“Thomas Alva Edison” wrote is his diary à
“Thomas Alva Edison was an addled child that, by a hero mother, became the genius of the century”
ಇದರರ್ಥ ಇಷ್ಟೇ, ಮತ್ತೊಬ್ಬರೊಡನೆ ವ್ಯವಹರಿಸಲು ಶಕ್ಯವಿಲ್ಲದ ಮತ್ತು ಜ್ಞಾನವಿಲ್ಲದ ಬಾಲಕನೊಬ್ಬ ತನ್ನ ಜೀವನದ ನಿಜ ನಾಯಕಿ, ತನ್ನ ತಾಯಿಯ ನಿಸ್ವಾರ್ಥ ಸೇವೆಯಿಂದ ಜನವೇ ಅವನ ಕುರಿತು ಬರೆಯುವಂತಾಯಿತು. ಮಾತನಾಡುವಂತಾಯಿತು. ಹೌದು ಇಂದು ಅಮ್ಮಂದಿರ ದಿನ.
ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂಬುದನ್ನು ಕೇಳಿದ್ದೇವೆ. ಓದಿದ್ದೇವೆ ಅನುಭವಿಸಿ ನೋಡಿದ್ದೇವೆ. ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು. ಆದರೆ, ಕೆಟ್ಟ ತಾಯಿ ಇರಲಿಕ್ಕಿಲ್ಲ. ಅದಕ್ಕೆ ಜಾನಪದರು ತಾಯಿ ಕುರಿತು ಈ ರೀತಿ ಹೇಳುತ್ತಾರೆ; ಹಲ್ಲು ಸುಲಿಯಲು ಮಲ್ಲಿಗೆಯು ಬೇಕು ತುರುವಿಗೇ ಹಡದಮ್ಮ ನೀ ಬೇಕು ನನ್ನ ತವರಿಗೆ ತಾಯಿ ಮಕ್ಕಳ ಜಗಳ ನ್ಯಾಯ ಮಾಡುವರಾದೆ ವಾಲೆಗೆ ಮುತ್ತು ವಜನೇನೆ ಹಡೆದಮ್ಮ ನಾ ಆಡಿದ ಮಾತು ನಿಜವೇನೆ. ಬೇಸಿಗೆಯ ದಿವಸಕ್ಕೆ ಬೇವಿನ ಮರ ತಂಪು ಭೀಮರಥಿಯೆಂಬ ನದಿ ತಂಪು ಹಡೆದಮ್ಮ ನೀನಿರಲು ತಂಪು ತವರಿಗೆ ತಾಯಿ ಎನ್ನುವ ಪದ ಕೇವಲ ಮನುಷ್ಯ ಜಾತಿಗೆ ಮಾತ್ರ ಸೀಮಿತವಲ್ಲ. ಜಗಜೀವನದ ಎಲ್ಲ ಜೀವಕ್ಕೂ ಅನ್ವಯಿಸುವದು. ನಾವು ನಮ್ಮ ಕಣ್ಣೆದುರೇ ಅಂತಹ ಅನೇಕ ಸಂಗತಿಗಳನ್ನು ನೋಡುತ್ತೇವೆ. ಹಕ್ಕಿ ತನ್ನ ಮರಿಗೆ ಗುಟುಕು ಹಾಕುವದು, ಪ್ರಾಣಿಗಳು ತಮ್ಮ ಮರಿಗಳಿಗೆ ಹಾಲುಣಿಸುವದು, ತನ್ನ ಚಿಕ್ಕ ಮರಿಗಳ ರಕ್ಷಣೆ ಮಾಡುವದು, ಎಲ್ಲವೂ ತಾಯಿ ಹೃದಯವನ್ನೇ ತೋರಿಸುತ್ತೇವೆ. ನಮ್ಮ ಕನ್ನಡನಾಡಿನ ಪ್ರಸಿದ್ಧ ಹಾಡು ಪುನ್ಯಕೋಟಿಯಲ್ಲಿ ಹೃದಯಸ್ಪರ್ಶಿ ಘಟನೆಯನ್ನು ನೋಡುತ್ತೇವೆ.
