ಹುಬ್ಬಳ್ಳಿ-ಧಾರವಾಡ ಸುದ್ದಿ

ಫಿಯೋನಾ ಸನ್‌ಫ್ಲವರ್ ಆಯಿಲ್‌ಗೆ ರಶ್ಮಿಕಾ ರಾಯಭಾರಿ

ಹುಬ್ಬಳ್ಳಿ: ಬುಂಗೆ ಇಂಡಿಯಾ ಫಿಯೋನಾ ಬ್ರಾಂಡ್‌ನಲ್ಲಿ ರಿಫೈನ್ಡ್ ಸನ್‌ಫ್ಲವರ್ ಆಯಿಲ್ ಬಿಡುಗಡೆ ಮಾಡಿದೆ. ಇದಕ್ಕೆ ನಟಿ ರಶ್ಮಿಕಾ ಮಂದಣ್ಣ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.


ಈ ಸನ್‌ಫ್ಲವರ್ ಆಯಿಲ್‌ನಲ್ಲಿ ವಿಟಮಿನ್ ಎ, ಡಿ, ಇ ಮತ್ತು ಕೆ ಸತ್ವವಿದೆ. ದೇಹಕ್ಕೆ ಇದು ಶೇ 50ಕ್ಕಿಂತ ಹೆಚ್ಚು ವಿಟಮಿನ್‌ಗಳನ್ನು ವರ್ಗಾಯಿಸುತ್ತದೆ ಎಂದು ಕಂಪನಿ ತಿಳಿಸಿದೆ.
ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಉತ್ಪನ್ನದ ಮಹತ್ವ ವಿವರಿಸಿದರು. ಬಿ2ಸಿ ಸೇಲ್ಸ್ ಉಪಾಧ್ಯಕ್ಷ ಸಂಜೀವ್ ಗಿರಿ, ಎವಿಪಿ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಮಿಲಿಂದ್ ಆಚಾರ್ಯ ಇದ್ದರು.

ಹುಬ್ಬಳ್ಳಿಯ ಖಾಸಗಿ ಹೊಟೆಲ್‌ನಲ್ಲಿ ಸೋಮವಾರ ಫಿಯೋನಾ ಬ್ರಾಂಡ್‌ನಲ್ಲಿ ರಿಫೈನ್ಡ್ ಸನ್‌ಫ್ಲವರ್ ಆಯಿಲ್ ಬಿಡುಗಡೆ ಮಾಡಲಾಯಿತು.
ಎವಿಪಿ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಮಿಲಿಂದ್ ಆಚಾರ್ಯ ಮಾತನಾಡಿ, ಈ ಕಂಪನಿ ಸುಮಾರು ವರ್ಷಗಳ ಹಿಂದಿನಿಂದಲೂ ಇದೆ. ದೇಶದಲ್ಲಿ ನಮ್ಮ ಬ್ರ್ಯಾಂಡ್ ತುಂಬಾ ಹೆಸರು ಮಾಡಿದೆ. ಈಗ ತಂದಿರುವ ಆಯಿಲ್ ಯಾವುದೇ ಕಂಪನಿ ಎಣ್ಣೆಗೆ ಹೊಲಿಸಲು ಆಗದು. ಇದು ಅಷ್ಟು ಗುಣಮಟ್ಟದಿಂದ ಕುಡಿದೆ. ಅದಕ್ಕೆ ನೀವು ನಿಮ್ಮ ಮನೆಯಲ್ಲಿ ಒಂದು ಮಗು ಹುಟ್ಟಿದ್ದಾಗ ಹೇಗೆ ಪ್ರೀತಿ ತೋರಿಸುತ್ತೀರಿ ಅದೇ ರೀತಿ ನಮ್ಮ ನೂತನ ಫಿಯೋನಾ ಸನ್‌ಫ್ಲವರ್ ಆಯಿಲ್‌ಗೆ ಅದೇ ರೀತಿ ಪ್ರೀತಿ ತೋರಿಸಿ ಎಂದು ವಿತರಕರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ, ಬಾಗಲಕೋಟ, ದಾವಣಗೆರಿ ಸೇರಿದಂತೆ ಉತ್ತರ ಕರ್ನಾಟಕದ ಸುಮಾರು ವಿತರಕರು ಆಗಮಿಸಿದ್ದರು.
ಮಂಗಳವಾರ ಕಂಪನಿಯ ಸಿಬ್ಬಂದಿ ಉತ್ತರ ಕರ್ನಾಟಕದ ಎಲ್ಲ ಪಟ್ಟಣಗಳಲ್ಲಿ ಫಿಯೋನಾ ಸನ್‌ಫ್ಲವರ್ ಆಯಿಲ್‌ನ ಪ್ರಚಾರ ಕೈಗೊಂಡರು.

 

 

administrator

Related Articles

Leave a Reply

Your email address will not be published. Required fields are marked *