ಹುಬ್ಬಳ್ಳಿ-ಧಾರವಾಡ ಸುದ್ದಿ
ಹಾಲಿ ಪಿಎಚ್‌ಡಿ ವಿದ್ಯಾರ್ಥಿಯೇ ಕವಿವಿ ಕುಲಸಚಿವ!

ಹಾಲಿ ಪಿಎಚ್‌ಡಿ ವಿದ್ಯಾರ್ಥಿಯೇ ಕವಿವಿ ಕುಲಸಚಿವ!

ಹಾಲಿ ಪಿಎಚ್‌ಡಿ ವಿದ್ಯಾರ್ಥಿಯೇ ಕವಿವಿ ಕುಲಸಚಿವ!

ಗಂಡ, ಹೆಂಡತಿ ಇಬ್ಬರಿಗೂ ಏಕಕಾಲದಲ್ಲಿ ಡಾಕ್ಟರೇಟ್

ಗಾಳಿಗೆ ತೂರಲ್ಪಟ್ಟ ನಿಯಮಾವಳಿ – ತೀವ್ರ ಚರ್ಚೆಗೆ ಗ್ರಾಸ

 


ಹುಬ್ಬಳ್ಳಿ : ವಿಶ್ವವಿದ್ಯಾಲಯದ ನಿಯಮಾವಳಿ ಅನುಸಾರ ಯಾವುದೇ ಸಿಬ್ಬಂದಿಯ ಸಂಬಂಧಿಯು ಪರೀಕ್ಷೆಗೆ ಕುಳಿತಿದ್ದರೆ ಅಂತಹ ಸಿಬ್ಬಂದಿಗೆ ಪರೀಕ್ಷಾ ಕರ್ತವ್ಯದಿಂದ (ಪ್ರಶ್ನೆ ಪತ್ರಿಕೆ ಸೆಟ್ಟಿಂಗ್,ಪರೀಕ್ಷಾ ಕೊಠಡಿ ಮೇಲ್ವಿಚಾರಣೆ, ಮೌಲ್ಯಮಾಪನ ಇತ್ಯಾದಿ) ಹೊರಗಿಡಲಾಗುವುದು. ಇಂತಹ ವಿಷಯ ಮರೆ ಮಾಚಿದರೆ ಸಿಬ್ಬಂದಿಯ ಮೇಲೆ ಕ್ರಮ ಸಹ ಕೈಗೊಳ್ಳಲಾಗುತ್ತದೆ. ಆದರೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅದೇ ವಿಶ್ವವಿದ್ಯಾಲಯದ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಬಹುದೇ? ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೆ? ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹೌದು, ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುವ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಾಲಿ ಕುಲಸಚಿವರೇ ಸಂಶೋಧನಾ ವಿದ್ಯಾರ್ಥಿಯಾಗಿರುವುದು ಇಂತಹ ಪ್ರಶ್ನೆ ಉದ್ಬವಿಸುವಂತೆ ಮಾಡಿದೆ.
ಅಡಳಿತ ವಿಭಾಗದ ಕುಲಸಚಿವ ಡಾ.ಹನುಮಂತಪ್ಪ ವರ್ಗಾವಣೆಯ ನಂತರ ಅವರ ಸ್ಥಾನದಲ್ಲಿ ಕುಳಿತ ಮತ್ತೊಬ್ಬ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಹಿಂದಿನ ಧಾರವಾಡ ವಿಭಾಗ ಅರಣ್ಯ ಇಲಾಖೆ ಡಿಸಿಎಫ್ ಯಶಪಾಲ್ ಕ್ಷೀರಸಾಗರ ಅವರು ವಿಶ್ವವಿದ್ಯಾಲಯದ ಬಯೋ ಟೆಕ್ನಾಲಜಿ ವಿಭಾಗದಲ್ಲಿ ಸಂಶೋಧನೆ (ಪಿಎಚ್‌ಡಿ) ಮಾಡುತ್ತಿದ್ದಾರೆ.
ಯುಜಿಸಿ,ಪಿಎಚ್‌ಡಿ ಗೈಡಲೈನ್ಸ್ ಪ್ರಕಾರ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವರೆ ವಿವಿಯ ಮುಖ್ಯ ಅಧಿಕಾರಿಗಳಾಗಿದ್ದು, ಕೋರ್ಸ ವರ್ಕ, ನೋಟಿಫಿಕೇಶನ್, ಥೀಸಿಸ್ ಮೌಲ್ಯಮಾಪನ ವರದಿ, ಪ್ರಗತಿ ವರದಿ ಸಹಿತ ಎಲ್ಲವನ್ನೂ ಕುಲಸಚಿವರಿಗೇ ಸಾದರಪಡಿಸ ಬೇಕಿದ್ದು, ಅದರೆ ಅವರದೇ ಪಿಎಚ್ ಡಿ ಪ್ರಕ್ರಿಯೇ ಹೇಗೆ ನಿಭಾಯಿಸುತ್ತಾರೆಂಬುದು ಅಚ್ಚರಿ ಹುಟ್ಟಿಸಿದೆ.