ಮರಿ ಆಕಳು ತಾಯಿ ಸಾಯಲು ಹೋಗುತ್ತೆನೆಂದಾಗ
ಆರ ಮೊಲೆಯನು ಕುಡಿಯಲಮ್ಮ
ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರು ನನಗೆ ಹಿತವರು
ಅಮ್ಮ ನೀನು ಸಾಯಲೇಕೆ
ನಮ್ಮ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲೆನುತ
ಅಮ್ಮನಿಗೆ ಕರು ಹೇಳಲು
ಅಂದರೆ ಮಗುವಿಗೆ ತಾಯಿ ಅನಿವಾರ್ಯ ಎಂಬುದು ಪ್ರಕೃತಿಯ ನಿಯಮ ಮಮತೆ ಎಂಬ ಪದ ತಾಯಿಯ ಹೃದಯದಲ್ಲೇ ಇರುತ್ತದೆ. ತಾನು ಇನ್ನು ಮುಂದೆ ತನ್ನ ಮಗುವಿಗೆ ಇರುವದಿಲ್ಲ ಎಂದರಿತ ಪುಣ್ಯಕೋಟಿ ತನ್ನ ಸಹ ಗೋವುಗಳಿಗೆ ಹೇಳುವ ಮಾತು ಅಬ್ಬಾ ಎಲ್ಲರಲ್ಲೂ ಕಣ್ಣೀರು ತರಿಸುತ್ತದೆ;
ಮುಂದೆ ಬಂದರೆ ಹಾಯ ಬೇಡಿ
ಹಿಂದೆ ಬಂದರೆ ಒದೆಯ ಬೇಡಿ
ಕಂದ ನಿಮ್ಮನೆಂದು ಕಾಣಿರಿ
ತಬ್ಬಲಿಯನೀ ಕರುವನು
ಎಂಬಲ್ಲಿ ತನ್ನ ಮಗುವಿಗೆ ಮುಂದೆಯೂ ತಾಯಿ ಪ್ರೀತಿ ಸಿಗಲಿ ಎಂಬುವುದೇ ಆಗಿತ್ತು. ಅಲ್ಲದೇ ತನ್ನ ಮಗುವಿಗೆ ಹೇಳುವ ರೀತಿಯಂತೂ ಕಟುಕನ ಎದೆಯಲ್ಲೂ ಪ್ರೀತಿ ಉಕ್ಕಿಸುವದು:
ತಬ್ಬಲಿ ನೀನಾದೆ ಮನಗೆ
ಹೆಬ್ಬುಲಿಯ ಬಾಯನ್ನು ಹೋಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನಾ
ಇಲ್ಲಿ ಪುಣ್ಯಕೋಟಿಯ ಎರಡು ಪಾತ್ರಗಳನ್ನು ನೋಡಬಹುದು. ತಾಯಿಯಾಗಿ ಗುರುವಾಗಿ ತನ್ನ ಕಂದನಿಗೆ ತಿಳಿಹೇಳುವ ಸರಿ ನಿಜವಾಗಿಯೂ ಎಲ್ಲರ ಮನಸ್ಸನ್ನು ಬಿಂದು ನಿಮಿಷ ಎಚ್ಚರಗೊಳಿಸುವದು. ಹೀಗೆ ತಾಯಿ ಮಗುವಿನ ಕುರಿತು ಹೊಂದಿರುವ ಪರಿಭಾಷೆ ನಮ್ಮ ಜನಪದರ ಬಾಯಲ್ಲಿ ಅತ್ಯಂತ ರಮ್ಯವಾಗಿ ಹೊಮ್ಮಿದೆ. ಇದನ್ನು ನೋಡಿ ನಲ್ಲರಿಗೂ ನಮ್ಮ ತಾಯಿ ನೆನಪಾಗದಿರುವಳೇ.
ಭತ್ತು ನವಮಾಸ ತನ್ನ ಗರ್ಭದಲ್ಲರಿಸಿ, ಭೂಮಿಗೆ ಬಂದ ನನ್ನನ್ನು ತನ್ನಕ್ಕರೆಯ ತೊಳಬಂದಿಯಲಿ ಹಿಡಿದಿಟ್ಟು, ನಾ ಮಾಡಿದ ಎಲ್ಲ ತುಂಟಾಟಗಳ ಸಹಿಸಿ, ನನ್ನನ್ನು ಅಪ್ಪಿ, ಮುದ್ದಿಸಿ ನನ್ನ ತಪ್ಪುಗಳನ್ನು ತಿದ್ದಿ, ನನ್ನನ್ನು ಒಂದು ಮೂರ್ತಿಯಾಗಿ ಮಾಡಿ, ನಾನು ನನ್ನ ಜೀವನವನ್ನು ಸುಂದರವಾಗಿ ನಿರ್ವಹಿಸುತ್ತಿದ್ದೇನೆ. ಅಂದರೆ ಅದಕ್ಕೆ ಕಾರಣ ತನ್ನ ತಾಯಿ ಅಲ್ಲವೇ?
