ಧಾರವಾಡ: ಮಕ್ಕಳಿಗೆ ದೈಹಿಕ ಚಟುವಟಿಕೆ ಅತಿ ಅವಶ್ಯ ಎಂದು ಎಸ್ ಡಿಎಂ ಸಂಸ್ಥೆ ಕಾರ್ಯದರ್ಶಿ ಜೀವಂದರಕುಮಾರ ಹೇಳಿದರು.
ಅವರು ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿ ವತಿಯಿಂದ ಆರಂಭಗೊಂಡ 22ನೇ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ. ಆರೋಗ್ಯದ ಹೆಚ್ಚು ಗಮನವಹಿಸಲು ಸಲಹೆ ನೀಡಿದರು.
ಎಸ್‌ಡಿಎಂ ಸಿಇಟಿ ಪ್ರಾಂಶುಪಾಲ ಡಾ.ಕೆ.ಗೋಪಿನಾಥ ಮಾತನಾಡಿ, ಪಠ್ಯದ ಜತೆ ಪಠ್ಯತೇರ ಚಟುವಟಿಕೆಯಲ್ಲಿ ಭಾಗವಹಿಸಿ ಎಂದು ಕಿವಿಮಾತು ಹೇಳಿದರು.
ಅಕಾಡೆಮಿ ಸಂಸ್ಥಾಪಕ ನೀಧಜಕುಮಾರ ಅಕಾಡೆಮಿ ನಡೆದು ಬಂದ ದಾರಿ ಬಗ್ಗೆ ವಿವರಿಸಿದರು.
ದೈಹಿಕ ನಿರ್ದೇಶಕ ಡಾ.ಬಿ.ಮಂಜುನಾಥ, ತರಬೇತುದಾರರಾದ ನಿತೀನ್ ಬಿಲ್ಲೆ, ಶಿವಾಜಿ ವಡ್ಡರ, ಹಬೀಬ ತಾಡಪತ್ರಿ, ಅಜಿಮ್, ವಿನಯ ಅರಳಿಕಟ್ಟಿ, ಹನುಮಂತ ಮಂಗಲಿ, ಕಾಶೀಮ ಸೇರಿದಂತೆ ಆಟಗಾರರು ಹಾಗೂ ಪಾಲಕರು ಇದ್ದರು. ಇಮ್ರಾನ್ ಖಾನ್ ಕಾರ್ಯಕ್ರಮ ನಿರೂಪಿಸಿದರು. ರಾಜು ಕಲಾಲ ವಂದಿಸಿದರು.