ಸಂತ್ರಸ್ತ ಯುವಕ ಪತ್ತೆ: ಠಾಣೆಯಲ್ಲಿ ವಿಚಾರಣೆ
ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಯುವಕನೊಬ್ಬನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಲ್ಲದೇ ಆ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಜಾಲ ತಾಣದಲ್ಲಿ ವೈರಲ್ ಮಾಡಿದ್ದಾರೆನ್ನಲಾದ ಐವರನ್ನು ಬೆಂಡಿಗೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತನ್ಮಧ್ಯೆ ಮಾಧ್ಯಮಗಳಲ್ಲಿ ಸುದ್ಧಿ ಬಿತ್ತರವಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಸಂತ್ರಸ್ತ ಯುವಕ ಸಂದೀಪನನ್ನು ಪತ್ತೆ ಹಚ್ಚುವಲ್ಲಿಯೂ ಖಾಕಿ ಪಡೆ ಯಶಸ್ವಿಯಾಗಿದ್ದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಲಾಗಿದೆ.
ಪೊಲೀಸರಿಗೆ ಹೇಳಿಕೆ ನೀಡುವಲ್ಲಿ ಗೊಂದಲ ಸೃಷ್ಠಿಸುತ್ತಿರುವ ಸಂತ್ರಸ್ಥ ಯುವಕ ಮತ್ತೆ ತನ್ನ ಮೇಲೆ ಹಲ್ಲೆಯಾಗುವ ಭಯದಿಂದ ಹೇಳಿಕೆ ಕೊಡಲು ನಿರಾಕರಣೆ ಮಾಡುತ್ತಿದ್ದಾನೆನ್ನಲಾಗಿದೆ.ಅಲ್ಲದೇ ದೂರನ್ನೂ ಸಹ ದಾಖಲಿಸಿಲ್ಲವಾಗಿದೆ.
ಸೆಟ್ಲಮೆಂಟ್‌ನ ಪುಡಿ ರೌಡಿಗಳಿಂದ ಈ ಕೃತ್ಯ ನಡೆದಿದ್ದು, ಹಲ್ಲೆಗೊಳಗಾದವ ಸಂದೀಪ ಎನ್ನಲಾಗಿದ್ದು ಈ ಘಟನೆ ಮೂರ್‍ನಾಲ್ಕು ತಿಂಗಳ ಹಿಂದೆ ನಡೆದಿದೆ ಎನ್ನಲಾಗಿದೆ.
ಸೆಟ್ಲಮೆಂಟ್‌ನ ಅಣ್ಣ ತಮ್ಮಂದಿರನ್ನು ಹಾಗೂ ತಾಯಿ ಮೇಲೆ ಬೈದು ಇನಸ್ಟಾಗ್ರಾಂನಲ್ಲಿ ವಿಡಿಯೋ ಹಾಕಿದ್ದಕ್ಕಾಗಿ ಸಂದೀಪನನ್ನು ಆತನ ಪರಿಚಯದವರೇ ಆದ ಐವರು ಹಲ್ಲೆ ಮಾಡಿ ಬೆತ್ತಲೆ ಮಾಡಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಸಂದೀಪ ದೂರು ದಾಖಲಿಸಿಲ್ಲವಾದರೂ ಈ ಘಟನೆಗೆ ಸಂಬಂಧಿಸಿದಂತೆ ಐವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಪೊಲೀಸ ಆಯುಕ್ತರಾಗಿರುವ ಸಂತೋಷ ಬಾಬು ಅವರು
ಪ್ರಜ್ವಲ್, ವಿನಾಯಕ, ಗಣೇಶ, ಸಚಿನ್ ಅಲ್ಲದೇ ಮಂಜು ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದಿದ್ದಾರೆ.