ಹುಬ್ಬಳ್ಳಿ: ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಆಶ್ರಯದಲ್ಲಿ ದಿ. 15 ರಿಂದ 23ರ ವರೆಗೆ 19 ವರ್ಷದ ಒಳಗಿನವರಿಗಾಗಿ ಮಿಡ್‌ಮ್ಯಾಕ್ ಹುಬ್ಬಳ್ಳಿ ಪ್ರೀಮಿಯರ್ ಲೀಗ್ (ಎಚ್‌ಪಿಎಲ್) ಕ್ರಿಕೆಟ್ ಟೂರ್ನಿ ನಡೆಯಲಿದೆ.
ಸೋಮವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ141 ಆಟಗಾರರು ಹರಾಜಾದರು.ಟೂರ್ನಿಯಲ್ಲಿ ಹುಬ್ಬಳ್ಳಿ ನೈಟ್ ರೈಡರ್ಸ್, ಅರ್ಖಾ ನೈಟ್ಸ್, ಸುಗ್ಗಿ ಸ್ಪಾರ್ಟನ್ಸ್, ಎ.ಬಿ. ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್ ಮತ್ತು ಹುಬ್ಬಳ್ಳಿ ನಯಾಕಾಸ್ ತಂಡಗಳು ಸೆಣಸಾಡಲಿದ್ದು, ಪ್ರತಿ ತಂಡಗಳು ತಲಾ 17 ಆಟಗಾರರನ್ನು ಖರೀದಿಸಿದವು.
ಇದೇ ವೇಳೆ ತಂಡಗಳ ಪೋಷಾಕು ಹಾಗೂ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ
ಮಹಾವೀರ ಲಿಂಬ್ ಕೇಂದ್ರದ ಅಧ್ಯಕ್ಷ ಮಹೇಂದ್ರ ಸಿಂಘಿ, ಮಿಡ್‌ಮ್ಯಾಕ್ ಡೆವಲಪರ್ಸ್‌ನ ಆಡಳಿತ ನಿರ್ದೇಶಕ ಇಸ್ಮಾಯಿಲ್ ಸಂಶಿ, ಗುಂಡಿ ಮಾರ್ಕೆಂಟಿಂಗ್‌ನ ಮಾಲೀಕ ರಮೇಶ ಗುಂಡಿ, ಬಿಡಿಕೆ ಸ್ಫೋರ್ಟ್ಸ್ ಫೌಂಡೇಷನ್ ಕಾರ್ಯದರ್ಶಿ ಪಂಕಜ ಮುನಾವರ್, ಅಮಿತ್ ಭೂಸದ, ಮನೀಷ ಠಕ್ಕರ್, ಹಿರಿಯ ಕ್ರಿಕೆಟಿಗರಾದ ಎಚ್.ಎನ್. ಪೈ, ಸತೀಶ ಪೈ, ಕೈಲಾಶ ಮುನಾವರ, ಶಿವಾನಂದ ಗುಂಜಾಳ, ನಿಖಿಲ್ ಭೂಸದ, ಶ್ರೀಕಾಂತ ಯಕಲಾಸಪುರ, ಕಾರ್ತಿಕ ಚವಾಣ್ ಹಾಗೂ ವಿನಾಯಕ ಗುಡಿ ಇದ್ದರು.
ಜೆ.ಕೆ. ಸ್ಕೂಲ್ ಸಮೀಪದ ಬಾಣಜಿ ಡಿ. ಕಿಮ್ಜಿ ಮೈದಾನದಲ್ಲಿ ನಿತ್ಯ ಎರಡು ಪಂದ್ಯಗಳು ನಡೆಯಲಿದ್ದು, ಪ್ರತಿ ಪಂದ್ಯ ತಲಾ 30 ಓವರ್‌ಗಳದ್ದಾಗಿರುತ್ತದೆ.. ಕೆಎಸ್‌ಸಿಎ ಅನುಮತಿ ಪಡೆದು ಟೂರ್ನಿ ನಡೆಸಲಾಗುತ್ತಿದ್ದು, ಯುವ ಆಟಗಾರರಿಗೆ ತಮ್ಮ ಕೌಶಲ್ಯ ತೋರಿಸಲು ಅನುಕೂಲವಾಗಲಿದೆ ಎಂದು ಬಿಡಿಕೆ ಟ್ರಸ್ಟಿ ಬಾಬಾ ಭೂಸದ ಹೇಳುತ್ತಾರೆ.