ಹುಬ್ಬಳ್ಳಿ: ಪಂಚರಾಜ್ಯಗಳ ಚುನಾವಣೆ ನಂತರ ಪ್ರಧಾನಿ ಮೋದಿ ಸರ್ಕಾರ್ ಕೈಗೊಳ್ಳುತ್ತಿರುವ ಪೆಟ್ರೋಲ್, ಡೀಸೆಲ್, ಗ್ಯಾಸ್ ನಿತ್ಯ ಬೆಲೆ ಏರಿಕೆ ಇಂದಾಗಿ ಜನ ಸಾಮಾನ್ಯರ ಜೀವನ ದುಸ್ಥರವಾಗಿದೆ ಎಂದು ಆರೋಪಿಸಿ ನಗರದಲ್ಲಿಂದು ವಿದ್ಯಾನಗರ ಮತ್ತು ಉಣಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ವಿನೂತನ ಪ್ರತಿಭಟನೆ ನಡೆಸುವ ಮೂಲಕ ಬೆಲೆ ಏರಿಕೆ ಮುಕ್ತ ಭಾರತ ಅಭಿಯಾನ ನಡೆಸಲಾಯಿತು.
ನಗರದ ಗೋಪನಕೊಪ್ಪ ವೃತ್ತದಲ್ಲಿ ಬೆಲೆ ಏರಿಕೆ ಮುಕ್ತ ಭಾರತ ಅಭಿಯಾನದ ಭಾಗವಾಗಿ ಸಿಲಿಂಡರ್, ಸ್ಕೂಟರ್, ಬೈಕ್ ಇತ್ಯಾದಿಗಳಿಗೆ ಹೂವಿನ ಹಾರಾ ಹಾಕಿ, ಹಲಗಿ ಬಾರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ವಿನೂತನ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಅವರು, ಆಡಳಿತರೂಢ ಬಿಜೆಪಿ ಸರ್ಕಾರದ ದುಬಾರಿ ಆಡಳಿತದಿಂದ ಜನರು ರೋಸಿ ಹೋಗಿದ್ದು, ಜನಸಾಮಾನ್ಯರನ್ನು ಸಂಕಷ್ಟಕ್ಕೀಡು ಮಾಡುವಂತ ಕೆಲಸ ಮಾಡುತ್ತಿದೆ. ಬೆಲೆ ಏರಿಕೆಯಿಂದ ಬೆಂದು ಹೋಗಿರುವ ಜನತೆ ಬದಲಾವಣೆ ಬಯಸುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ಸಂದಿಲ್‌ಕುಮಾರ, ಸುವರ್ಣ ಕಲ್ಲಕುಂಟ್ಲಾ, ಪ್ರಕಾಶ ಕುರಹಟ್ಟಿ, ಆರಿಫ್ ಭದ್ರಾಪುರ, ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ, ಹೂವಪ್ಪ ದಾಯಗೋಡಿ, ಸುನೀಲ ಮಠಪತಿ, ಮಹ್ಮದಶರೀಫ್ ಗರಗದ, ಅಶೋಕ ಕಲಾದಗಿ, ಶಾಕೀರ ಸನದಿ, ಬಂಗಾರೇಶ ಹಿರೇಮಠ, ಪೀರಾಜಿ ಖಂಡೇಕರ, ವೀರಣ್ಣ ಹಿರೇಹಾಳ, ದೀಪಾ ಗೌರಿ ಸೇರಿದಂತೆ ಅನೇಕರಿದ್ದರು.