ತೊದಲು ನುಡಿ ಕೇಳಿ ಸಂತಸಪಟ್ಟು ಮತ್ತೆ-ಮತ್ತೆ ಹೇಳಿಸಿ ಚಪ್ಪಾಳೆ ತಟ್ಟಿದವಳು ನೀನಲ್ಲವೇ ಅವ್ವ ನನ್ನ ತೊದಲು ನುಡಿಗೆ ಶ್ರೀಕಾರ ಹಾಕಿ ನನ್ನ ಜನಧನಿಗೆ ಮುನ್ನುಡಿ ಇಟ್ಟವಳು ನೀನಲ್ಲವೇ ಅವ್ವ
ನನ್ನ ಗೆಜ್ಜೆ ಸದ್ದಿನ ಅಂಬೆಗಾಲಿಗೆ ಮುತ್ತನಿಕ್ಕಿ ಸಂತಸಪಟ್ಟವಳು ನೀನಲ್ಲವೇ ಅವ್ವ ನನ್ನಯ ತಪ್ಪನು, ಒಪ್ಪನು ಮಾಡಿ
ಜೀವಕೆ ಸಂಭ್ರಮ ತಂದವಳು ನಿನಲ್ಲವೇ ಅವ್ವ ನನ್ನೀ ಬದುಕಿನ ಪಯಣದೀ ನಾ ನಿಂತು ನೋಡಿದಾಗ, ಸಂತಸ ಸುರಿಮಳೆ ತಂದವಳು/ ನಿನಲ್ಲವೇ ಅವ್ವ ನಿನ್ನೀ ಪ್ರೀತಿಯ ಮಮತೆಯ ಕೃತ್ಯಕ್ಕೆ ಪ್ರೀತಿಯ ವಂದನಿಗೆ ನಿನಗಿದೋ ತಾಯಿ
We never know the love of our parents for us; till we have become parents.
ಅದ್ದರಿಂದ ಮೊದಲು ನಮ್ಮ ತಂದೆ-ತಾಯಿಯನ್ನು ಪ್ರೀತಿಸೋಣ.
“ನನ್ನವ್ವ ನನ್ನ ತಾಯಿ
ಹಣ್ಣು ಹಾಗಲಕಾಯಿ
ಸುಮ್ಮನೆ ಬೈದ ಗರತಿಗೆ/ ಹಡೆದವ್ವ
ಉಣ್ಣೆಳ ಕಾಲ ಹಿಡಿದೆನ”,
ಮತ್ತೊಬ್ಬರೊಡನೆ ವ್ಯವಹರಿಸಲು ಶಕ್ಯವಿಲ್ಲದ ಮತ್ತು ಜ್ಞಾನವಿಲ್ಲದ ಬಾಲಕನೊಬ್ಬ ತನ್ನ ಜೀವನದ ನಿಜ ನಾಯಕಿ, ತನ್ನ ತಾಯಿಯ ನಿಸ್ವಾರ್ಥ ಸೇವೆಯಿಂದ ಜನವೇ ಅವನ ಕುರಿತು ಬರೆಯುವಂತಾಯಿತು. ಮಾತನಾಡುವಂತಾಯಿತು. ಹೌದು ಇಂದು ಅಮ್ಮಂದಿರ ದಿನ.
ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂಬುದನ್ನು ಕೇಳಿದ್ದೇವೆ. ಓದಿದ್ದೇವೆ ಅನುಭವಿಸಿ ನೋಡಿದ್ದೇವೆ. ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು. ಆದರೆ, ಕೆಟ್ಟ ತಾಯಿ ಇರಲಿಕ್ಕಿಲ್ಲ. ಅದಕ್ಕೆ ಜಾನಪದರು ತಾಯಿ ಕುರಿತು ಈ ರೀತಿ ಹೇಳುತ್ತಾರೆ; ಹಲ್ಲು ಸುಲಿಯಲು ಮಲ್ಲಿಗೆಯು ಬೇಕು ತುರುವಿಗೇ ಹಡದಮ್ಮ ನೀ ಬೇಕು ನನ್ನ ತವರಿಗೆ ತಾಯಿ ಮಕ್ಕಳ ಜಗಳ ನ್ಯಾಯ ಮಾಡುವರಾದೆ ವಾಲೆಗೆ ಮುತ್ತು ವಜನೇನೆ ಹಡೆದಮ್ಮ ನಾ ಆಡಿದ ಮಾತು ನಿಜವೇನೆ ಬೇಸಿಗೆಯ ದಿವಸಕ್ಕೆ ಬೇವಿನ ಮರ ತಂಪು ಭೀಮರಥಿಯೆಂಬ ನದಿ ತಂಪು ಹಡೆದಮ್ಮ ನೀನಿರಲು ತಂಪು ತವರಿಗೆ ತಾಯಿ ಎನ್ನುವ ಪದ ಕೇವಲ ಮನುಷ್ಯ ಜಾತಿಗೆ ಮಾತ್ರ ಸೀಮಿತವಲ್ಲ. ಜಗಜೀವನದ ಎಲ್ಲ ಜೀವಕ್ಕೂ ಅನ್ವಯಿಸುವದು.
ನಾವು ನಮ್ಮ ಕಣ್ಣೆದುರೇ ಅಂತಹ ಅನೇಕ ಸಂಗತಿಗಳನ್ನು ನೋಡುತ್ತೇವೆ. ಹಕ್ಕಿ ತನ್ನ ಮರಿಗೆ ಗುಟುಕು ಹಾಕುವದು, ಪ್ರಾಣಿಗಳು ತಮ್ಮ ಮರಿಗಳಿಗೆ ಹಾಲುಣಿಸುವದು, ತನ್ನ ಚಿಕ್ಕ ಮರಿಗಳ ರಕ್ಷಣೆ ಮಾಡುವದು, ಎಲ್ಲವೂ ತಾಯಿ ಹೃದಯವನ್ನೇ ತೋರಿಸುತ್ತೇವೆ. ನಮ್ಮ ಕನ್ನಡನಾಡಿನ ಪ್ರಸಿದ್ಧ ಹಾಡು ಪುನ್ಯಕೋಟಿಯಲ್ಲಿ ಹೃದಯಸ್ಪರ್ಶಿ ಘಟನೆಯನ್ನು ನೋಡುತ್ತೇವೆ.
ಮರಿ ಆಕಳು ತಾಯಿ ಸಾಯಲು ಹೋಗುತ್ತೆನೆಂದಾಗ ಆರ ಮೊಲೆಯನು ಕುಡಿಯಲಮ್ಮ ಆರ ಸೇರಿ ಬದುಕಲಮ್ಮ ಆರ ಬಳಿಯಲಿ ಮಲಗಲಮ್ಮ ಆರು ನನಗೆ ಹಿತವರು
ಅಮ್ಮ ನೀನು ಸಾಯಲೇಕೆ
ನಮ್ಮ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲೆನುತ
ಅಮ್ಮನಿಗೆ ಕರು ಹೇಳಲು
ಅಂದರೆ ಮಗುವಿಗೆ ತಾಯಿ ಅನಿವಾರ್ಯ ಎಂಬುದು ಪ್ರಕೃತಿಯ ನಿಯಮ ಮಮತೆ ಎಂಬ ಪದ ತಾಯಿಯ ಹೃದಯದಲ್ಲೇ ಇರುತ್ತದೆ. ತಾನು ಇನ್ನು ಮುಂದೆ ತನ್ನ ಮಗುವಿಗೆ ಇರುವದಿಲ್ಲ ಎಂದರಿತ ಪುಣ್ಯಕೋಟಿ ತನ್ನ ಸಹ ಗೋವುಗಳಿಗೆ ಹೇಳುವ ಮಾತು ಅಬ್ಬಾ ಎಲ್ಲರಲ್ಲೂ ಕಣ್ಣೀರು ತರಿಸುತ್ತದೆ;
