ಹುಬ್ಬಳ್ಳಿ-ಧಾರವಾಡ ಸುದ್ದಿ
ಡ್ರಾಮಾ ಮಾಡುವ ಜಾಯಮಾನ ನನ್ನದಲ್ಲ

ಡ್ರಾಮಾ ಮಾಡುವ ಜಾಯಮಾನ ನನ್ನದಲ್ಲ

“ಕಲಘಟಗಿ ಕಾಂಗ್ರೆಸ್ ಟಿಕೇಟ್ ಶೀಘ್ರ ಇತ್ಯರ್ಥ”

ಮುಂದಿನ ತಿಂಗಳಿಂದ ’ನನ್ನ ಕ್ಷೇತ್ರ -ನನ್ನ ಹಕ್ಕು’ ಅಭಿಯಾನ

ಅಳ್ನಾವರ: ಕಲಘಟಗಿ ಕ್ಷೇತ್ರದ ಕಾಂಗ್ರೆಸ್ ಟಿಕೇಟ ಅತೀ ಶೀಘ್ರದಲ್ಲಿ ಪಕ್ಷದ ಹೈಕಮಾಂಡ ಇತ್ಯರ್ಥ ಮಾಡಲಿದೆ. ಕಾಂಗೈ ಪಕ್ಷಕ್ಕೆ ನಿಷ್ಟಾವಂತನಾಗಿ, ಸಾಕಷ್ಟು ಸೇವೆ ಹಾಗೂ ತ್ಯಾಗ ಮಾಡಿದ ನನಗೆ ಟಿಕೇಟ ದೊರೆಯುವ ಭರವಸೆ ನೂರಕ್ಕೆ ನೂರರಷ್ಟು ಇದೆ ಎಂದು ಮಾಜಿ ಶಾಸಕ ನಾಗರಾಜ ಛಬ್ಬಿ ಹೇಳಿದರು.


ಈಚೆಗೆ ಕಾಂಗ್ರೆಸ್ ಮುಖಂಡ ಸಂತೋಷ್ ಲಾಡ್ ಪತ್ರಿಕಾ ಘೋಷ್ಟಿ ನಡೆಸಿ ಕಾಂಗ್ರೆಸ್ ಟಿಕೇಟ ನನಗೆ. ನನ್ನ ಸ್ಪರ್ಧೆ ಕಲಘಟಗಿ ಕ್ಷೇತ್ರದಲ್ಲಿ ಖಚಿತ ಎಂಬ ಸಂದೇಶ ನೀಡಿದ ಬೆನ್ನಲ್ಲೆ ಇನ್ನೊಬ್ಬ ಟಿಕೇಟ ಆಕಾಂಕ್ಷಿ ನಾಗರಾಜ ಛಬ್ಬಿ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಪಕ್ಷ ನನ್ನ ಸೇವೆಗೆ ಮನ್ನಣೆ ನೀಡಲಿದೆ. ಪಕ್ಷ ನನಗೆ ಅನ್ಯಾಯ ಮಾಡಲ್ಲ ಎಂದು ಹೇಳುವ ಮೂಲಕ ತೀವೃ ಪೈಪೋಟಿ ಒಡ್ಡಿದ್ದಾರೆ.
ನಾನು ಹೆಚ್ಚು ಮಾತನಾಡುವ ವ್ಯಕ್ತಿ ಅಲ್ಲ. ನನ್ನದು ಮಾತು ಕಡಿಮೆ, ಅಭಿವೃದ್ಧಿ ಮಾತ್ರ ನನ್ನ ಮೂಲ ಮಂತ್ರ. ಜನರ ಮೂಗಿಗೆ ತುಪ್ಪ ಹಚ್ಚುವ ಕಾರ್ಯ ನನ್ನಿಂದ ಆಗುವುದಿಲ್ಲ. ಯಾವುದೆ ಸ್ಟಾಯಿಲ್ ಅಥವಾ ಡ್ರಾಮಾ ಮಾಡುವ ಜಾಯಮಾನ ನನ್ನದಲ್ಲ, ಮಾತಿನಿಂದ ಬದುಕು ಕಟ್ಟಲು ಆಗುವುದಿಲ್ಲ. ಜನರ ಗೋಳು ತಪ್ಪಬೇಕು. ಕಲಘಟಗಿ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆ ತರಬೇಕು ಎಂಬ ಹಂಬ ನನ್ನದು. ಬಡವರಿಗೆ .ರೈತರಿಗೆ ಅನಕೂಲ ಮಾಡುವ ಮಹಾದಾಸೆ ನನ್ನದಾಗಿದೆ ಇದಕ್ಕೆ ಪಕ್ಷ ಕೂಡಾ ಅವಕಾಶ ನೀಡಲಿದೆ ಎಂದರು.

