ಹುಬ್ಬಳ್ಳಿ-ಧಾರವಾಡ ಸುದ್ದಿ
ದಾವಣಗೆರೆಯಲ್ಲೂ ’ಪಂಜುರ್ಲಿ’ ಸವಿರುಚಿ     23 ರಂದು ಲೋಕಾರ್ಪಣೆ

ದಾವಣಗೆರೆಯಲ್ಲೂ ’ಪಂಜುರ್ಲಿ’ ಸವಿರುಚಿ 23 ರಂದು ಲೋಕಾರ್ಪಣೆ

ಹುಬ್ಬಳ್ಳಿ: ವಾಣಿಜ್ಯನಗರಿ, ಪೇಡೆ ನಗರಿ, ಅಲ್ಲದೇ ಕುಂದಾನಗರಿಯಲ್ಲೂ ಮನೆಮಾತಾಗಿರುವ ಪಂಜುರ್ಲಿ ಸಮೂಹದ ನೂತನ ’ ಹೊಟೆಲ್ ಶ್ರೀ ಪಂಜುರ್ಲಿ ಪ್ಯಾಲೇಸ್ ಮತ್ತು ಸಂಪೂರ್ಣ ಹವಾನಿಯಂತ್ರಿತ ಲೀಲಾವತಿ ಕಲ್ಯಾಣಮಂಟಪ ದಿ.23 ರಂದು ಕರ್ನಾಟಕದ ’ಮ್ಯಾಂಚೆಸ್ಟರ್’ ಖ್ಯಾತಿಯ ದಾವಣಗೆರೆಯಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಪಿ.ಬಿ.ರಸ್ತೆ, ಹೊಸ ಬಸ್ ನಿಲ್ದಾಣದ ಬಳಿ ಬೆಳಿಗ್ಗೆ ಸತ್ಯನಾರಾಯಣ ಪೂಜೆ ಸಹಿತ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡು 12.10 ಕ್ಕೆ ಆನಂದ ಗುರುಸ್ವಾಮಿಯವರ ಸಾನ್ನಿಧ್ಯದಲ್ಲಿ ದಾವಣಗೆರೆಯ ಧಣಿ ,ಮಾಜಿ ಸಚಿವ ಡಾ.ಶ್ಯಾಮನೂರು ಶಿವಶಂಕರಪ್ಪ ಉದ್ಘಾಟನೆ ನೆರವೇರಿಸಲಿದ್ದು, ಮಾಜಿ ಸಭಾಪತಿ ಮನೋಹರ ತಹಶೀಲ್ದಾರ ಉಪಸ್ಥಿತರಿರಲಿದ್ದಾರೆ.

 

ಆಹಾರ ಉದ್ಯಮದಲ್ಲಿ ಎರಡು ದಶಕಗಳಿಂದ ರುಚಿ, ಶುಚಿ ಹಾಗೂ ಅತ್ಯುತ್ತಮ ಸೇವೆಯಲ್ಲಿ ನಂ. 1 ಎನಿಸಿಕೊಂಡಿರುವ ಪಂಜುರ್ಲಿ ಸಮೂಹ ದವರು ಅವಳಿನಗರದಾಚೆ ಕುಂದಾನಗರಿಗೆ ತಮ್ಮ ಸೇವೆ ವಿಸ್ತರಿಸಿ ಈಗ ಮಧ್ಯ ಕರ್ನಾಟಕದತ್ತ ಹೆಜ್ಜೆ ಇಟ್ಟಿದೆ.
ಹುಬ್ಬಳ್ಳಿ-ಧಾರವಾಡದಲ್ಲಂತೂ ಪಂಜುರ್ಲಿ ಸಮೂಹ ಮಾಂಸಾಹಾರಿ ವಿಭಾಗದಲ್ಲಿ ತನ್ನದೇ ಆದ ವಿಶಿಷ್ಟ ರುಚಿಯಿಂದ ಎಲ್ಲರ ಪ್ರೀತಿಗೆ ಪಾತ್ರ ವಾಗಿದ್ದು, ೨೦೧೯ರಲ್ಲಿ ಗೋಕುಲ ರಸ್ತೆಯಲ್ಲಿ ಓಯಾಸಿಸ್ ಮಾಲ್ ಎದುರು ಲೋಕಾರ್ಪಣೆಗೊಂಡ ಲೀಲಾವತಿ ಪ್ಯಾಲೇಸ್ ಸಸ್ಯಾಹಾರಿ ಫ್ಯಾಮಿಲಿ ರೆಸ್ಟೊರೆಂಟ್ ಅಂತೂ ಎಲ್ಲ ವರ್ಗದವರ ಮೆಚ್ಚುಗೆಗೆ ಪಾತ್ರ ವಾಗಿದೆಯ ಲ್ಲದೇ ಇದು ಬರಿ ಹೊಟೆಲ್ ಅಲ್ಲ ದೇಶಭಕ್ತಿ ಬಿಂಬಿಸುವ ತಾಣವೂ ಆಗಿದೆ ಎಂಬುದು ಅಲ್ಲಿ ಭೇಟಿ ನೀಡಿದ ಪ್ರತಿಯೊಬ್ಬರ ಮನದಲ್ಲೂ ಹಚ್ಚ ಹಸಿರಾಗಿರಲಿದೆ.

