ಹುಬ್ಬಳ್ಳಿ-ಧಾರವಾಡ ಸುದ್ದಿ
’ಕುರಾನ್-ಗೀತೆ’ ಪಠಿಸಿ ’ದಿವ್ಯಪ್ರಭೆ’ ಬೀರಿದ ಡಿಸಿ

’ಕುರಾನ್-ಗೀತೆ’ ಪಠಿಸಿ ’ದಿವ್ಯಪ್ರಭೆ’ ಬೀರಿದ ಡಿಸಿ

ಶಾಂತಿಯುತ ಈದ್-ಗಣೇಶೋತ್ಸವ: ಪೊಲೀಸ್ ಆಯುಕ್ತರಿಂದ ಅಭಿನಂದನೆ

ಪವಿತ್ರ ಗ್ರಂಥ ಕುರಾನ್‌ನ ಸಾಲುಗಳನ್ನು ಹಾಗೂ ಭಗವದ್ದೀತೆಯ ಶ್ಲೋಕಗಳನ್ನು ಪಠಿಸಿದ್ದನ್ನು ಕೇಳಲು ಕೇಳಗಿನ ಲಿಂಕ್ ಕ್ಲಿಕ್ ಮಾಡಿ

ಹುಬ್ಬಳ್ಳಿ: ಪವಿತ್ರ ಗ್ರಂಥ ಕುರಾನ್‌ನ ಸಾಲುಗಳನ್ನು ಪಟಪಟನೇ ಹೇಳುವ ಮೂಲಕ ಒಂದು ಕ್ಷಣ ಇವರು ಮೌಲ್ವಿಯೇ..!? ಎನಿಸಿದರೆ, ಮರುಕ್ಷಣವೇ ಭಗವದ್ದೀತೆಯ ಶ್ಲೋಕಗಳನ್ನು ಪಠಿಸಿ, ಅವೆರಡರ ಅರ್ಥ ವಿವರಿಸಿ ಮಹಾ ಸಾಧ್ವಿಮಣಿ ಎಂಬಂತೆ ಸಮಾರಂಭದಲ್ಲಿ ತಮ್ಮ ’ದಿವ್ಯ ಪ್ರಭೆ’ ಹರಡಿದ ಧಾರವಾಡ ಜಿಲ್ಲಾಧಿಕಾರಿ ಅವಳಿನಗರದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ನಗರದ ಬಿವಿಬಿ ಆವರಣದ ದೇಶಪಾಂಡೆ ಫೌಂಡೇಶನ್ ಸಭಾಭವನದಲ್ಲಿ ಹು-ಧಾ ಪೊಲೀಸ್ ಕಮಿಷ್ನರೇಟ್ ವತಿಯಿಂದ ಆಯೋಜಿಸಿದ್ದ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬ ಶಾಂತಿಯುತ ಆಚರಣೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ವಧರ್ಮಗಳು ಮಾನವನ ಕಲ್ಯಾಣವನ್ನೇ ಬಯಸುತ್ತವೆ. ಅವುಗಳನ್ನು ಚೆನ್ನಾಗಿ ಅರಿತುಕೊಳ್ಳಬೇಕು. ಎಲ್ಲವೂ ಒಳಿತನ್ನೇ ಬಯಸುತ್ತವೆ. ಧರ್ಮದ ಮೂಲಕ ಒಳಿತನ್ನೇ ಆಚರಿಸುತ್ತ ನಾವು ಉನ್ನತ ಮಟ್ಟಕ್ಕೇರಬೇಕೆಂದು ಪಾರಿವಾಳದ ದೃಷ್ಟಾಂತ ಕತೆಯ ಮೂಲಕ ಪ್ರೇರಣಾದಾಯಕವಾಗಿ ವಿವರಿಸಿದರು.
ಸಮಾಜದ ಸ್ವಾಸ್ಥ್ಯ ಕಾಪಾಡಲು ಪೊಲೀಸರ ಕೈಯಲ್ಲಿ ಸಾಕಷ್ಟು ಕಾನೂನುಗಳಿದ್ದರೂ, ಅವನ್ನು ಬಳಕೆ ಮಾಡದೇ ಕೇವಲ ಜನರ ಪ್ರೀತಿ, ವಿಶ್ವಾಸ ಗಳಿಸಿ ಅವರ ಸಹಕಾರದೊಂದಿಗೆ ಅವಳಿನಗರದಲ್ಲಿ ಶಾಂತಿಯುತವಾಗಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬ ಆಚರಿಸುವಲ್ಲಿ ಹು-ಧಾ ಪೊಲೀಸ್ ಕಮಿಷ್ನರೇಟ್ ಯಶಸ್ವಿಯಾಗಿದೆ.