ಕಲಘಟಗಿ ಕ್ಷೇತ್ರ ಜನರು ಮುಗ್ದ ಹಾಗೂ ಬಡವರು. ಅವರು ನೀಡುವ ಮತ ಅತೀ ಅಮೂಲ ವ್ಯಾದದ್ದು. ಆರಿಸಿ ಬಂದ ಪ್ರತಿನಿಧಿಗಳು ಜನರ ನೋವಿಗೆ ಸ್ಪಂದಿಸುವ ಹಾಗೂ ಸರಳವಾಗಿ ಜನರ ಕೈಗೆ ದೊರೆಯುವಂತಹ ವಾತಾವರಣ ನಿರ್ಮಿಸಲು ಶ್ರಮಿಸುವೆ. ಈ ಬಾರಿ ಕಲಘಟಗಿ ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ. ಒಳ್ಳೆಯ ವ್ಯಕ್ತಿ ಇಲ್ಲಿ ಶಾಸಕರಾಗಿ ಆಯ್ಕೆಯಾಗುವದು ಖಚಿತ. ಈ ಬಾಗದ ನೀರಾವರಿ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡುವದು ಅವಶ್ಯವಿದೆ .
ನನ್ನ ಕ್ಷೇತ್ರ- ನನ್ನ ಹಕ್ಕು ಎಂಬ ವಿನೂತನ ಅಭಿಯಾನ ಮುಂದಿನ ತಿಂಗಳಿಂದ ಕ್ಷೇತ್ರದಲ್ಲಿ ಆರಂಭವಾಗಲಿದೆ. ಇದಕ್ಕೆ ನಾನು ಬೆಂಬಲ ನೀಡಲಿದ್ದೇನೆ. ಇದು ಪಕ್ಷಾತೀತ ಹೋರಾಟ. ಕ್ಷೇತ್ರದ ಜನರೆ ಈ ಅಭಿಯಾನದ ಚುಕ್ಕಾಣಿ ಹಿಡಿಯಲಿದ್ದಾರೆ. ಜನರಿಂದ, ಜನರಿಗಾಗಿ ನಡೆಯುವ ಈ ಅಭಿಯಾನದಡಿ ಪ್ರತಿ ಮನೆಗೆ ಹೋಗಿ ಶಾಸಕರು ಹೇಗಿರಬೇಕು .ಶಾಸಕರ ಕೆಲಸ ಎನು, ಸರ್ಕಾರದ ಸೌಲಭ್ಯ ದೊರೆಯುವ ಬಗ್ಗೆ ತಿಳುವಳಿಕೆ ನೀಡಲಾಗುವದು ಎಂದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಎಲ್ಲಡೆ ಕಾಂಗ್ರೆಸ್ ಪಕ್ಷದ ಪರ ಒಲವು ಹೆಚ್ಚಾಗಿದೆ. ಕ್ರಾಂತಿಕಾರಿ ಬದಲಾವಣೆ ನೆಡೆಯಲಿದೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ೧೩೦ ರಿಂದ ೧೪೦ ಸೀಟು ಪಡೆದು ಮತ್ತೆ ಅಧಿಕಾರ ಗದ್ದುಗೆ ಎರಲಿದೆ , ಕಾಂಗೈ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವ ಕಾಲ ಸನ್ನಿಹಿತವಾಗಿದೆ ಎಂದರು.

ಕಿರಣ ಪಾಟೀಲ ಕುಲಕರ್ಣಿ, ದಸಗೀರ ಹುಣಶಿಕಟ್ಟಿ, ಶಿವಶಂಕರ ಗೆನಪ್ಪನವರ, ಅಜಿಜ್ ದೇವರಾಯಿ, ಶಂಕರ ಮುಗಳಿ, ಈರಪ್ಪ ಬಳ್ಳಾರಿ, ಹನಮಂತ ಕಿತ್ತೂರ, ನಾಗಪ್ಪ ವಾಲಿಕರ, ಇಮಾಮ ಮುಕಾಸಿ ಇದ್ದರು.

 

administrator

Related Articles

Leave a Reply

Your email address will not be published. Required fields are marked *