’ನಕ್ಷತ್ರ’ ಎಣಿಸುತ್ತಲೆ ಬೆಳೆದ ರಾಜೇಂದ್ರ
ಕರಾವಳಿಯಿಂದ ಮೂರು ದಶಕಗಳ ಹಿಂದೆ ತುತ್ತಿನ ಚೀಲ ತುಂಬಿ ಕೊಳ್ಳಲು ಮಾಯಾನಗರಿ ಮುಂಬೈ ಬಸ್ ಹತ್ತಿದ್ದ ರಾಜೇಂದ್ರ ಶೆಟ್ಟಿ ಪಂಜುರ್ಲಿ ಸಮೂಹದ ಸಂಸ್ಥಾಪಕರಾಗಿದ್ದು ’ಕಾಯಕವೇ ಕೈಲಾಸ’ ಎಂಬುದಕ್ಕೆ ಅನ್ವರ್ಥಕವಾಗಿ ನಿಂತಿದ್ದಾರೆ.
ಅಂದು ಮುಂಬಯಿಯ ವಿಶ್ವ ಪ್ಯಾಲೇಸ್‌ನಲ್ಲಿ ಕೆಲಸ ಮಾಡುವಾಗ ರಾತ್ರಿ ಮಲಗಿದಾಗ ಆಕಾಶದ ನಕ್ಷತ್ರಗಳನ್ನು ಎಣಿಸುತ್ತ ದೊಡ್ಡದೊಂದು ಹೊಟೆಲ್ ಆರಂಭಿಸಬೇಕೆಂಬ ಕನಸು ಕಂಡು, ಹಂತ ಹಂತವಾಗಿ ಮೇಲೆರುತ್ತಲೇ ಬಂದ ಅವರು ಧಾರವಾಡದಲ್ಲಿ ಪಂಜುರ್ಲಿ ಹೊಟೆಲ್ ಆರಂಭಿಸುವ ಮೂಲಕ ಈ ಉದ್ಯಮಕ್ಕೆ ಬಲಗಾಲಿಟ್ಟು ಹಿಂದಿರುಗಿ ನೋಡದೇ ಮುನ್ನಡೆದಿದ್ದಾರೆ.ರಾಜ್ಯದ ಉಳಿದೆಡೆಗೂ ವಿಸ್ತರಿಸುವ
ರಾಜೇಂದ್ರ ಶೆಟ್ಟಿಯವರ ಕನಸು ನನಸಾಗಲಿ ಎಂಬುದು ಹಾರೈಕೆ ಯಾಗಿದೆ.
ಸಾಮಾಜಿಕ ಸೇವೆಯಲ್ಲೂ ಸದ್ದಿಲ್ಲದೇ ತೊಡಗಿಸಿಕೊಂಡಿರುವ ಅವರಿಗೆ ಅನೇಕ ಸನ್ಮಾನ, ಪ್ರಶಸ್ತಿಗಳು ಅರಸಿ ಬಂದಿವೆ.

 

administrator

Related Articles

Leave a Reply

Your email address will not be published. Required fields are marked *