ಹುಬ್ಬಳ್ಳಿ-ಧಾರವಾಡ ಸುದ್ದಿ
ಹುಬ್ಬಳ್ಳಿಯಲ್ಲಿ ’ಗ್ರೀಲ್ಡ್ ಆಂಡ್ ಫ್ರೈಡ್’ ಆರಂಭ

ಹುಬ್ಬಳ್ಳಿಯಲ್ಲಿ ’ಗ್ರೀಲ್ಡ್ ಆಂಡ್ ಫ್ರೈಡ್’ ಆರಂಭ

ಹುಬ್ಬಳ್ಳಿ: ಮುಂಬೈನ ಗ್ರೀಲ್ಡ್ ಆಂಡ್ ಫ್ರೈಡ್ ಫ್ರಾಂಚೈಸಿ ರೆಸ್ಟೋರೆಂಟ್‌ನ ಎರಡನೇ ಶಾಖೆ ಇಂದು ಹುಬ್ಬಳ್ಳಿಯಲ್ಲಿ ಉದ್ಘಾಟನೆಗೊಂಡಿತು.


ವಿದ್ಯಾನಗರದ ಚೇತನಾ ಕಾಲೇಜ್ ಎದುರಿನ ವಿಂಡ್ಸರ್ ಮ್ಯಾನರ್‌ನ ನೆಲಮಹಡಿಯಲ್ಲಿ ನೂತನ ರೆಸ್ಟೋರೆಂಟ್‌ನ್ನು ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಹಾಗೂ ಓಂ ಗಣೇಶಾಯ ಫುಡ್ ಮತ್ತು ಬೆವರೇಜಸ್ ಪ್ರೈ.ಲಿ.ನ ಸುಮೀತ ಶೀತಲ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುಮೀತ ಶೀತಲ್ ಈಗಾಗಲೇ ಕಾರವಾರದಲ್ಲಿ ಮೊದಲನೇ ಶಾಖೆ ಯಶಸ್ವಿಯಾಗಿ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದು, ಫ್ರೈಡ್ ಚಿಕನ್, ಫಿಶ್ ಹಾಗೂ ಪ್ರೌನ್ಸ್‌ಗಳು ಅಲ್ಲದೇ ದಂ ಬಿರಿಯಾನಿ ಸೇರಿದಂತೆ ವಿವಿಧ ಬಗೆಯ ಬಿರಿಯಾನಿಗಳು, ಸಿಗ್ನೇಚರ್ ತಂದೂರಿ ರೆಸ್ಟೋರೆಂಟ್‌ನಲ್ಲಿ ದೊರೆಯಲಿದ್ದು, ಗ್ರಾಹಕರಿಗೆ ಸ್ವಾದಿಷ್ಟವಾದ ಆಹಾರವನ್ನು ನೀಡಲಿದೆ ಎಂದರು.


ಮುಂಬೈ ಮೂಲದ ತಂಡ ಇಲ್ಲಿನ ಅಡುಗೆ ಸಹಾಯಕರಿಗೆ ವಿಶೇಷ ತರಬೇತಿ ನೀಡಿದೆ ಎಂದು ಹೇಳಿದರು.
ಹುಬ್ಬಳ್ಳಿಯ ಫ್ರಾಂಚೈಸಿ ಮಾಲಕರಾದ ನಕ್ವಿ ಅಹ್ಮದ ಶೇಖ್ ಮಾತನಾಡಿ, ಸ್ಥಳೀಯ ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡುವ ಗುರಿ ಹೊಂದಿದ್ದು, ಏಕಕಾಲದಲ್ಲಿ ೨೮ ಜನರು ಒಟ್ಟಿಗೆ ಕುಳಿತು ಊಟ ಮಾಡಬಹುದಾಗಿದೆ ಎಂದರು.
ಪ್ರದೀಪ ಶೆಟ್ಟರ ಮಾತನಾಡಿ, ಗ್ರೀಲ್ಡ್ ಆಂಡ್ ಫ್ರೈಡ್ ಫ್ರಾಂಚೈಸಿಗಳು ರಾಜ್ಯಾದ್ಯಂತ ಆರಂಭಗೊಳ್ಳಲಿ ಎಂದು ಶುಭ ಹಾರೈಸಿದರು.
ಮಹೇಶ ದ್ಯಾವಪ್ಪನವರ, ಎಂ.ಕೆ. ಮುಲ್ಲಾ ಸೇರಿದಂತೆ ಅನೇಕ ಗಣ್ಯರು ಇದ್ದರು.

administrator

Related Articles

Leave a Reply

Your email address will not be published. Required fields are marked *