ಮುಂದೆ ಬಂದರೆ ಹಾಯ ಬೇಡಿ
ಹಿಂದೆ ಬಂದರೆ ಒದೆಯ ಬೇಡಿ
ಕಂದ ನಿಮ್ಮನೆಂದು ಕಾಣಿರಿ
ತಬ್ಬಲಿಯನೀ ಕರುವನು
ಎಂಬಲ್ಲಿ ತನ್ನ ಮಗುವಿಗೆ ಮುಂದೆಯೂ ತಾಯಿ ಪ್ರೀತಿ ಸಿಗಲಿ ಎಂಬುವುದೇ ಆಗಿತ್ತು. ಅಲ್ಲದೇ ತನ್ನ ಮಗುವಿಗೆ ಹೇಳುವ ರೀತಿಯಂತೂ ಕಟುಕನ ಎದೆಯಲ್ಲೂ ಪ್ರೀತಿ ಉಕ್ಕಿಸುವದು:
ತಬ್ಬಲಿ ನೀನಾದೆ ಮನಗೆ
ಹೆಬ್ಬುಲಿಯ ಬಾಯನ್ನು ಹೋಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನಾ
ಇಲ್ಲಿ ಪುಣ್ಯಕೋಟಿಯ ಎರಡು ಪಾತ್ರಗಳನ್ನು ನೋಡಬಹುದು. ತಾಯಿಯಾಗಿ ಗುರುವಾಗಿ ತನ್ನ ಕಂದನಿಗೆ ತಿಳಿಹೇಳುವ ಸರಿ ನಿಜವಾಗಿಯೂ ಎಲ್ಲರ ಮನಸ್ಸನ್ನು ಬಿಂದು ನಿಮಿಷ ಎಚ್ಚರಗೊಳಿಸುವುದು. ಹೀಗೆ ತಾಯಿ ಮಗುವಿನ ಕುರಿತು ಹೊಂದಿರುವ ಪರಿಭಾಷೆ ನಮ್ಮ ಜನಪದರ ಬಾಯಲ್ಲಿ ಅತ್ಯಂತ ರಮ್ಯವಾಗಿ ಹೊಮ್ಮಿದೆ. ಇದನ್ನು ನೋಡಿ ನಲ್ಲರಿಗೂ ನಮ್ಮ ತಾಯಿ ನೆನಪಾಗದಿರುವಳೇ. ಒಂಭತ್ತು ನವಮಾಸ ತನ್ನ ಗರ್ಭದಲ್ಲರಿಸಿ, ಭೂಮಿಗೆ ಬಂದ ನನ್ನನ್ನು ತನ್ನಕ್ಕರೆಯ ತೊಳಬಂದಿಯಲಿ ಹಿಡಿದಿಟ್ಟು, ನಾ ಮಾಡಿದ ಎಲ್ಲ ತುಂಟಾಟಗಳ ಸಹಿಸಿ, ನನ್ನನ್ನು ಅಪ್ಪಿ, ಮುದ್ದಿಸಿ ನನ್ನ ತಪ್ಪುಗಳನ್ನು ತಿದ್ದಿ, ನನ್ನನ್ನು ಒಂದು ಮೂರ್ತಿಯಾಗಿ ಮಾಡಿ, ನಾನು ನನ್ನ ಜೀವನವನ್ನು ಸುಂದರವಾಗಿ ನಿರ್ವಹಿಸುತ್ತಿದ್ದೇನೆ. ಅಂದರೆ ಅದಕ್ಕೆ ಕಾರಣ ತನ್ನ ತಾಯಿ ಅಲ್ಲವೇ?
ತೊದಲು ನುಡಿ ಕೇಳಿ ಸಂತಸಪಟ್ಟು
ಮತ್ತೆ-ಮತ್ತೆ ಹೇಳಿಸಿ ಚಪ್ಪಾಳೆ ತಟ್ಟಿದವಳು
ನೀನಲ್ಲವೇ ಅವ್ವ
ನನ್ನ ತೊದಲು ನುಡಿಗೆ ಶ್ರೀಕಾರ ಹಾಕಿ
ನನ್ನ ಜನಧನಿಗೆ ಮುನ್ನುಡಿ ಇಟ್ಟವಳು
ನೀನಲ್ಲವೇ ಅವ್ವ
ನನ್ನ ಗೆಜ್ಜೆ ಸದ್ದಿನ ಅಂಬೆಗಾಲಿಗೆ
ಮುತ್ತನಿಕ್ಕಿ ಸಂತಸಪಟ್ಟವಳು
ನೀನಲ್ಲವೇ ಅವ್ವ
ಡಾ.ಭಾಗ್ಯಜ್ಯೋತಿ ಕೋಟಿಮಠ
ಮುಖ್ಯ ಶಿಕ್ಷಕಿ, ಶಿರೂರು