ಗಣೇಶೋತ್ಸವ ಹಾಗೂ ಈದ್ ಮಿಲಾದ್ ಏಕಕಾಲದಲ್ಲಿ ಆಚರಿಸುವುದು ಸವಾಲಿನ ಕೆಲಸ. ಈ ಮಧ್ಯೆಯೇ ಪೊಲೀಸ್ ಕಮಿಷ್ನರ್ ತಮ್ಮ ಸಿಬ್ಬಂದಿ, ವಿವಿಧ ಇಲಾಖೆ ಅಧಿಕಾರಿಗಳ ಮಧ್ಯೆ ಸಮನ್ವಯ ಸಾಧಿಸುವ ಜತೆಗೆ ಸರ್ವಧರ್ಮದ ಜನರ ಸಹಕಾರ ಪಡೆದು ಶಾಂತಿಯುತ ಆಚರಣೆಗೆ ಕ್ರಮವಹಿಸಿದ್ದರು. ಹೀಗಾಗಿ ಎರಡೂ ಹಬ್ಬಗಳು ಅತ್ಯಂತ ಶಾಂತತೆ ಮತ್ತು ಸೌಹಾರ್ದದಿಂದ ಜರುಗಿದವು, ಅವಳಿನಗರದಲ್ಲಿ ಆಚರಣೆ ಗೊಂಡ ಈ ಹಬ್ಬಗಳು ಈಗ ರಾಜ್ಯಕ್ಕೆ ಮಾದರಿಯಾಗುವಂತಾಗಿದೆ ಎಂದರು.

ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ ಎಲ್ಲರೂ ಸೌಹಾರ್ದದಿಂದ ಆಚರಿಸುವ ಹಬ್ಬಗಳು ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡುತ್ತವೆ ಎಂದರು. ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿದರು.
ಹಬ್ಬಗಳ ಆಚರಣೆಯಲ್ಲಿ ಅಗತ್ಯ ಸಹಕಾರ ನೀಡಿದ ಸಾರ್ವಜನಿಕರು ಹಾಗೂ ವಿವಿಧ ಕ್ಷೇತ್ರದ ಅಧಿಕಾರಿಗಳನ್ನು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮತ್ತು ಗಣ್ಯರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಧರ್ಮಗುರುಗಳಾದ ತಾಜುದ್ದೀನ್ ಪೀರ ಖಾದ್ರಿ, ಗುರುವಂತ ಸಿಂಗ್, ಜಹರುದ್ದೀನ ಮೌಲ್ವಿ, ಮೇಯರ್ ರಾಮಣ್ಣ ಬಡಿಗೇರ, ಉಪಮೇಯರ್ ದುರ್ಗಮ್ಮ ಬಿಜವಾಡ, ಶಾಂತರಾಜ ಪೋಳ, ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್., ಎಸಿಪಿಗಳಾದ ಶಿವಪ್ರಕಾಶ ನಾಯ್ಕ, ವಿನೋದ ಮುಕ್ತೆದಾರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಮತ್ತಿತರರಿದ್ದರು.

administrator

Related Articles

Leave a Reply

Your email address will not be published. Required fields are marked *