ಹುಬ್ಬಳ್ಳಿ : ಬ್ಲೂಮರ್ಸ್ ಗ್ರೂಪ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗುತ್ತಿರುವ ವಾಣಿಜ್ಯ ರಾಜಧಾನಿಯ ರಾಜಸ್ಥಾನಿ ಆಟಗಾರರ ಅತಿದೊಡ್ಡ ಕ್ರಿಕೆಟ್ ಪಂದ್ಯಾವಳಿ ’ರಾಜಸ್ತಾನ ಪ್ರೀಮಿಯರ್ ಲೀಗ್’ ಡಿ.19ರಿಂದ 22ರವರೆಗೆ ರೇಲ್ವೆ ಮೈದಾನದಲ್ಲಿ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಸ್ಟೇಷನ್ ರಸ್ತೆಯಲ್ಲಿರುವ ಸ್ವರ್ಣ ಪ್ಯಾರಡೈಸ್ ಹೋಟೆಲ್ ನಲ್ಲಿ ಆಟಗಾರರ ಹರಾಜು ಬುಧವಾರ ನಡೆಯಿತು. 150 ಆಟಗಾರರ ಹರಾಜಿನಿಂದ ಸುಮಾರು 12 ತಂಡಗಳನ್ನು ರಚಿಸಲಾಗಿದೆ.
ಮುಂಬೈನ ವಿದ್ಯುತ್ ಸ್ವಿಚ್ ಕಂಪನಿ ಜಿ. ಎಂ. ಮೊಡ್ಯುಲರ್ ಪ್ರೈವೇಟ್ ಲಿಮಿಟೆಡ್‌ದವರು ಪಂದ್ಯಾವಳಿಯ ಪ್ರಮುಖ ಪ್ರಾಯೋಜಕರಾಗಿದ್ದಾರೆ.
ಪಂದ್ಯಾವಳಿಯಲ್ಲಿ ವಿಜೇತರಾದ ತಂಡಕ್ಕೆ 51 ಸಾವಿರ ರೂ ನಗದು ಹಾಗೂ ಟ್ರೋಫಿ, ರನ್ನರ್ ಅಪ್ ತಂಡಕ್ಕೆ 25 ಸಾವಿರ ರೂ ದೊರೆಯಲಿದೆ.
ನವಕರ ಮಹಾಮಂತ್ರ ಮತ್ತು ಗಾಯತ್ರಿ ಮಂತ್ರದೊಂದಿಗೆ ಆರಂಭವಾದ ಹರಾಜು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂದೀಪ್ ವೇದಮುತಾ (ಬೆಂಗಳೂರು), ರಾಹುಲ್ ಜೈನ್ ಮತ್ತು ಹುಬ್ಬಳ್ಳಿಯ ಪಿಜೆಕೆವೈಪಿ ಜಿಲ್ಲಾ ಅಧ್ಯಕ್ಷ ಸುರೇಶ ಸಿ.ಜೈನ್ ಹಾಗೂ ಬ್ಲೂಮರ್ಸ್ ಸ್ಪೋರ್ಟ್ಸ್ ಗ್ರೂಪ್ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಟ್ರೋಫಿಯನ್ನು ಅನಾವರಣಗೊಳಿಸಿದರು.
ಮನಕ್ಷಾ ಪುರೋಹಿತ್, ಪ್ರಕಾಶ್ ಜೈನ್, ಹರೀಶ್ ರಾಜಪುರೋಹಿತ್, ವಿಕ್ರಮ್ ಪೊಮನಿ, ಮನೀಶ್ ಕೊಠಾರಿ, ದಿನೇಶ್ ರಾಥೋಡ್ ಮತ್ತು
ಅಶೋಕ್ ಅಮೀನಗಡ, ರಾಮ್ ಶರ್ಮಾ ಸೇರಿದಂತೆ ಅನೇಕರಿದ್ದರು.
ಕಳೆದ 10 ವರ್ಷಗಳಿಂದ ಈ ಪಂದ್ಯಾವಳಿ ನಡೆಯುತ್ತಿದ್ದು ವರ್ಷದಿಂದ ವರ್ಷಕ್ಕೆ ಜನಪ್ರೀಯತೆ ಪಡೆಯುತ್ತಿದೆ.