ಹುಬ್ಬಳ್ಳಿ-ಧಾರವಾಡ ಸುದ್ದಿ
ನ.12ಕ್ಕೆ ’ಪ್ರೇಮಂ ಪೂಜ್ಯಂ’ ತೆರೆಗೆ

ನ.12ಕ್ಕೆ ’ಪ್ರೇಮಂ ಪೂಜ್ಯಂ’ ತೆರೆಗೆ

ಹುಬ್ಬಳ್ಳಿ: ಈಗಾಗಲೇ ಟ್ರೇಲರ್ ಮೂಲಕ ಪ್ರಶಂಸೆ ಗಿಟ್ಟಿಸಿಕೊಂಡಿರುವ ನೆನಪಿರಲಿ ಪ್ರೇಮ್ ಅಭಿನಯದ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ನವೆಂಬರ್ 12ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಬಿಡುಗಡೆ ಹಿನ್ನೆಲೆಯಲ್ಲಿ ಇಂದು ಚಿತ್ರತಂಡ ಹುಬ್ಬಳ್ಳಿಗೆ ಆಗಮಿಸಿತ್ತು.


ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ನಿರ್ದೇಶಕ ಡಾ.ರಾಘವೇಂದ್ರ ಮಾತನಾಡಿ ‘ಚಿತ್ರ ಮುಗಿದು ಒಂದು ವರ್ಷದ ಮೇಲಾಗಿದ್ದು, ಈಗ ತೆರೆಗೆ ಬರಲು ಸಿದ್ದವಾಗಿದೆ. ಚಿತ್ರದ ಚಿತ್ರೀಕರಣವು ಕರ್ನಾಟಕ, ಊಟಿ, ಮನಾಲಿ, ಧರ್ಮಶಾಲಾ, ವಿಯಟ್ನಾಂಗಳಲ್ಲಿ ನಡೆದಿದೆ ಎಂದರು.
ತಾವು ಮೂಲತಃ ವೈದ್ಯನಾಗಿದ್ದು, ಕ್ಲಿನಿಕ್‌ನಲ್ಲಿ ಕಥೆ ಶುರುವಾಯಿತು. ಕಾರ್‌ನಲ್ಲಿ ಬೆಳೆಯುತ್ತಾ ಹೋಯಿತು. ಬಾಥ್‌ರೂಂನಲ್ಲಿ ಟ್ಯೂನ್ ಆಯಿತು. ಅದೆಲ್ಲವನ್ನು ಪುಟಗಟ್ಟಲೆ ಬರೆದಿಟ್ಟುಕೊಂಡಿದ್ದೆ. ಸಿನಿಮಾ ಆಗುತ್ತದೆ ಎಂಬ ನಂಬಿಕೆ ಇರಲಿಲ್ಲ. ಡಾ.ರಕ್ಷಿತ್ ಕೆಡಂಬಾಡಿ, ಡಾ.ರಾಜಕುಮಾರ್ ಜಾನಕಿರಾಮನ್, ಮನೋಜ್ ಕೃಷ್ಣನ್ ಜಂಟಿಯಾಗಿ ಕೆಡಂಬಾಡಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದು ಅದ್ಭುತವಾಗಿ ಮೂಡಿಬಂದಿದೆ ಎಂದರು.
ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಲವ್ಲಿಸ್ಟಾರ್ ನಾಯಕ ಪ್ರೇಮ್ ಚಿತ್ರೀಕರಣದ ಅನುಭವಗಳನ್ನು ಮೆಲುಕು ಹಾಕಿದರರಲ್ಲದೇ ಜನರಿಗೆ ಇಷ್ಟವಾಗುವುದೆಂಬ ಆಶಯ ವ್ಯಕ್ತಪಡಿಸಿದರು. ನಾಯಕಿ ಬೃಂದಾ ಆಚಾರ್ಯ, ಮಾಸ್ಟರ್ ಆನಂದ, ಈರಣ್ಣ ಉಪಸ್ಥಿತರಿದ್ದರು.
ಛಾಯಾಗ್ರಹಣ ನವೀನ್ ಕುಮಾರ್, ಸಂಕಲನ ಹರೀಶ್ ಕೊಮ್ಮೆ ನಿರ್ವಹಿಸಿದ್ದಾರೆ. ತಾರಾಗಣದಲ್ಲಿ ಐಂದ್ರಿತಾ ರೈ, ಸಾಧುಕೋಕಿಲ, ಅವಿನಾಶ್, ಮಾಳವಿಕ, ಅನು ಪ್ರಭಾಕರ್ ಮುಂತಾದವರು ನಟಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *