ಹುಬ್ಬಳ್ಳಿ-ಧಾರವಾಡ ಸುದ್ದಿ

ಜನಮನದಲ್ಲಿ ಅನುರಣಿಸಿದ ಡರ್ಟ್ ಟ್ರ್ಯಾಕ್ ಬೈಕ್ ರೈಡಿಂಗ್

ವಿದ್ಯಾಕಾಶಿಯಲ್ಲಿ ನಡೆದ ಸ್ಪರ್ಧೆಗೆ ಸಚಿವ ಸಂತೋಷ ಲಾಡ್ ಚಾಲನೆ
ಲಿಂಕ್ ಕ್ಲಿಕ್ ಮಾಡಿ ಡರ್ಟ್ ಟ್ರ್ಯಾಕ್ ಬೈಕ್ ರೈಡಿಂಗ್ ವಿಡಿಯೋ ನೋಡಿ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ಗಾಡ್‌ಸ್ಪೀಡ್ ಸಂಘಟನೆ ವತಿಯಿಂದ ಎಂಆರ್‌ಎಫ್ ಡರ್ಟ್ ಟ್ರ್ಯಾಕ್ ಎಫ್‌ಎಂಎಸ್‌ಸಿಐ(ಫೆಡರೇಷನ್ ಆಫ್ ಮೋಟರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ) ನ್ಯಾಷನಲ್ ಚಾಂಪಿಯನ್‌ಶಿಪ್ ಬೈಕ್ ರೈಡಿಂಗ್ ಸ್ಪರ್ಧೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಚಾಲನೆ ನೀಡಿದರು.


ನಂತರ ಮಾತನಾಡಿ, ಜಿಲ್ಲೆಯಲ್ಲಿ ಇಂದು ಬೈಕ್ ರೈಡಿಂಗ್ ಸ್ಪರ್ಧೆ ನಡೆಯುತ್ತಿರುವುದು ಖುಷಿಯ ಸಂಗತಿ. ಮುಂದಿನ ದಿನಗಳಲ್ಲಿ ಇನ್ನೂ ವಿವಿಧ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳು ಧಾರವಾಡದಲ್ಲಿ ನಡೆಯಬೇಕು ಎಂದರು.ಬೈಕ್ ರೈಡಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲು ಎಲ್ಲರ ಸಹಕಾರ ಬಹಳ ಮುಖ್ಯ. ಇಂದು ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಎಲ್ಲ ಸ್ಪರ್ಧಿ ಗಳಿಗೂ ಅಭಿನಂದನೆಗಳು ಎಂದು ಶುಭ ಹಾರೈಸಿದರು.


ಪ್ರಥಮ ಬಾರಿಗೆ ಪೇಡೆನಗರಿಯಲ್ಲಿ ಆಯೋಜಿಸಿರುವ ಮೂರನೇ ಸುತ್ತಿನ ರಾಷ್ಟ್ರಮಟ್ಟದ ಸ್ಪರ್ಧೆ ಇದಾಗಿತ್ತು. ಒಟ್ಟು ಐದು ಸುತ್ತುಗಳಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ನಡೆಯಿತು. ಈಗಾಗಲೇ ಎರಡು ಸುತ್ತುಗಳು ದೇಶದ ವಿವಿಧ ಕಡೆಗಳಲ್ಲಿ ನಡೆದಿದ್ದವು.


ಬೈಕ್ ರೈಡರ್‍ಸ್ ಹಾಗೂ ಇದರಲ್ಲಿ ಆಸಕ್ತಿ ಇರುವವರಿಗೆ ಒಂದು ಉತ್ತಮ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ಧಾರವಾಡದಲ್ಲಿ ಮೂರನೇ ಸುತ್ತಿನ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. 10 ವಿವಿಧ ವಿಭಾಗಗಳಲ್ಲಿ ಬೈಕ್ ರೈಡಿಂಗ್ ಸ್ಪರ್ಧೆಗಳು ನಡೆದವು. ಮಹಿಳೆಯರು ಸಹ ಪಾಲ್ಗೊಂಡಿದ್ದರು. ದೇಶದ ವಿವಿಧ ಭಾಗಗಳಿಂದ ಈಗಾಗಲೇ 90ಕ್ಕೂ ಅಧಿಕರ ಜನರು ಭಾಗವಹಿಸಿದ್ದರು.


ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ, ಸಂಘಟನೆ ಅಧ್ಯಕ್ಷ ಶಾಮ್ ಕೋಠಾರಿ, ಸಂಘಟಕರಾದ ವಿಜಯ ದಂಡಗಿ, ಅಶುತೋಷ ಕಾಳೆ, ಮಾಜಿ ಮೇಯರ್ ಅನಿಲಕುಮಾರ ಪಾಟೀಲ, ಕೆಪಿಸಿಸಿ ಸಮನ್ವಯಾಧಿಕಾರಿ ಜಿ. ದೇವಕಿ ಯೋಗಾನಂದ, ಪಾಲಿಕೆ ಸದಸ್ಯ ಮಯೂರ ಮೋರೆ, ಹಜರತಅಲಿ ಗೊರವನಕೊಳ್ಳ, ವಿಜಯ್ ಅರೋರಾ, ಮಧುಸೂದನ್ ರೀನಿಯಸ್, ಶಂಖಮ್, ಅಫೊಟನ್ ಕಲಾ ಅವರು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *