ಹುಬ್ಬಳ್ಳಿ-ಧಾರವಾಡ ಸುದ್ದಿ
ರಂಜಾನ್ ಸಡಗರ: ಸಾಮೂಹಿಕ ಪ್ರಾರ್ಥನೆ, ಪರಸ್ಪರ ಶುಭಾಶಯ ವಿನಿಮಯ

ರಂಜಾನ್ ಸಡಗರ: ಸಾಮೂಹಿಕ ಪ್ರಾರ್ಥನೆ, ಪರಸ್ಪರ ಶುಭಾಶಯ ವಿನಿಮಯ

ಹುಬ್ಬಳ್ಳಿ: ಅವಳಿನಗರದಲ್ಲಿ ರಂಜಾನ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ವಿವಿಧ ಈದಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಸಂಭ್ರಮದಿಂದ ಹಬ್ಬವನ್ನಾಚರಿಸಿದರು.


ಚನ್ನಮ್ಮ ವೃತ್ತ ಸಮೀಪ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಮರು ಮಾಲಾನಾ ಜಹಿರುದ್ದೀನ ಖಾಜಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಎಲ್ಲರಿಗೂ ಸುಖ ಶಾಂತಿ ನೀಡುವಂತೆ ಪ್ರಾರ್ಥಿಸಿದರು.


ಕೋವಿಡ್ ಲಾಕ್‌ಡೌನ್ ಕಾರಣ ಎರಡು ವರ್ಷ ರಂಜಾನ್ ವೇಳೆ ಸಾಮೂಹಿಕ ಪ್ರಾರ್ಥನೆ ಮಾಡಿರಲಿಲ್ಲ. ಈ ಬಾರಿ ಅವಕಾಶ ಸಿಕ್ಕ ಹಿನ್ನೆಲೆ ಯಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.


ಅಂಜುಮನ್ ಅಧ್ಯಕ್ಷ ಮಹ್ಮದ ಯೂಸೂಫ್ ಸವಣೂರ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಅಲ್ತಾಫ್ ಹಳ್ಳೂರ, ಶಿರಾಜ ಅಹ್ಮದ ಕುಡಚಿವಾಲೆ, ಅನ್ವರ ಮುಧೋಳ, ಬಾಬಾಜಾನ ಮುಧೋಳ, ಫಾರೂಕ ಅಬ್ಬೂನವರ, ಶಾಜಮಾನ ಮುಜಾಹಿದ, ವಾಜೀದ ಬಜೇರಿ,ರಾಜೇಸಾಬ ಸಿಕಂದರ, ಮೊಹ್ಮದ ಕೋಳೂರ, ಸೇರಿದಂತೆ ಸಾವಿರಾರು ಮುಸ್ಲಿಂ ಬಾಂಧವರು ಪರಸ್ಪರ ಶುಭ ಕೋರಿದರು. ಶಾಸಕ ಪ್ರಸಾದ ಅಬ್ಬಯ್ಯ, ಸದಾನಂದ ಡಂಗನವರ, ರಜತ ಉಳ್ಳಾಗಡ್ಡಿಮಠ, ಶಂಕ್ರಣ್ಣ ಬಿಜವಾಡ, ಸಂತೋಷ ಚಲವಾದಿ, ಪ್ರಕಾಶ ಬುರಬುರೆ, ಪಾರಸಮಲ್ ಜೈನ, ಸೆಂಧಿಲ್ ಕುಮಾರ ಸೇರಿದಂತೆ ಅನೇಕರು ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದರು.


ತದನಂತರ ಪ್ರತಿವರ್ಷದಂತೆ ಮುಸ್ಲಿಂ ಬಾಂಧವರು ಮೂರುಸಾವಿರಮಠಕ್ಕೆ ತೆರಳಿ ಜಗದ್ಗುರು ಡಾ.ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿಗಳ ದರ್ಶನಾಶೀರ್ವಾದ ಮಾಡಿದರು.

ಹಳೇಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮೌಲಾನಾ ಹಾಫೀಜ್ ಖಾರಿ ನಯೀಮುದ್ದೀನ್ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ, ಅಬ್ದುಲ್ ಮುನಾಫ್ ದೇವಗಿರಿ, ಇಮಾಮಹುಸೇನ ಮಡಕಿ, ಸಲೀಂ ಸುಂಡಕೆ, ಅಸ್ಪಾಕ್ ಬಿಜಾಪುರ, ಶೋಯಬ್ ಮಿರ್ಜಾ, ಮಹ್ಮದಯೂಸೂಫ್ ಬಂಗ್ಲೆವಾಲೆ, ಅಹ್ಮದರಜಾ ಕಿತ್ತೂರ, ಇರ್ಫಾನ್ ಜಾಲಗಾರ, ಫಜ್ಲು ಕಾಲೇಬುಡ್ಡೆ, ಮಹ್ಮದರೇಹಾನ ಕಿತ್ತೂರ, ಬಶೀರ ಧಾರವಾಡ, ಅಬ್ದುಲ್ ಖಾದರ್ ಇನ್ನಿತರರಿದ್ದರು. ಎಲ್ಲೆಡೆ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.

