ಹುಬ್ಬಳ್ಳಿ-ಧಾರವಾಡ ಸುದ್ದಿ

’ಪಂಚ’ ಕಜ್ಜಾಯ ತಿಂದ ಜೋಶಿಗೆ ಮತ್ತೆ ಮಂತ್ರಿ ಭಾಗ್ಯ!

ಸಂಘ ನಿಷ್ಠೆ, ಕ್ರೀಯಾಶೀಲತೆಗೆ ಮಣೆ ಹಾಕಿದ ವರಿಷ್ಠರು

ಮೋದಿ ಸಂಪುಟಕ್ಕೆ ರಾಜ್ಯದ ನಾಲ್ವರು ಸಚಿವರು
ಜೋಶಿ, ಎಚ್ಡಿಕೆ, ಶೋಭಾ, ಸೋಮಣ್ಣಗೆ ಸ್ಥಾನ
ಮತ್ತೆ ನಮೋ ಪರ್ವ- ಸಂಜೆ ಐತಿಹಾಸಿಕ ಪ್ರಮಾಣ

ಹುಬ್ಬಳ್ಳಿ : ಸತತ ಐದನೇ ಬಾರಿಗೆ ಸಂಸತ್ತು ಪ್ರವೇಶಿಸಿದ್ದ ಪ್ರವೇಶಿಸಿರುವ ಅಲ್ಲದೇ ಮೋದಿ -2ನೇ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿ ಅತ್ಯಂತ ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸಿದ ಪ್ರಹ್ಲಾದ ಜೋಶಿಯವರು ಪ್ರಸಕ್ತ ಎನ್.ಡಿ.ಎಯ ಸಂಪುಟದಲ್ಲೂ ಸಚಿವರಾಗುವುದು ಖಚಿತ ಎಂಬ ಮಾತುಗಳು ಕೇಳಿ ಬರುತ್ತಿರುವುದು ನಿಜವಾಗಿದೆ.


ಇಂದು ಸಂಜೆ ೭ಗಂಟೆಗೆ ನಡೆಯುವ ಪ್ರಮಾಣವಚನ ಸ್ವೀಕರಿಸುವವರ ಪಟ್ಟಿಯನ್ನು ಇಂದು ಬೆಳಿಗ್ಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಅಮಿತ್ ಶಾ ಎನ್ ಡಿಎ ನಾಯಕರೊಂದಿಗೆ ಚರ್ಚಿಸಿ ಅಂತಿಮಗೊಳಿಸಿದ್ದು ಜೋಶಿಯವರಿಗೆ ಕರೆ ಬಂದಿದ್ದು ಧಾರವಾಡ ಜಿಲ್ಲಾ ಕಮಲ ಪಾಳೆಯದಲ್ಲಿ ಸಂಭ್ರಮ ಮನೆ ಮಾಡಲು ಕಾರಣವಾಗಿದೆ.
ವಿವಿಧ ವಾರ್ಡಗಳ ಪ್ರಮುಖರು ಈಗಾಗಲೇ ಮೋದಿ ಪ್ರಮಾಣ ಹಾಗೂ ಪ್ರಹ್ಲಾದ ಜೋಶಿಯವರಿಗೆ ಸಂಪುಟ ಸ್ಥಾನ ಹಿನ್ನೆಲೆಯಲ್ಲಿ ವಿಜಯೋತ್ಸವ ಸಹ ಆಚರಿಸಲಾಗಿದೆ.


ತಮ್ಮ ಅಶ್ವಮೇಧದ ಕುದುರೆಗೆ ಸರಿಸಾಟಿ ಯಾರೂ ಇಲ್ಲ ಎಂಬಂತೆ ಅಭೂತಪೂರ್ವ ಗೆಲುವು ದಾಖಲಿಸಿ ಧಾರವಾಡ ಕ್ಷೇತ್ರವನ್ನು ಕಮಲದ ಭದ್ರಕೋಟೆಯಾಗಿ ಉಳಿಸಿದ ಜೋಶಿಯವರು ೨೦೦೪ರಿಂದ ಕ್ಷೇತ್ರದಲ್ಲಿ ಸಂಸದರಾಗಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಮುನ್ನುಡಿ ಬರೆದಿದ್ದು ಇದನ್ನು ಅವರನ್ನು ವಿರೋಧಿಸುವವರು ಅಲ್ಲಗಳೆಯಲಾರರು.


ಕಳೆದ ಅವಧಿಯಲ್ಲಿ ಸಂಸಧೀಯ ವ್ಯವಹಾರಗಳು ಮತ್ತು ಕಲ್ಲಿದ್ದಲುವಿನಂತಹ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಅತ್ಯಂತ ನಿಕಟವರ್ತಿಯಾಗಿ ಮಾರ್ಪಟ್ಟಿರುವ ಜೋಶಿಯವರಿಗೆ ಈ ಬಾರಿ ಮಿತ್ರಪಕ್ಷಗಳ ಹಂಗಿನ ಸರ್ಕಾರವಾದರೂ ಇನ್ನಷ್ಟು ಜವಾಬ್ದಾರಿಯ ಮಹತ್ವದ ಖಾತೆಗಳು ದಕ್ಕುವ ಸಾಧ್ಯತೆಗಳಿವೆ.


ರಾಜಸ್ತಾನ, ಉತ್ತರಾಖಂಡ ಮುಂತಾದ ರಾಜ್ಯಗಳ ಚುನಾವಣಾ ಉಸ್ತುವಾರಿಯಾಗಿ ತಮ್ಮದೇ ಆದ ತಂತ್ರಗಾರಿಕೆಯಿಂದ ಮತ್ತೆ ಕಮಲ ಅರಳಿಸಿರುವ ಶ್ರೇಯಸ್ಸು ಜೋಶಿಯವರ ಹೆಗಲಿಗಿದೆ. ಅಲ್ಲದೇ ಸಂಘ ಪರಿವಾರದ ಜತೆ ಸಹ ಉತ್ತಮ ಸಂಬಂಧ ಹೊಂದಿರುವುದು ಮಂತ್ರಿಗಿರಿಗೆ ಪ್ಲಸ್ ಆಗಿ ಪರಿಣಮಿಸಿದೆ.

administrator

Related Articles

Leave a Reply

Your email address will not be published. Required fields are marked *