ಧಾರವಾಡ: ಗುತ್ತಿಗೆದಾರ ಸಂತೋಷ ಪಾಟೀಲ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ಇಳಿಸಿ, ಐಪಿಸಿ 306 ಪ್ರಕಾರ ಬಂಧಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
40 ಪರ್ಸೆಂಟ್ ಆರೋಪ ಮಾಡಿದ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ನೇರ ಕೈವಾಡವಿದ್ದು, ಕೂಡಲೇ ರಾಜೀನಾಮೆ ಒತ್ತಾಯಿಸಿ ಹು.ಧಾ. ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಇಂದು ಪ್ರತಿಭಟನೆ ನಡೆಸಿ, ಮನವಿ ಅರ್ಪಿಸಲಾಯಿತು. ಯುವ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ್ ಯಲಿಗಾರ, ವಿದ್ಯಾನಗರ ಬ್ಲಾಕ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಪ್ರವೀಣ ಶ್ಯಾಗೋಟಿ, ಸತೀಶ ಗಿರಿಯಣ್ಣವರ, ಅರ್ಬಾಜ್ ಮನಿಯಾರ, ಖಾಸಿಂ ಕೂಡಲಗಿ, ಆಕಾಶ ಕೋನೇರಿ, ನಾಗಾರ್ಜುನ ಕತ್ರಿಮಲ್, ಸಂತೋಷ ನಾಯ್ಕ, ಸೌರಭ ಮಾಸೇಕರ, ಶಾನೂ ಖಾಜೆಖಾನೆ, ರಫೀಕ್ ನದಾಫ್, ದಾದಾಪೀರ ಕರ್ನೂಲ, ಇರ್ಷಾದ್ ಬೈರಾಖಾನದಾನ, ಮಂಜುನಾಥ ಕೊಂಡಪಲ್ಲಿ, ಮಹೇಶ ಭಜಂತ್ರಿ, ಚೇತನ ಪಾಟೀಲ, ಬಾಬಾ ಗೌಳಿ, ಅಕ್ಷಯ ಪಾಟೀಲ, ಅಬ್ದುಲ್ ಗನಿ, ಇನ್ನಿತರರಿದ್ದರು.
ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ ಪಾಟೀಲ ಅವರು ತಮ್ಮ ಡೆತ್ ನೋಟ್‌ಲ್ಲಿ ಕಾಮಗಾರಿಗಾಗಿ ಶೇ.40 ಕಮಿಷನ್ ಕೇಳಿ ಕಿರುಕುಳ ಕೊಟ್ಟಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆರೋಪಿಸಿದ್ದಾರೆ. ಸಂತೋಷ ಸಹೋದರ ಪ್ರಶಾಂತ ಪಾಟೀಲ ಮಾಧ್ಯಮಕ್ಕೆ ಈ ವಿಷಯವನ್ನು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಪರೋಕ್ಷವಾಗಿ ಪ್ರಧಾನಮಂತ್ರಿಗಳು ಯಾವುದೇ ಪ್ರತಿಕ್ರಿಯೆ ಕೊಡದಿರುವುದನ್ನು ನೋಡಿದರೆ ಅವರೂ ಸಹ ಭಾಗಿಯಾಗಿದ್ದಾರೆ ಎಂಬ ಶಂಕೆ ಮೂಡುತ್ತಿದೆ.
ಇದು ಆತ್ಮಹತ್ಯೆ ಅಲ್ಲ ಕೊಲೆ. ಇದಕ್ಕಾಗಿ ಕೂಡಲೇ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ಇಳಿಸಿ ಹಾಗೂ ಐಪಿಸಿ ಸೆಕ್ಷನ್ ೩೦೬ ಕೊಲೆಗೆ ಪ್ರ್ರಚೋದನೆ ನೀಡಿದ ಆರೋಪದಡಿ ಈಶ್ವರಪ್ಪ ,ಆಪ್ತ ಬಸವರಾಜ, ರಮೇಶ ಅವರನ್ನು ಕೂಡಲೇ ಬಂದಿಸಬೇಕು. ಈ ಮೂಲಕ ಕಮೀಷನ್ ದಂಧೆಗೆ ಮುಕ್ತಾಯ ಹಾಡಬೇಕೆಂದು ರಾಷ್ಟ್ರಪತಿಗಳನ್ನು ಒತ್ತಾಯಿಸಿದರು.
40 ಪರ್ಸೆಂಟ್ ಆರೋಪ ಮಾಡಿದ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ನೇರ ಕೈವಾಡವಿದ್ದು, ಕೂಡಲೇ ರಾಜೀನಾಮೆ ಒತ್ತಾಯಿಸಿ ಹು.ಧಾ. ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಇಂದು ಪ್ರತಿಭಟನೆ ನಡೆಸಿ, ಮನವಿ ಅರ್ಪಿಸಲಾಯಿತು. ಯುವ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ್ ಯಲಿಗಾರ, ವಿದ್ಯಾನಗರ ಬ್ಲಾಕ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಪ್ರವೀಣ ಶ್ಯಾಗೋಟಿ, ಸತೀಶ ಗಿರಿಯಣ್ಣವರ, ಅರ್ಬಾಜ್ ಮನಿಯಾರ, ಖಾಸಿಂ ಕೂಡಲಗಿ, ಆಕಾಶ ಕೋನೇರಿ, ನಾಗಾರ್ಜುನ ಕತ್ರಿಮಲ್, ಸಂತೋಷ ನಾಯ್ಕ, ಸೌರಭ ಮಾಸೇಕರ, ಶಾನೂ ಖಾಜೆಖಾನೆ, ರಫೀಕ್ ನದಾಫ್, ದಾದಾಪೀರ ಕರ್ನೂಲ, ಇರ್ಷಾದ್ ಬೈರಾಖಾನದಾನ, ಮಂಜುನಾಥ ಕೊಂಡಪಲ್ಲಿ, ಮಹೇಶ ಭಜಂತ್ರಿ, ಚೇತನ ಪಾಟೀಲ, ಬಾಬಾ ಗೌಳಿ, ಅಕ್ಷಯ ಪಾಟೀಲ, ಅಬ್ದುಲ್ ಗನಿ, ಇನ್ನಿತರರಿದ್ದರು.
ಪ್ರತಿಭಟನೆಯಲ್ಲಿ ಮುಖಂಡರಾದ ಮಂಜುನಾಥ ಜಕ್ಕಣ್ಣವರ, ರವಿ ಒಡೆಯರ, ಪ್ರವೀಣ ನಡಕಟ್ಟಿನ್, ಜಿಲ್ಲಾಧ್ಯಕ್ಷ ಅನಂತಕುಮಾರ ಬುಗಡಿ, ಏಜಾಜ ಶೇಖ, ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.