ಧಾರವಾಡ ವರದಿ

ಬೆಳಗ್ಗೆ 10.30ಕ್ಕೆ ಧಾರವಾಡ ಗುಲಗುಂಜಿಕೊಪ್ಪದ ಈದ್ಗಾ ಮೈದಾನದಲ್ಲಿ ಜಮಾಯಿಸಿದ್ದ ಸಾವಿರಾರು ಮುಸಲ್ಮಾನ ಬಾಂಧವರಿಗೆ ಜುಮ್ಮಾ ಮಸೀದಿಯ ಪೇಶ ಇಮಾಮ ಮಹ್ಮದ ಉಮರ ತಹಶೀಲದಾರ ಅವರು ಪ್ರಾರ್ಥನೆ ಬೋಧಿಸಿದರು.

ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ೩ ವರ್ಷಗಳ ನಂತರ ಈದ್ಗಾದಲ್ಲಿ ರಂಜಾನ್ ಹಬ್ಬವನ್ನು ಭಾವನಾತ್ಮಕವಾಗಿ ಆಚರಿಸಲಾಯಿತು. ಬೀರೆ ತರಿಕತ್ ಸಯ್ಯದ ದಾದಾಪೀರ ಮದಾರಿ, ಗಫಾರಸಾಬ ಮುಲ್ಲಾ, ಹುಸೇನಸಾಬ ಮುಲ್ಲಾ, ಫಿರೋಜ್ ನಾಯ್ಕರ, ಹುಸೇನಸಾಬ ಮುಲ್ಲಾನವರ, ಮೋದಿನಸಾಬ ಮುಲ್ಲಾನವರ, ರಫೀಕ ಸೇರಿದಂತೆ ಹಲವರಿದ್ದರು.

ಅಪಾರ ಪ್ರಮಾಣದ ಸಮಾಜ ಬಾಂಧವರು ಪ್ರಾರ್ಥನೆಯಲ್ಲಿ ಪಾಲ್ಗೊಂಡು ಅಲ್ಲಾಹನನ್ನು ಸ್ಮರಿಸಿದ ಬಳಿಕ ಪರಸ್ಪರ ರಮಜಾನ್ ಶುಭಾಶಯ ವಿನಿಮಯ ಮಾಡಿಕೊಂಡರು. ನೂರಾರು ಮಕ್ಕಳು ರಮಜಾನ್ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಬಡವರು, ನಿರ್ಗತಿಕರು, ಅಂಗವಿಕಲರಿಗೆ ನಗದು, ಧವಸ, ವಸ್ತ್ರ ಮತ್ತಿತರ ಸಾಮಗ್ರಿಗಳನ್ನು ದಾನ ನೀಡಿದರು.

ಹಳೇಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮೌಲಾನಾ ನಜೀಮುದ್ದೀನ್ ಪ್ರಾರ್ಥನೆ ಬೋಧಿಸಿದರು. ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ, ಅಬ್ದುಲ್ ಮುನಾಫ್ ದೇವಗಿರಿ, ಇಮಾಮಹುಸೇನ ಮಡಕಿ, ಸಲೀಂ ಸುಂಡಕೆ, ಅಸ್ಪಾಕ್ ಬಿಜಾಪುರ, ಶೋಯಬ್ ಮಿರ್ಜಾ, ಮಹ್ಮದಯೂಸೂಫ್ ಬಂಗ್ಲೆವಾಲೆ, ಅಹ್ಮದರಜಾ ಕಿತ್ತೂರ, ಇರ್ಫಾನ್ ಜಾಲಗಾರ, ಫಜ್ಲು ಕಾಲೇಬುಡ್ಡೆ, ಮಹ್ಮದರೇಹಾನ ಕಿತ್ತೂರ, ಬಶೀರ ಧಾರವಾಡ, ಅಬ್ದುಲ್ ಖಾದರ್ ಇನ್ನಿತರರಿದ್ದರು.

ಸಮಾಜದ ಮುಖಂಡರಾದ ಮೊಹಮ್ಮದಇಸ್ಮಾಯಿಲ್ ತಮಟಗಾರ, ಅಂಜುಮನ್ ಅಧ್ಯಕ್ಷ ಇಕ್ಬಾಲ್ ಜಮಾದಾರ, ಉಪಾಧ್ಯಕ್ಷ ಆಶ್ಪಾಕ್ ಬೆಟಗೇರಿ, ಕಾರ್ಯದರ್ಶಿ ನಜೀರ ಮನಿಯಾರ, ಗಣ್ಯರಾದ ಡಾ.ಸರ್.ಐ.ಎ.ಪಿಂಜಾರ, ಖಲೀಲ್ ಅಹ್ಮದ್ ದಾಸನಕೊಪ್ಪ, ಜಬ್ಬಾರ ನಿಪ್ಪಾಣಿ, ರಫೀಕ್ ಶಿರಹಟ್ಟಿ, ಶಫಿ ಕಳ್ಳಿಮನಿ, ಯಾಸೀನ್ ಹಾವೇರಿಪೇಟ, ಖಲೀಲ ದಾಸನಕೊಪ್ಪ, ಮೈನುದ್ದೀನ ನದಾಫ್, ಅಜಗರ ಮುಲ್ಲಾ, ಇಕ್ಬಾಲ್ ಲಗದಗ. ನಿಜಾಮ ರಾಹಿ, ಮುಕ್ತಿಯಾರ ಪಠಾಣ, ಶಕೀಲ ಮುಲ್ಲಾ ಸೇರಿದಂತೆ ಅಪಾರ ಪ್ರಮಾಣದ ಇಸ್ಲಾಂ ಬಾಂಧವರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

administrator

Related Articles

Leave a Reply

Your email address will not be published. Required fields are marked *