ಇನ್ನೊಂದು ಮಹತ್ವದ ವಿಷಯವೆಂದರೆ ಯಶಪಾಲ್ ಕ್ಷೀರಸಾಗರ ಅವರ ಪತ್ನಿ ತಮ್ಮ ಗಂಡನ ಸ್ಥಾನಕ್ಕೆ ನಿಯುಕ್ತಿಗೊಂಡಿರುವ ಹಾಲಿ ಧಾರವಾಡ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷನಿ ಅವರೂ ಕೂಡ ಕವಿವಿಯ ಬಯಟೆಕ್ನಾಲಜಿ ವಿಭಾಗದಲ್ಲೇ ಸಂಶೋಧನೆ ಮಾಡುತ್ತಿದ್ದಾರೆ. ಗಂಡ ಹೆಂಡತಿ ಇಬ್ಬರಿಗೂ ಪ್ರೋ.ವೇದಮೂರ್ತಿ ಮಾರ್ಗದರ್ಶಕರಾಗಿದ್ದಾರೆ.
ಈ ಬಗ್ಗೆ ’ಸಂಜೆ ದರ್ಪಣ’ ದೊಂದಿಗೆ ಮಾತನಾಡಿದ ವೇದಮೂರ್ತಿಯವರು ಇಬ್ಬರಿಗೂ ತಾವು ಗೈಡ್ ಆಗಿರುವುದನ್ನು ಒಪ್ಪಿಕೊಂಡಿದ್ದು, ಯಶಪಾಲ್ ಅವರು ಪಿಎಚ್‌ಡಿಗಾಗಿ ಇಲ್ಲಿ ಕುಲಸಚಿವರಾಗಿ ಆಗಮಿಸುವ ಮೊದಲೇ ಒಂದುವರೆ ವರ್ಷದ ಹಿಂದೇ ನೋಂದಾಯಿಸಿದ್ದರು. ಅಲ್ಲದೇ ಅವರ ಪತ್ನಿ ಸಹ ಐಎಫ್‌ಎಸ್ ಆಗಿದ್ದು ಅವರು ಪಿಎಚ್‌ಡಿ ಮಾಡುತ್ತಿದ್ದಾರೆಂದು ಹೇಳಿದರು.
ಸಾಮಾನ್ಯವಾಗಿ ಪದವಿ ಕಾಲೇಜಿನ ಪ್ರಾಧ್ಯಾಪಕರುಗಳಿಗೆ ಪಿಎಚ್‌ಡಿ ಮಾಡಲು ೨ವರ್ಷಗಳ ಎಫ್ ಐ ಪಿ ಅವಕಾಶ ಹಾಗೂ ವಾರ್ಷಿಕ ಮತ್ತು ಅರ್ಧ ವಾರ್ಷಿಕ ರಜೆಗಳಿರುತ್ತವೆ. ಆದರೆ ಅರಣ್ಯಾಧಿಕಾರಿಗಳಿಗೆ ಇಂತಹ ರಜೆ ಇರುವುದಿಲ್ಲ ಅಲ್ಲದೇ 6 ತಿಂಗಳ ಕೋರ್ಸ ವರ್ಕ ಹೇಗೆ ಮಾಡುತ್ತಾರೆ ಅಲ್ಲದೆ ಸಂಶೋಧನೆ ಪ್ರಬಂಧ ಯಾವಾಗ ಹೇಗೆ ಮಾಡುತ್ತಾರೆ ಎಂಬುದು ಯಕ್ಷ ಪ್ರಶ್ನೆಯೇ ಸರಿ.
ನಿಜಕ್ಕೂ ಕರ್ನಾಟಕ ಡಿಸಿಆರ್ ನಿಯಮಗಳನ್ವಯ ಕುಲಸಚಿವರ ನೇಮಕಾತಿಯೇ ಪ್ರಶ್ನಾರ್ಹವಾಗಿದ್ದು, ಗಂಡ ಹೆಂಡತಿ ಇಬ್ಬರೂ ಪಿಎಚ್‌ಡಿ ಮಾಡುತ್ತಿದ್ದು ಇವರಿಬ್ಬರಿಗೂ ಏಕಕಾಲದಲ್ಲಿ ಪಿಎಚ್‌ಡಿ ಕೊಡಿಸಲು ಹಿಂದಿನ ಕುಲಸಚಿವ ಡಾ.ಕೆ.ಟಿ.ಹನಮಂತಪ್ಪ ಅಧಿಕಾರ ದುರ್ಬಳಕೆ ಮಾಡಿಕೊಂಡರೆ ಎಂಬ ಗುಸು ಗುಸು ಸಹ ಕೇಳಿ ಬರಲಾರಂಬಿಸಿದೆ.
ಸಂಶೋಧನಾ ಪ್ರಬಂಧದ ವಿಷಯದಲ್ಲಿ ಮೌಲ್ಯಮಾಪನವಿಲ್ಲದೇ ಹೋದರೂ ’ಪ್ರಭಾವ ಬಳಕೆ’ ನಿಶ್ಚಿತವಾಗಿದ್ದು, ಅವರು ಹಾಗೂ ಅವರ ಪತ್ನಿಯ ಎಲ್ಲ ದಾಖಲೆಗಳಿಗೆ ಅವರೇ ಸಹಿ ಹಾಕುವವರಾಗಿದ್ದಾರೆ.ಕುಲಪತಿ ಪ್ರೋ.ಕೆ.ಬಿ.ಗುಡಸಿ ಈ ಬಗ್ಗೆ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ಅಲ್ಲದೇ ವಿ.ವಿ.ಯ ಅಂಗಳದಲ್ಲಿ ನೊಣ ಸತ್ತರೂ ಅದರ ಸಾಗಣೆಗೆ ಲಾರಿ ತರಿಸಲು ಆಗ್ರಹಿಸುವಂತಹ ’ದೊಡ್ಡ ಬಾಯಿ’ ಇರುವ ಕೆಲ ಸಿಂಡಿಕೇಟ್ ಸದಸ್ಯರುಗಳು ಇದುವರೆಗೆ ಬಾಯಿ ಬಿಡದಿರುವುದು ಅಚ್ಚರಿಗೆ ಕಾರಣವಾಗಿದೆ.

