ ವರ್ಗಾಯಿಸಲಾಗುತ್ತಿದೆ. 2017-18 ರಿಂದ 2021-22ರವರೆಗೆ ಜಮೆಯಾಗಿರುವ ಬಡ್ಡಿಗೆ ಸಂಬಂಧಿಸಿದ 25,92,00,000 ರಷ್ಟು ಮೊತ್ತವನ್ನು ಹಣಕಾಸು ಸಚಿವಾಲಯದ ಮಾರ್ಗಸೂಚಿಯಂತೆ ಭಾರತ ಏಕೀಕೃತ ನಿಧಿಗೆ ರವಾನೆಯನ್ನು ಮಾಡದೇ ಇರುವುದಕ್ಕೆ ಕಾರಣ ಏನು ಸಹಿತ ಹನ್ನೊಂದು ಅಂಶಗಳ ಪತ್ರವನ್ನು ಬರೆದಿದ್ದು, ಸ್ಮಾರ್ಟ್ ಯೋಜನೆ ಕುರಿತಾದ ಸಂಶಯಗಳಿಗೆ ಮತ್ತಷ್ಟು ಪುಷ್ಠಿ ನೀಡುವಂತಾಗಿದೆ. ಈಗಾಗಲೇ ಪೂರ್ಣಗೊಳಿಸಲಾದ ಹಲವು ಕಾಮಗಾರಿಗಳು ಸಾರ್ವಜನಿಕರು ಬಳಸಲು ಅಸಮರ್ಥವಾಗಿದ್ದು ಟಾಯ್ ರೈಲು, ಸಂಚಾರಿ ವಾಚನಾಲಯ, ಫಜಲ್ ಪಾರ್ಕಿಂಗ್, ಮುಂತಾದವುಗಳು ಟೀಕೆಗೆ ಗುರಿಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *