ಹುಬ್ಬಳ್ಳಿ-ಧಾರವಾಡ ಸುದ್ದಿ

ರಾತ್ರಿ ವೇಳೆ ಅನಗತ್ಯ ಒಡಾಡಿದವರು ವಶಕ್ಕೆ : ಠಾಣೆ ಎದುರು ಪ್ರತಿಭಟನೆ

ಹುಬ್ಬಳ್ಳಿ: ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಅನವಶ್ಯಕವಾಗಿ ಹಾಗೂ ಅನುಮಾನಾಸ್ಪದವಾಗಿ ಓಡಾಡುತ್ತಾರೆ ಎಂದು ಪೊಲೀಸರು ಹಲವರನ್ನು ಬಂಧಿಸಿ ಬೈಕ್ ಹಾಗೂ ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಎಐಎಂಐಎಂ ಕಾರ್ಯಕರ್ತರು ಮತ್ತು ಸ್ಥಳೀಯರು ಸೋಮವಾರ ಮದ್ಯ ರಾತ್ರಿ ಕಸಬಾ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಹಗಲಿನ ವೇಳೆ ಎಲ್ಲರೂ ಕೆಲಸಕ್ಕೆ ಹೋಗುವುದರಿಂದ ರಾತ್ರಿ ಸಮಯ ಎಲ್ಲ ಒಂದೆಡೆ ಸೇರುತ್ತಾರೆ. ಕೆಲವು ವೇಳೆ ಅವರು ಮನೆಗೆ ಬರಲು ತಡ ರಾತ್ರಿಯಾಗುತ್ತದೆ. ಆದರೆ, ಪೊಲೀಸರು ಅವರನ್ನೇ ಅನುಮಾನಾಸ್ಪದ ವ್ಯಕ್ತಿ ಗಳೆಂದು, ಆರೋಪಿಗಳೆಂದು ಭಾವಿಸಿ ಠಾಣೆಗೆ ಕರೆತರುವುದು ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ಒಂದು ತಾಸು ಪ್ರತಿಭಟನೆ ನಡೆಸಿ, ಪೊಲೀಸರ ನಡೆ ಖಂಡಿಸಿ ದರು. ಕೊನೆಗೆ ಪೊಲೀಸರು ವಶಪಡಿಸಿಕೊಂಡವರಿಂದ ಮುಚ್ಚಳಿಕೆ ಬರೆಸಿ ಕೊಂಡರಲ್ಲದೇ ಮದ್ಯ ಸೇವಿಸಿದವರ ಮೇಲೆ ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಕಸಬಾ ಠಾಣೆ ಇನ್‌ಸ್ಪೆಕ್ಟರ್ ಅಡಿವೆಪ್ಪ ಬನ್ನಿ, ನಗರದಲ್ಲಿ ಅಪರಾಧ ಚಟುವಟಿಕೆ ನಿಯಂತ್ರಿಸುವುದು ಹಾಗೂ ಸಾರ್ವಜನಿಕ ರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾತ್ರಿ 11ರ ನಂತರ ಅನಗತ್ಯವಾಗಿ ಓಡಾಡುವವರ ವಿಚಾರಣೆ ನಡೆಸಲಾಗುತ್ತಿದೆ ಎಂದು ದಕ್ಷಿಣ ಎಸಿಪಿ ಆರ್.ಕೆ.ಪಾಟೀಲ ಹೇಳಿದ್ದಾರೆ. ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯ ನಜೀರ್ ಹೂನ್ಯಾಳ, ದಾದಾಪೀರ್ ಬೆಟಗೇರಿ, ಇರ್ಫಾನ್ ನಾಲತ್ವಾಡ, ಅಝರ್ ಬಳ್ಳಾರಿ, ಖಾಜಾಸಾಬ್ ಮುಲ್ಲಾ ಇನ್ನಿತರರು ಇದ್ದರೆನ್ನಲಾಗಿದೆ.

administrator

Related Articles

Leave a Reply

Your email address will not be published. Required fields are marked *