ವಿಶ್ವವಿದ್ಯಾಲಯದ ನಿಯಮಗಳನ್ನು ಸ್ಪಷ್ಟವಾಗಿ ಗಾಳಿಗೆ ತೂರಿದ್ದು, ಆಡಳಿತಾತ್ಮಕವಾಗಿ ಇದ್ದು,ಮೌಲ್ಯಮಾಪನ ಮಾಡದೇ ಹೋದರೂ ’ಪ್ರಭಾವ ಬಳಕೆ’ ನಿಶ್ಚಿತವಾಗಿದ್ದು ನೈತಿಕವಾಗಿ ಅವರು ಮುಂದುವರಿಯುವಂತಿಲ್ಲ. ಆಡಳಿತ ವಿಭಾಗದ ಕುಲಸಚಿವರ ಸ್ಥಾನಕ್ಕೆ ಬೇರೊಬ್ಬರನ್ನು ಸರ್ಕಾರ ನೇಮಕ ಮಾಡಬೇಕು.
ಪಿ.ಎಚ್.ನೀರಲಕೇರಿ
ಅಧ್ಯಕ್ಷರು,ಥಿಂಕರ್ಸ ಫೋರಮ್

ಕುಲಸಚಿವರಾಗಿ ನಿಯುಕ್ತರಾದ ದಿನವೇ ಕ್ಷೀರಸಾಗರ ಅವರು ಸರ್ಕಾರಕ್ಕೆ ತಮ್ಮ ಪಿಎಚ್‌ಡಿ ಮಾಡುತ್ತಿರುವ ವಿಷಯ ತಿಳಿಸಿದ್ದಾರೆನ್ನಲಾಗಿದ್ದು ಆದರೂ ಈ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಪ್ರೋ.ಕೆ.ಬಿ.ಗುಡಸಿ
ಕುಲಪತಿಗಳು,ಕವಿವಿ

 

ಪೈಪೋಟಿಯಿದ್ದರೂ ಪಟ್ಟ!
ಧಾರವಾಡ ಅರಣ್ಯ ವಿಭಾಗದ ಡಿಸಿಎಫ್ ಹುದ್ದೆಯೆಂದರೆ ಅಕ್ಷರಶಃ ಹಿಂಡುವ ಎಮ್ಮೆ ಇದ್ದಂತೆ.ಈ ಸ್ಥಾನಕ್ಕೆ ಬರಲು ಹಲವರು ತೀವ್ರ ಪೈಪೋಟಿ ನಡೆಸಿದ್ದರೂ ಪರಿಷತ್ ಸದಸ್ಯರೊಬ್ಬರ ಬೆಂಬಲದಿಂದ ಯಶಪಾಲ್ ಅವರ ಜಾಗೆಗೆ ಅವರ ಪತ್ನಿ ಸೋನಲ್ ಅವರೇ ಬರಲು ಸಾಧ್ಯವಾಯಿತೆಂದು ಇಲಾಖೆ ಕಂಬಗಳೇ ಮಾತನಾಡುತ್ತವೆ. ಅಲ್ಲದೇ ಅವರು ಧಾರವಾಡದಲ್ಲಿ ತಾಯಿಯ ಹೆಸರಿನಲ್ಲಿ ಬ್ರಹತ್ ಬಂಗ್ಲೆಯೊಂದನ್ನೂ ಕಟ್ಟಿಸುತ್ತಿದ್ದಾರೆ.

 

 

administrator

Related Articles

Leave a Reply

Your email address will not be published. Required fields are marked *