ರಿಯಾಯತಿ ಇಲ್ಲದೇ ’ಗನ್’ಗೆ ಪರ್ಮಿಷನ್ ಕೊಟ್ಟವರಾರು!
ಹುಬ್ಬಳ್ಳಿ : ನಗರದ ಹೊರವಲಯದ ಕುಸುಗಲ್ ರಸ್ತೆಯ ಎವಿಕೆ ಗಾರ್ಡನ್ ಫಾರ್ಮಹೌಸಲ್ಲಿ ರವಿವಾರ ರಾತ್ರಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ನಡೆದ ಆರ್ ಟಿಐ ಕಾರ್ಯಕರ್ತ ಫಿಲೋಮಿನ್ ಪುತ್ರನ ಜನ್ಮದಿನಾಚರಣೆ ವೇಳೆ ಗುಂಡು ಹಾರಿಸಿದ ಪ್ರಕರಣ ಮುಚ್ಚಿ ಹಾಕಲು ಎಲ್ಲ ಯತ್ನ ನಡೆದಿದೆ ಎನ್ನುವುದು ಮೇಲ್ನೋಟಕ್ಕೆ ಸಾಭೀತಾಗುವಂತಿದೆ ಎಂಬ ಗುಸು ಗುಸು ದಟ್ಟವಾಗಿದೆ.
ರೌಡಿಶೀಟರುಗಳೇ ಹೆಚ್ಚು ತುಂಬಿದ್ದ ಅಂದಿನ ಪಾರ್ಟಿಯಲ್ಲಿ ರಾಜಕೀಯ ಸಂಪರ್ಕವಿರುವ ಪ್ರಮುಖ ವ್ಯಕ್ತಿಗಳು, ಪತ್ರಕರ್ತರು, ಕೆಲ ಪೊಲೀಸ್ ಸಿಬ್ಬಂದಿಗಳು ಪಾಲ್ಗೊಂಡಿದ್ದರೆಂದು ಹೇಳಲಾಗುತ್ತಿದೆ. ಪ್ರಭಾವಿ ರಾಜಕಾರಣಿಗಳ ಮಕ್ಕಳ ಜತೆಗೆ ಈ ಹಿಂದೆ ವಿದ್ಯಾನಗರದ ಕಾಲೇಜೊಂದರಲ್ಲಿ ಗನ್ ತೋರಿಸಿ ಸುದ್ದಿಯಾಗಿದ್ದ ಭೂಪ ಸುಂದರ ಪೌಲ್ ಈಗ ಗುಂಡು ಹಾರಿಸಿದ್ದರೂ ಅದೇ ’ಲಿಂಕ್’ ಬಳಸಿ ಎಳ್ಳು ನೀರು ಬಿಡಿಸಲು ಮುಂದಾಗಿದ್ದಾರೆನ್ನಲಾಗುತ್ತಿದೆ.
ಗ್ರಾಮೀಣ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಅಲ್ಲಿದ್ದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದರೂ, ಸಿಸಿಟಿವಿ ನಾಲ್ಕು ದಿನಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಅಲ್ಲದೇ ಫಿಲೋಮಿನ್ ಗನ್ ಬಳಕೆಯಾಗಿಲ್ಲ.,ಕಾಟ್ರೆಜ್ಡ್ ಯಾವುದು ಸ್ಥಳದಲ್ಲಿ ಸಿಕ್ಕಿಲ್ಲ ಎಂದು ಹೇಳುತ್ತಿರುವುದನ್ನು ನೋಡಿದರೆ ಎಫ್ ಎಸ್ ಎಲ್ ವರದಿ ಇಲ್ಲದೇ ಅಂತಿಮ ಶರಾ ಬರೆದು ಬಿಟ್ಟರೆ ಎನ್ನುವಂತಾಗಿದ್ದು ಹಾಗಾದರೆ ಗುಂಡು ಹಾರಿದ್ದು ಯಾರ ಗನ್‌ನಿಂದ ಎಂಬುದೇ ನಿಗೂಢವಾಗಿದೆ.
ನೀತಿ ಸಂಹಿತೆ ಹಿನ್ನಲೆಯಲ್ಲಿ ಶಸ್ತ್ರಾಸ್ತಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಬೇಕು.ಆದರೆ ಜೀವ ಭಯದ ನೆಪದಲ್ಲಿ ನೀತಿ ಸಂಹಿತೆಯಿಂದ ವಿನಾಯತಿ ಕೇಳಿದ್ದ ಫಿಲೋಮಿನ್
ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದ ಅಷ್ಟೆ. ಆದರೆ ವಿನಾಯತಿ ಸಿಕ್ಕಿರಲಿಲ್ಲ. ಹಾಗಾದರೆ ಕಳೆದ ಮೇ13 ರಂದೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರೂ
ಇದುವರೆಗೆ ಫಿಲೋಮಿನಾ ಅರ್ಜಿ ಅರ್ಜಿಯ ಕುರಿತು ತೀರ್ಮಾನ ತೆಗೆದುಕೊಂಡಿಲ್ಲದಿರುವುದು ನಿಜಕ್ಕೂ ಆಶ್ಚರ್ಯಕ್ಕೆ ಕಾರಣವಾಗಿದೆ.
ಅಧಿಕೃತ ರಿಯಾಯತಿ ಪರವಾನಿಗೆ ಇಲ್ಲದೇ ಫಿಲೋಮಿನ್ ಗನ್ ಇಟ್ಟುಕೊಳ್ಳಲು ಹೇಗೆ ಸಂಬಂಧಿಸಿದ ಠಾಣೆ ಪೊಲೀಸರು ಅನುಮತಿ ನೀಡಿದರು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ರಿಯಾಯತಿ ಪರವಾನಿಗೆಗೆ ಅರ್ಜಿ ನೀಡಿದ್ದರು. ಈ ಬಗ್ಗೆ ಪರಿಶೀಲಿಸಲು ಸ್ಥಳೀಯ ಠಾಣೆಗೆ ಸೂಚಿಸಲಾಗಿತ್ತು. ನಿನ್ನೆಯಷ್ಟೆ ವರದಿ ನೀಡಿದ್ದಾರೆ .ಈ ಹಿನ್ನೆಲೆಯಲ್ಲಿ ವಿವರವಾಗಿ ತನಿಖೆ ಮಾಡುತ್ತೇವೆ.
ಲಾಭೂರಾಮ್
ಪೊಲೀಸ್ ಆಯುಕ್ತರು