ಹುಬ್ಬಳ್ಳಿ-ಧಾರವಾಡ ಸುದ್ದಿ

ಬಂಡಾಯ ಕಾಂಗ್ರೆಸ್ ಅಭ್ಯರ್ಥಿಗೆ ಅಣ್ಣಿಗೇರಿ ಪುರಸಭೆ ಪಟ್ಟ

ಅಣ್ಣಿಗೇರಿ: ಇಲ್ಲಿನ ಪುರಸಭೆ ಅಧ್ಯಕ್ಷರಾಗಿ ಮೆಹಬೂಬಿ ನವಲಗುಂದ ಅವರು ಆಯ್ಕೆಯಾಗಿದ್ದಾರೆ.


ರಾಜೀನಾಮೆಯಿಂದಾಗಿ ತೆರವಾಗಿದ್ದ ಅಣ್ಣಿಗೇರಿ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ನಡೆದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮೆಹಬೂಬಿ ಹಜೆರೇಸಾಬ ನವಲಗುಂದ 23 ಸದಸ್ಯರು ಬಲದಲ್ಲಿ 13 ಮತ ಪಡೆದು ಆಯ್ಕೆಯಾದರು. ಕಾಂಗ್ರೆಸ್ಸಿನ ಮತ್ತೊಬ್ಬ ಅಭ್ಯರ್ಥಿ ಹಮೀನಾಬೇಗಂ ಬಾರಿಗಿಡದ ಪರಾಭವಗೊಂಡರು.


ತಹಶೀಲ್ದಾರ ಶಿವಾನಂದ ಹೆಬ್ಬಳ್ಳಿ, ಮುಖ್ಯಾಧಿಕಾರಿ ವೈ.ಜಿ.ಗದ್ಧಗೌಡರ, ಶಾಸಕ ಎನ್.ಎಚ್ ಕೋನರಡ್ಡಿ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಬಸವರಡ್ಡಿ ಜಕರಡ್ಡಿ, ಅಮೃತ ಮೀಸಿ, ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸ್‌ಐ ಸಿದ್ಧಾರೂಡ ಆಲದಕಟ್ಟಿ, ಪುರಸಭೆ ಸಧಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *