ಹುಬ್ಬಳ್ಳಿ-ಧಾರವಾಡ ಸುದ್ದಿ
ಮೈಸೂರು ಜೆಎಸ್‌ಎಸ್ ವಿವಿಧ ಕಟ್ಟಡಗಳ ಭೂಮಿಪೂಜೆ ನಾಳೆ

ಮೈಸೂರು ಜೆಎಸ್‌ಎಸ್ ವಿವಿಧ ಕಟ್ಟಡಗಳ ಭೂಮಿಪೂಜೆ ನಾಳೆ

ಧಾರವಾಡ: ನಗರದ ಕೆಲಗೇರಿ ಶ್ರೀ ಶಿವರಾತ್ರೀಶ್ವರನಗರದಲ್ಲಿರುವ ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠದ ಜಗದ್ಗುರು ಶ್ರೀ ಶಿವರಾತ್ರೀಶ್ವರ ವಾಕ್ ಮತ್ತು ಶ್ರವಣ ಸಂಸ್ಥೆಯ ನೂತನ ಕಾಲೇಜು ಹಾಗೂ ವಿದ್ಯಾರ್ಥಿ ವಸತಿ ನಿಲಯಗಳ ಕಟ್ಟಡಗಳ ಭೂಮಿಪೂಜಾ ಸಮಾರಂಭ ಏ. 5ರಂದು ಬೆಳಗ್ಗೆ 11 ಗಂಟೆಗೆ ಸಂಸ್ಥೆಯ ಆವರಣದಲ್ಲಿ ಜರುಗಲಿದೆ ಎಂದು ವೈದ್ಯಕೀಯ ಕಾಲೇಜು ನಿರ್ದೇಶಕ ಮಹೇಶ ಹೇಳಿದರು.


ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಭೂಮಿಪೂಜೆ ನೆರವೇರುವುದು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಆಚಾರ್ ಹಾಲಪ್ಪ, ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಜಿಲ್ಲೆಯ ಶಾಸಕರು, ಚುನಾಯಿತ ಪ್ರತಿನಿಧಿಗಳು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.


ಉತ್ತರ ಕರ್ನಾಟಕ ಹಾಗೂ ಸುತ್ತಲಿನ ಜನರಿಗೆ ಅನುಕೂಲವಾಗಲೆಂದು ವಾಕ್ ಮತ್ತು ಶ್ರವಣ ಸಂಸ್ಥೆಯನ್ನು 2014ರಲ್ಲಿ ಆರಂಭಿಸಲಾಗಿದೆ. ಇದೀಗ ನೂತನ ಕಾಲೇಜು ಕಟ್ಟಡ ನಿರ್ಮಾಣವಾಗಲಿದ್ದು, ಬ್ಯಾಚುಲರ್ ಆಫ್ ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ (ಬಿಎಎಸ್‌ಎಲ್‌ಪಿ) 4 ವರ್ಷಗಳ ಕೋರ್ಸ್ ಇರಲಿದೆ. 1 ವರ್ಷದಲ್ಲಿ ಕಾಲೇಜು ಕಟ್ಟಡ, ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದ್ದು, 40 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಇರಲಿದೆ. ಎಲ್ಲ ವಯೋಮಾನದವರಲ್ಲಿ ಕಂಡುಬರುವ ವಿವಿಧ ರೀತಿಯ ವಾಕ್ ಮತ್ತು ಶ್ರವಣ ದೋಷಗಳಿಗೆ ಕ್ಲಿನಿಕಲ್ ಸೇವೆ ಒದಗಿಸಲಾಗುವುದು ಎಂದರು.
ಆಡಳಿತಾಧಿಕಾರಿ ಎಂ.ಪಿ. ಬಗಲಿ, ಸಹಾಯಕ ಆಡಳಿತಾಧಿಕಾರಿ ಎಂ. ಮಹೇಂದ್ರ ಪಟೇಲ, ಪ್ರಾಚಾರ್ಯ ಡಾ. ಜೀಜೊ, ಪಬ್ಲಿಕ್ ಸ್ಕೂಲ್ ಪ್ರಾಚಾರ್ಯೆ ಲೀನಿಯನ್ ಅಂಥೋನಿ ಶಾನ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

administrator

Related Articles

Leave a Reply

Your email address will not be published. Required fields are marked *