ಹುಬ್ಬಳ್ಳಿ-ಧಾರವಾಡ ಸುದ್ದಿ
28ಕ್ಕೆ ಸಂಗೀತ,ಭಾವಾಭಿನಯ ಜುಗಲ್ ಬಂದಿ

28ಕ್ಕೆ ಸಂಗೀತ,ಭಾವಾಭಿನಯ ಜುಗಲ್ ಬಂದಿ

ಹುಬ್ಬಳ್ಳಿ: ವಿದ್ಯಾನಗರದ ರಾಮಕೃಷ್ಣ ವಿವೇಕಾನಂದಾಶ್ರಮದ ಸಭಾಭವನದಲ್ಲಿ ದಿ.28ರಂದು ಸಂಜೆ 5.30ಕ್ಕೆ ಜನನಿ ಮ್ಯೂಸಿಕ್ ಸಂಸ್ಥೆ ಶಿರಸಿ ವತಿಯಿಂದ ’ಸ್ವರ ಜತಿ ಸಂಗೀತ ಮತ್ತು ಭಾವಾಭಿನಯ’ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ.
ವಿದುಷಿ ರೇಖಾ ದಿನೇಶ್ ಗಾಯನ ಪ್ರಸ್ತುತ ಪಡಿಸಲಿದ್ದು, ಇವರ ಹಾಡು ಗಳಿಗೆ ಖ್ಯಾತ ಭರತನಾಟ್ಯ ಕಲಾವಿದೆ ಡಾ.ಸಹನಾಭಟ್ ಭಾವಾಭಿನಯದ ಮೂಲಕ ಹೆಜ್ಜೆ ಹಾಕಲಿದ್ದಾರೆ.ಖ್ಯಾತ ತಬಲಾ ವಾದಕ ಡಾ|| ಶ್ರಿಹರಿ ದಿಗ್ಗಾವಿ ಹಾಗೂ ಹಾರ್ಮೋನಿಯಂ ಬಸವರಾಜ್ ಹಿರೇಮಠ್ ಸಾಥ್ ನೀಡಲಿದ್ದಾರೆ.
ಸಂಜೆ 7 ಗಂಟೆಗೆ ಸ್ವಾಮಿ ರಘುವೀರಾನಂದಜಿ ಸಾನಿಧ್ಯದಲ್ಲಿ ನಡೆವ ಉದ್ಘಾಟನಾ ಸಮಾರಂಭದಲ್ಲಿ ಸಾಕ್ರೆ ಶಾಲೆ ಪ್ರಾಂಶುಪಾಲೆ ಶರ್ಮಿಳಾ ಹೇಮಂತ್,ಡ್ಯಾನ್ಸ್ ಫಿಟ್‌ನೆಸ್ ಅಕಾಡೆಮಿಯ ಅಮಿತ್ ಅಶೋಕ್ ಕಟಾವ್ಕರ್, ಜನನಿ ಕಾರ್ಯದರ್ಶಿ ದಿನೇಶ್ ಹೆಗಡೆ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಆರಂಭದಲ್ಲಿ ಕುಮಾರಿ ರಹಿ ಗಲಗಲಿ ಹಾಗೂ ಕುಮಾರ್ ಅಥರ್ವ ಇವರಿಂದ ತಬಲಾ ಜುಗಲ್ ಬಂದಿ ಹಾಗೂ ಸಂಪದ ಎಸ್, ಪ್ರತಿಭಾ ತರ್ಲಗಟ್ಟಿ, ಮಧುಶ್ರೀ ಶೇಟ್ ಹಾಗೂ ಧನ್ಯಾ ಹೆಗಡೆ ಗಾಯನವಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ.

ಹಾಡುಗಳಿಗೆ ಜೀವ ತುಂಬುವ ರೇಖಾ

ಶಿರಸಿ ಮೂಲದ ರೇಖಾ ದಿನೇಶ ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ಗಣಪತಿ ಭಟ್ ಹಾಸಣಗಿಯವರ ಶಿಷ್ಯೆ.ಶ್ರೀಪಾದ ಹೆಗಡೆ ಕಂಪ್ಲಿ, ಗೋವಾದ ಡಾ|| ಅಲ್ಕಾದೇವಿ ಮಾರೋಳ್ಕರ್ ಅವರಲ್ಲಿ ವಿಭಿನ್ನ ಘರಾನಾಗಳಲ್ಲಿ ಉನ್ನತ ವ್ಯಾಸಂಗ ಮಾಡಿ ಉತ್ಕೃಷ್ಟ ಗಾಯಕಿಯಾಗಿ ಹೊರ ಹೊಮ್ಮಿದ್ದಾರೆ.
ಕಲಾಸಕ್ತ ಪತಿ ದಿನೇಶ್‌ಹೆಗಡೆಯವರೊಂದಿಗೆ ಜನನಿ ಮ್ಯೂಸಿಕ್ ಸಂಸ್ಥೆ ಹುಟ್ಟು ಹಾಕಿದ್ದು ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಕಲಿಸುತ್ತಿದ್ದಾರೆ
ಭಕ್ತಿಗೀತೆ, ಭಾವಗೀತೆಗೆ ರಾಗ ಸಂಯೋಜನೆ ಮಾಡಿರುವ ಇವರು
ಈ ಟಿವಿಯ ‘ಎದೆ ತುಂಬಿ ಹಾಡುವೆನು’ ಸುವರ್ಣ ಟಿವಿಯ ‘ಸ್ಟಾರ್ ಸಿಂಗರ್’ ಕಾರ್ಯಕ್ರಮದಿಂದ ಪ್ರಖ್ಯಾತಿ ಹೊಂದಿದ್ದಾರೆ. ಉದಯ, ಕಸ್ತೂರಿ, ಚಂದನಮುಂತಾದ ವಾಹಿನಿ ಅಲ್ಲದೇ ವಿವಿಧ ಉತ್ಸವಗಳಲ್ಲೂ ಪಾಲ್ಗೊಂಡಿ ದ್ದಾರೆ. ಹಿಂದಿಯ ‘ಮೇರಿ ಆವಾಜ್ ಸುನೋ’ದಲ್ಲಿ ಹಾಡಿ ಸಂಗೀತ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ವಿಶೇಷ ಹೊಗಳಿಕೆಗೂ ಪಾತ್ರರಾಗಿದ್ದಾರೆ.

 

 

administrator

Related Articles

Leave a Reply

Your email address will not be published. Required fields are marked *