ಹುಬ್ಬಳ್ಳಿ-ಧಾರವಾಡ ಸುದ್ದಿ
ಮಧ್ಯರಾತ್ರಿ ಬ್ಯಾಂಕ್ ಖಾತೆಯಲ್ಲಿನ ಹಣ ಮಂಗಮಾಯ!

ಮಧ್ಯರಾತ್ರಿ ಬ್ಯಾಂಕ್ ಖಾತೆಯಲ್ಲಿನ ಹಣ ಮಂಗಮಾಯ!

ವಂಚಕರ ಕೈವಾಡದ ಶಂಕೆ- ಸೈಬರ್ ಕ್ರೈಮ್‌ಗೆ ದೂರು

ಧಾರವಾಡ: ಮಧ್ಯರಾತ್ರಿ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಲ್ಲಿನ ಹಣ ಡ್ರಾ ಮಾಡಿಕೊಂಡು ವಂಚಿಸಿದ ಘಟನೆ ಪೇಡೆನಗರದಲ್ಲಿ ನಡೆದಿದೆ.
ಇಲ್ಲಿನ ಮಾಳಮಡ್ಡಿ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸಾಧನಕೇರಿ ನಿವಾಸಿ ಉಮಾ ಆಲದಕಟ್ಟಿ ಎಂಬುವರು ತಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಕಳೆದ ದಿ.5ರಂದು ಮಧ್ಯೆ ರಾತ್ರಿ 12.08 ಗಂಟೆಗೆ ಡ್ರಾ ಆಗಿದೆ. ಉಮಾ ಅವರ ಬ್ಯಾಂಕ್ ಖಾತೆ ನಂ.0510131000046 ರಲ್ಲಿನ 1283.75,8558 ಮತ್ತು 17116 ರೂಪಾಯಿಗಳು ಮಧ್ಯೆ ರಾತ್ರಿ ಡ್ರಾ ಆಗಿದೆ. ಮಧ್ಯೆ ರಾತ್ರಿ ಹೊತ್ತಿಗೆ ಹಣ ಡ್ರಾ , ಮಾಡಿಕೊಂಡ ಬಗ್ಗೆ ಬ್ಯಾಂಕ್‌ನಿಂದ ಬಂದ ಸಂದೇಶ ಕಂಡು ಉಮಾ ಅವರು ಗಾಬರಿಯಾಗಿದ್ದಾರೆ. ಆದರೆ, ಮಧ್ಯೆ ರಾತ್ರಿ ಆಗಿದ್ದರಿಂದ ಬ್ಯಾಂಕ್ ಅಥವಾ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಮುಂಜಾನೆ ಬ್ಯಾಂಕ್‌ಗೆ ಹೋಗಿ ಕೇಳಿದಾಗ ತಮಗೂ ಈ ಬಗ್ಗೆ ಮಾಹಿತಿ ಇಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.


ತಮಗೆ ಯಾರೂ ಪೋನ್ ಮಾಡಿ ಬ್ಯಾಂಕ್ ಖಾತೆಯ ಮಾಹಿತಿ ಕೇಳಿಲ್ಲ. ಅಲ್ಲದೇ ತಾವೂ ಕೊಟ್ಟಿಲ್ಲ. ಖಾತೆಗೆ ಜೋಡಣೆಯಾದ ಮೊಬೈಲ್‌ಗೆ ಯಾವುದೇ ಎಸ್.ಎಂ.ಎಸ್. ಕೂಡ ಬಂದಿಲ್ಲ ಮತ್ತು ಓ.ಟಿ.ಪಿ ನಂಬರ ಕೂಡ ವಿನಿಮಯ ಆಗಿಲ್ಲ. ಆದಾಗ್ಯೂ ತಮ್ಮ ಖಾತೆಯಲ್ಲಿನ ಹಣ ಡ್ರಾ ಆಗಿದ್ದು, ಉಮಾ ಅವರನ್ನು ಗೊಂದಲಕ್ಕೆ ನೂಕಿದೆ.
ಆದರೆ ಬ್ಯಾಂಕ್ ಅಧಿಕಾರಿಗಳು ಈ ಘಟನೆಯ ಬಗ್ಗೆ ತಮಗೆ ಗೊತ್ತಿಲ್ಲ ಎಂದು ಜವಾಬ್ದಾರಿಯಿಂದ ಜಾರಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.ಈ ಕುರಿತು ಉಮಾ ಆಲದಕಟ್ಟಿ ಅವರು ನಿನ್ನೆ ಬ್ಯಾಂಕ್ ಅಧಿಕಾರಿಗಳಿಗೆ ಮತ್ತು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ಇಂಥದ್ದೇ ಅನುಭವ ಇದೇ ಶಾಖೆಯ ನಗರದ ಇನ್ನೂ ಹಲವರದ್ದಾಗಿದೆ ಎಂದು ಗೊತ್ತಾಗಿದೆ. ಖಾತೆಯ ಬಗ್ಗೆ ಯಾವುದೇ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದ ಸಂದರ್ಭದಲ್ಲಿಯೂ ಗ್ರಾಹಕರ ಖಾತೆಯಿಂದ ಹಣ ಡ್ರಾ ಆಗಿದ್ದು ಹೇಗೆ ಎಂಬುದು ಈಗ ಪ್ರಶ್ನೆಯಾಗಿದೆ.

ಗ್ರಾಹಕರ ಹಿತ ಮುಖ್ಯ

ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯ ಮಾಹಿತಿ ವಿನಿಮಯದ ತಪ್ಪಿನಿದಿಂದ ತಂತ್ರಜ್ಞಾನ ಬಳಸಲಿ ಹಣ ಡ್ರಾ ಮಾಡಿಕೊಳ್ಳುವ ದಂಧೆ ನಿರಂತರ ನಡೆಯುತ್ತಿದೆ. ಆದರೆ, ಗ್ರಾಹಕರು ತಮ್ಮ ಖಾತೆಯ ಯಾವುದೇ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದ ಸಂದರ್ಭದಲ್ಲಿ ಹಣ ಡ್ರಾ ಮಾಡಿಕೊಂಡಿದ್ದು ಈಗ ಆತಂಕ ಮೂಡಿಸುತ್ತಿದೆ. ಇಂತಹ ಪ್ರಕರಣಗಳಿಂದ ಬ್ಯಾಂಕ್‌ನಲ್ಲಿ ಹಣ ಇಟ್ಟು ಗ್ರಾಹಕರು ನೆಮ್ಮದಿಯಿಂದ ಇರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ವಂಚನೆ ಪ್ರಕರಣಗಳಿಂದ ಬ್ಯಾಂಕ್ ನುಣುಚಿಕೊಂಡರೆ ಗ್ರಾಹಕರ ಗತಿ ಏನು?. ಸರಕಾರ ಈ ವಿಷಯದಲ್ಲಿ ಗ್ರಾಹಕರ ರಕ್ಷಣಗೆ ಬರಬೇಕು.

administrator

Related Articles

Leave a Reply

Your email address will not be published. Required fields are marked *