ಗುಂಡು ತುಂಡು ಪಾರ್ಟಿಯಲ್ಲಿ ಗುಂಡಿನ ಸದ್ದೊ, ಪಟಾಕಿ ಸದ್ದೊ?
ಹುಬ್ಬಳ್ಳಿ: ಹುಟ್ಟು ಹಬ್ಬದ ಪಾರ್ಟಿಯಲ್ಲಿ ಗುಂಡಿನ ಸದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆಂಬ ಗುಸು ಗುಸು ನಗರದ ತುಂಬೆಲ್ಲಾ ಆರಂಭವಾಗಿದೆ.
ಹುಬ್ಬಳ್ಳಿಯ ಗ್ರಾಮೀಣ ಠಾಣೆ ಪೊಲೀಸರು ಲೆಕ್ಕಕ್ಕೆ ಎಫ್‌ಐಆರ್ ದಾಖಿಲಿಸಿ ಕೈ ತೊಳೆದುಕೊಂಡಿದ್ದಾರೆ. ಬರ್ತಡೇ ಪಾರ್ಟಿಯ ವೇದಿಕೆಯಲ್ಲಿ ಆರು ಸುತ್ತು ಗುಂಡು ಹಾರಿಸಿದ ಪುಡಾರಿ, ಆರ್.ಟಿ.ಐ. ಕಾರ್ಯಕರ್ತ ಪುತ್ರನ ಬರ್ತಡೇ ಪಾರ್ಟಿ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಕಲಬುರಗಿ ಎಂಬುವರ ಪಾರ್ಮ್ ಹೌಸ್‌ನಲ್ಲಿ ರವಿವಾರ ರಾತ್ರಿ ನಡೆದಿತ್ತು.
ಕೇಶ್ವಾಪುರದ ಫಿಲೋಮಿನಾ ಪೌಲ್ ಪುತ್ರ ಸುಂದರ ಪೌಲ್‌ನ ಹುಟ್ಟುಹಬ್ಬದಂದು ಫಾರ್ಮ್ ಹೌಸ್‌ನಲ್ಲಿ ಗುಂಡು- ತುಂಡಿನ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಆದರೆ, ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್ ರಮೇಶ್ ಗೋಕಾಕ್ ನೇತೃತ್ವದ ತಂಡ ಫಾರ್ಮ್ ಹೌಸ್ ತಲಾಷ್ ಮಾಡಿತ್ತು.
ಗುಂಡಿನ ಸದ್ದು ಕೇಳಿದ್ದರೂ ಕಾಟ್ರೈಜ್ಡ್ ಸಿಕ್ಕಿಲ್ಲ. ಫಿಲೋಮಿನಾ ಗನ್‌ನಿಂದ ಗುಂಡು ಹಾರಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಹಾಗಾದರೆ ಗುಂಡು ಹಾರಿದ್ದು ಯಾರ್ ರಿವಾಲ್ವಾರ್‌ನಿಂದ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಫಿಲೋಮಿನಾ ಹತ್ತಿರ ಗನ್ ಇದ್ದು, ಚುನಾವಣೆ ವೇಳೆಯೂ ಗನ್ ಇಟ್ಟುಕೊಳ್ಳಲು ವಿನಾಯತಿ ಪಡೆದಿರುವುದಾಗಿ ಪಿಲೋಮಿನಾ ಹೇಳಿದ್ದಾರೆ. ಆದರೆ, ಫಿಲೋಮಿನಾಗೆ ವಿಶೇಷ ಪರವಾನಿಗೆ ನೀಡಿದ್ದು ಯಾವ ಕಾರಣಕ್ಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಇಷ್ಟಾದ್ರೂ ಸುಂದರ ಪೌಲ್‌ನನ್ನು ವಶಕ್ಕೆ ಪಡೆಯದ ಪೊಲೀಸರು ಆತನನ್ನು ಕೇವಲ ವಿಚಾರಣೆ ಮಾಡಿ ವಾಪಸ್ ಮನೆಗೆ ಕಳಿಸಿದ್ದು ಏಕೆ..? ರಾತ್ರೋರಾತ್ರಿ ವಿಚಾರಣೆ ನಡೆಸಿ ಕೇಸ್‌ನ್ನೇ ಕ್ಲೋಸ್ ಮಾಡಲು ಪೊಲೀಸರು ಮುಂದಾಗಿದ್ದಾರೆ. ಅದು ಸಾಧ್ಯವಾಗದೆ ಇದ್ದಾಗ ನಾಮಕವಾಸ್ತೆ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ಆರ್‌ಟಿಐ ಕಾರ್ಯಕರ್ತ ಫಿಲೋಮಿನ ಪೌಲ್‌ನ ಮಗ ಸುಂದರ ಪೌಲ್ ಬಿಜೆಪಿ ಹಿರಿಯ ಮುಖಂಡರ ಮಕ್ಕಳ ಸ್ನೇಹಿತ ಕೂಡಾ ಆಗಿದ್ದಾನೆ. ಅಲ್ಲದೇ ಬಿಜೆಪಿ ಪ್ರಭಾವಿ ಮುಖಢರ ಮಗಳ ಮದುವೆಯಲ್ಲೂ ಈತ ಓಡಾಡಿದ್ದ.ಅದೇ ಕಾರಣಕ್ಕೆ ಪೊಲೀಸರು ಬಂಧಿಸದೆ ವಿಚಾರ ಮಾಡಿ ಮನೆಗೆ ಕಳುಹಿಸಿದ್ದಾರೆ ಎಂಬ ವಿಷಯ ನಗರದ ತುಂಬೆಲ್ಲಾ ಹರಡಿದೆ.
ತಂದೆಯ ಪಿಸ್ತೂಲ್‌ನ್ನ ತೆಗೆದುಕೊಂಡು ಈ ಹಿಂದೆಯೂ ಉಪಟಳ ಮಾಡಿದ್ದ ಸುಂದರ ಪೌಲ್. ಈ ಹಿಂದೇ ಕಾಲೇಜ ಕ್ಯಾಂಪಸ್‌ನಲ್ಲಿ ಪಿಸ್ತೂಲ್ ತೋರಿಸಿ ಸುದ್ದಿಯಾಗಿದ್ದ. ಅಲ್ಲದೇ ಕಾಲೇಜು ಕ್ಯಾಂಟೀನ್‌ನಲ್ಲಿ ಪಿಸ್ತೂಲ್ ತೋರಿಸಿದ್ದನೆನ್ನಲಾಗಿದೆ.
ಪಿಸ್ತೂಲ್ ಬಳಸಲು ಅನುಮತಿ ಪಡೆದವರು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಚುನಾವಣೆ ಸಂದರ್ಭದಲ್ಲಿ ಠಾಣೆಗಳಿಗೆ ಹಸ್ತಾಂತರಿಸಬೇಕು ಎನ್ನುವ ಕಟ್ಟುನಿಟ್ಟಿನ ನಿಯಮವಿದೆ. ಹಾಗಿದ್ದಾಗಲೂ, ಫಿಲೋಮಿನಾ ಅವರ ಬಳಿ ಅನುಮತಿ ಪಡೆದ ಪಿಸ್ತೂಲ್ ಹೇಗೆ ಇತ್ತು..? ಪೊಲೀಸ್ ಠಾಣೆಗೆ ಪಿಸ್ತೂಲ್ ಏಕೆ ಸರೆಂಡರ್ ಮಾಡಿಲ್ಲ ಎಂಬುದು ಸಾರ್ವಜನಿಕರದ್ದಾಗಿದೆ
ಇಷ್ಟೆಲ್ಲಾ ಆದ್ರೂ ಸುಂದರ ಪೌಲ್‌ನ ಬಂಧನ ಏಕಿಲ್ಲ. ಇದೀಗ ಪೊಲೀಸರ ನಡೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ದಕ್ಷ ಎಸ್ಪಿ ಸ್ವಲ್ಪ ಪ್ರಕರಣದ ಮೇಲೆ ಕಣ್ಣು ಹಾಯಿಸುವುದೊಳಿತು.