ಹುಬ್ಬಳ್ಳಿ-ಧಾರವಾಡ ಸುದ್ದಿ
ಕಾಣದಂತೆ ಮಾಯವಾದನು; ಹೃದಯಾಘಾತ- ಅಪ್ಪು ವಿಧಿವಶ

ಕಾಣದಂತೆ ಮಾಯವಾದನು; ಹೃದಯಾಘಾತ- ಅಪ್ಪು ವಿಧಿವಶ

ಬೆಂಗಳೂರು: ‘ಕಾಣದಂತೆ ಮಾಯವಾದನೋ ನಮ್ಮ ಶಿವ’ ಎಂದು ಹಾಡುತ್ತಲೇ ಕನ್ನಡಿಗರ ಹೃದಯಕ್ಕೆ ಬಲಗಾಲಿಟ್ಟಿದ್ದ ವರನಟ ಡಾ.ರಾಜಕುಮಾರ ಸುಪುತ್ರ, ಪವರಸ್ಟಾರ್ ಪುನೀತ್ ರಾಜಕುಮಾರ( 46) ಇಂದು ಬಾನ ದಾರಿಯಲ್ಲಿ ಪಯಣ ಬೆಳೆಸಿದರು.
ಬೆಳಿಗ್ಗೆ ಜಿಮ್‌ನಲ್ಲಿ ಕಸರತ್ತು ನಡೆಸುತ್ತಿದ್ದಂತ ಸಂದರ್ಭದಲ್ಲಿ ಅನಾರೋಗ್ಯಕ್ಕೊಳಗಾದ ಮೊದಲು ರಮಣಶ್ರೀ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ 11-30ರ ಸುಮಾರಿಗೆ ವಿಕ್ರಂ ಆಸ್ಪತ್ರೆಗೆ ದಾಖಲಿಸಿದ ನಂತರ ವೈದ್ಯರು ಹರಸಾಹಸ ಪಟ್ಟರೂ ಗಂಧದ ಗುಡಿಯ ಭರವಸೆಯ ತಾರೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.
ತಜ್ಞ ವೈದ್ಯರ ತಂಡ ಈಗಾಗಲೇ ಅವರಿಗೆ ಇಸಿಜಿ ಸೇರಿದಂತೆ ಹಲವು ಪರೀಕ್ಷೆಗಳನ್ನು ವೈದ್ಯರು ನಡೆಸಿದರೂ ಪ್ರಯೋಜನವಾಗದೇ ಹೋಯಿತು.


ಭಜರಂಗಿ-2 ನೋಡೋದಕ್ಕೆ ಬಂದಿದ್ದ ಶಿವಣ್ಣ ಕುಟುಂಬ ಆಸ್ಪತ್ರೆಯತ್ತ ದೌಡಾಯಿಸಿದ್ದು, ರಾಘವೇಂದ್ರ ರಾಜಕುಮಾರ ಸಹ ಆಗಮಿಸಿದ್ದಾರೆ.
ನಟ ಪುನೀತ್ ನಿವಾಸದ ಬಳಿ, ವಿಕ್ರಂ ಆಸ್ಪತ್ರೆಯ ಬಳಿ ಅಪುö್ಪ ಅಭಿಮಾನಿಗಳು ಜಮಾಯಿಸುತ್ತಿದ್ದು, ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ವಿಕ್ರಂ ಆಸ್ಪತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಅಶೋಕ, ಬಿ.ಸಿ. ಪಾಟೀಲ, ಚಿತ್ರನಟರಾದ ರವಿಚಂದ್ರನ್, ಯಶ್, ದರ್ಶನ್, ರಾಕಲೈನ್ ವೆಂಕಟೇಶ, ವಿಜಯ ರಾಘವೇಂದ್ರ, ಶೃತಿ,ಸೇರಿದಂತೆ ನೂರಾರು ನಟ ನಟಿಯರು ಆಸ್ಪತ್ರೆಗೆ ಆಗಮಿಸಿದ್ದಾರೆ.


ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಶಿವರಾಜಕುಮಾರ ಚರ್ಚೆ ಸಹ ನಡೆಸಿದ್ದಾರೆ.
ಬೆಂಗಳೂರು ಪೊಲೀಸ್ ಆಯುಕ್ತರು ಸಹ ರಾಜಧಾನಿಯ ಎಲ್ಲ ಠಾಣೆ ವ್ಯಾಪ್ತಿಯಲ್ಲಿ ಬಂದೋಬಸ್ತಗೆ ಸೂಚಿಸಲಾಗಿದೆ. ಅಲ್ಲದೇ ಎಲ್ಲ ಮದ್ಯದಂಗಡಿಗಳನ್ನು ಮಧ್ಯಾಹ್ನ 3ರಿಂದ ನಾಳೆ ಮದ್ಯರಾತ್ರಿವರೆಗೆ ಬಂದ್ ಮಾಡಲು ಸೂಚಿಸಲಾಗಿದೆ.
ನಾಯಕನಾಗಿ ಅಪ್ಪು ಚಿತ್ರದ ಮೂಲಕ ಕಾಲಿಟ್ಟ ಪುನೀತ್ 29 ಚಿತ್ರಗಳಲ್ಲಿ ಹಿರೋ ಆಗಿ ನಟಿಸಿದ್ದು ಉತ್ತಮ ಬಾಲನಟನಾಗಿ ಬೆಟ್ಟದ ಹೂವು ಚಿತ್ರಕ್ಕಾಗಿ ರಾಷ್ಟçಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಇವರ ಜೇಮ್ಸ್ ಚಿತ್ರ ಅಂತಿಮ ಹಂತದಲ್ಲಿದೆ.


ಕನ್ನಡದ ಕೋಟ್ಯಾಧೀಪತಿ, ಡಾನ್ಸ್ ಕರ್ನಾಟಕ ಸ್ಪರ್ಧೆಯ ನಿರೂಪಕರಾಗಿ ಜನ ಮೆಚ್ಚುಗೆ ಗಳಿಸಿದ್ದರು.
ವರನಟ ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಕಿರಿಯ ಪುತ್ರನಾಗಿ 1975ರಲ್ಲಿ ಜನಿಸಿದ್ದ ಪುನೀತ್ ರಾಜ್ ಕುಮಾರ್ ಅವರ ಮೊದಲ ಹೆಸರು ಲೋಹಿತ್. ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಪುನೀತ್ ರಾಜ್ ಕುಮಾರ್ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದಾರೆ. 26 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ.
ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ ನಟನಾಗಿ ವಸಂತ ಗೀತ (1980), ಭಾಗ್ಯದಾತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983) ಮತ್ತು ಬೆಟ್ಟದ ಹೂವು (1985) ಅವರು ನಟಿಸಿದ ಚಿತ್ರಗಳ ನಟನೆಗೆ ಮೆಚ್ಚುಗೆ ಪಡೆದರು. ಅವರ ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ನಟನೆಗೆ ರಾಷ್ಟç ಪ್ರಶಸ್ತಿ ಪಡೆದುಕೊಂಡಿದ್ದರು.
ಪುನೀತ್ ರಾಜ್ ಕುಮಾರ್ ಡಿಸೆಂಬರ್ 1 ,1999 ರಂದು ಅಶ್ವಿನಿ ರೇವಂತ್ ರನ್ನು ವಿವಾಹವಾದರು.ಪುನೀತ್ ಹಾಗೂ ಅಶ್ವಿನಿ ದಂಪತಿಗೆ ದ್ರಿತಿ ಮತ್ತು ವಂದಿತಾ ಎಂಬ ಇಬ್ಬರು ಪುತ್ರಿಯರಿದ್ದಾರೆ.
2002ರಲ್ಲಿ ಪುನೀತ್ `ಅಪುö್ಪ’ ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದರು. ಬಳಿಕ ಅಭಿ (2003), ಆಕಾಶ್ (2005), ಅರಸು (2007), ಮಿಲನ (2007), ಜಾಕೀ (2010), ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014) ಸೇರಿದಂತೆ ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ್ದರು.
ಬಿಂದಾಸ್, ವಂಶಿ, ರಾಜ್ ದ ಶೋ ಮ್ಯಾನ್. ಪ್ರಥ್ವಿ, ರಾಮ್ , ಜಾಕಿ, ದೊಡ್ಮನೆ ಹುಡುಗ, ರಾಜಕುಮಾರ, ಅಂಜನಿ ಪುತ್ರ, ನಟಸಾರ್ವಭೌಮ ಪುನೀತ್ ಅವರ ಜನಪ್ರಿಯ ಚಿತ್ರಗಳಾಗಿವೆ. ನಟನೆಯ ಜೊತೆಗೆ ಕನ್ನಡದ ಪ್ರಸಿದ್ದ ರಿಯಾಲಿಟಿ ಶೋ ಕನ್ನಡದ ಕೋಟ್ಯಧಿಪತಿ, ಹೂ ವಾಂಟ್ಸ್ ಟು ಬಿ ಮಿಲಿಯನೇರ್ ನಿರೂಪಣೆ ಮಾಡಿದ್ದಾರೆ.

ಸಿದ್ಧಾರೂಢರ ಪರಮಭಕ್ತ

ಯುವರತ್ನ ಚಿತ್ರದ ಪ್ರಮೋಶನ್‌ಗಾಗಿ ಕೆಲ ತಿಂಗಳ ಹಿಂದೆ ಹುಬ್ಬಳ್ಳಿಗೆ ಆಗಮಿಸಿದ್ದ ಅಪ್ಪು ಗೋಕುಲ ರಸ್ತೆಯಲ್ಲಿನ ಅರ್ಬನ್ ಓಯಾಸಿಸ್ ಮಾಲ್ ಎದುರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ ಅವರ ಕೊನೆಯ ಭೇಟಿಯಾಗಿತ್ತು. ತಂದೆ ನಟಸಾರ್ವಭೌಮ ಡಾ.ರಾಜಕುಮಾರರಂತೆ ಹುಬ್ಬಳ್ಳಿಗೆ ಬಂದಾಗಲೆಲ್ಲ ಪುನೀತ್ ಶ್ರೀ ಸಿದ್ಧಾರೂಢ ಮಠಕ್ಕೆ ಸಹ ಭೇಟಿ ನೀಡಿ ಉಭಯ ಶ್ರೀಗಳ ಗದ್ದುಗೆಯ ದರ್ಶನ ಪಡೆಯುತ್ತಿದ್ದರು.

administrator

Related Articles

Leave a Reply

Your email address will not be published. Required fields are marked *