ನವಲಗುಂದ: ಶಿರಹಟ್ಟಿ ಭಾವೈಕ್ಯ ಸಂಸ್ಥಾನ ಪೀಠದ ದಿಂಗಾಲೇಶ್ವರ ಶ್ರೀಗಳಿಗೆ ಅಪರಿಚಿತ ವ್ಯಕ್ತಿಗಳಿಂದ ಪದೇಪದೇ ಹಲ್ಲೆ ಯತ್ನ ನಡೆಯುತ್ತಿದ್ದು ಅಂತಹ ವ್ಯಕ್ತಿಗಳಿಂದ ರಕ್ಷಣೆ ಮಾಡಿ, ಶ್ರೀಗಳಿಗೆ ಸೂಕ್ತ ರಕ್ಷಣೆ ನೀಡಲು ಸರಕಾರ ಮುಂದಾಗಬೇಕೆಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.
ನಾಡಿನ ಹೆಸರಾಂತ ವಾಕ್ ಪಟು ಭಾವೈಕ್ಯ ಹರಿಕಾರರಾದ ಶ್ರೀಗಳು ಪೊಲೀಸ್ ರಕ್ಷಣೆ ಸರಕಾರದ ಕರ್ತವ್ಯವಾಗಿದ್ದು ಇಂದು ಹೋರಾಟಗಾರರು ಒತ್ತಾಯಿಸಿದರು. ಮಠ ಮಂದಿರ ಉಳಿಸಿ ಘೋಷಣೆ ಕೂಗಿ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹಿದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಮಲ್ಲಿಕಾರ್ಜುನ ಮಠದ ಸತೀಶ್, ಗಿರೀಶ ಎಸ್ ಎಮ್ ಹಾಗೂ ಸಂಜೀವ ಶ್ರೀಗಳು, ರಾಯನಗೌಡ ಪಾಟೀಲ, ಅಪಣ್ಣ ಹಳ್ಳದ, ಅಬ್ಬಾಸ್ ದೇವರುಡು, ಮಂಜು ಜಾಧವ, ಅಪಣ್ಣ ಹಿರಗಣ್ಣವರ, ಬಸವರಾಜ ಹರಿವಾಳದ, ಉಸ್ಮಾನ ಬಬರ್ಚಿ, ಶರಣು ಯಮನೂರ, ಸತೀಶ ಬೆಂಡಿಗೇರಿ, ಚನ್ನಪ್ಪ ನಾಗರಳ್ಳಿ, ಶಂಕ್ರು ತೋಟದ, ಶಿವಾನಂದ ತಡಸಿ, ಮಾಂತೇಶ ಬೋವಿ, ಶಿವಾಜಿ ಕಲಾಲ, ಸುಲೇಮಾನ ನಾಶಿಪುಡಿ, ಬಿ.ಎಲ್. ಪಾಟೀಲ, ಚನಬಸಪ್ಪ ಯಮನೂರ, ಹನುಮಂತಪ್ಪ ಗಡಾದ, ಆನಂದ ಹೂಗಾರ ಇದ್ದರು.