ಹುಬ್ಬಳ್ಳಿ-ಧಾರವಾಡ ಸುದ್ದಿ
ಬಿಜೆಪಿ ದುರಾಡಳಿತಕ್ಕೆ ಬೆಸತ್ತ ಜನ

ಬಿಜೆಪಿ ದುರಾಡಳಿತಕ್ಕೆ ಬೆಸತ್ತ ಜನ

ಹುಬ್ಬಳ್ಳಿ: ಬಿಜೆಪಿಯ ದುರಾಡಳಿತ, ಆಡಳಿತ ವೈಫಲ್ಯದಿಂದ ರೋಸಿ ಹೋದ ಜನರು ಕಾಂಗ್ರೆಸ್ ಪಕ್ಷದತ್ತ ಗಮನಹರಿಸುತ್ತಿದ್ದಾರೆ. ಇದಕ್ಕೆ ಮೊನ್ನೆ ನಡೆದ ನಗರಸಭೆ, ಪುರಸಭೆ ಚುನಾವಣೆ ಫಲಿತಾಂಶಗಳೇ ಸಾಕ್ಷಿ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು.


ನಗರದ ಪಕ್ಷದ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 11 ಸೀಟು ಗಳನ್ನು ಗೆದ್ದಿದ್ದು, ಮತ್ತೆರಡರಲ್ಲಿ ಕಡಿಮೆ ಅಂತರದಿಂದ ಸೋಲು ಕಂಡಿದೆ. ಸರಾಸರಿ ಮತದಾನ ಗಮನಸಿದರೆ ಕಾಂಗ್ರೆಸ್ ಶೇ 48, ಬಿಜೆಪಿ ಶೇ 41 ರಷ್ಟು ಮತಗಳನ್ನು ಪಡೆದಿದೆ. ಇನ್ನೂ ಮೊನ್ನೆ ನಡೆದ ನಗರಸಭೆ, ಪುರಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚು ಸೀಟುಗಳನ್ನು ಗೆದ್ದಿ ದ್ದಾರೆ. ಇದರಲ್ಲೂ ಕಾಂಗ್ರೆಸ್ ಪಕ್ಷ ಶೇ 42.19 ಮತ ಪಡೆದರೇ, ಬಿಜೆಪಿ ಶೇ 36.68 ರಷ್ಟು ಪಡೆದಿವೆ. ಈ ಅಂಕಿಅಂಶಗಳಿಂದ ಜನರು ಬಿಜೆಪಿಯ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ ಎಂದರು.


ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸರದಾರ, ಅವರಿಗೆ ಆಸ್ಕರ್ ಪ್ರಶಸ್ತಿ ನೀಡಬೇಕು. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದೇ ಆಪರೇಷನ್ ಕಮಲದ ಮೂಲಕ, ಕಳೆದ ಮೂರುವರೆ ವರ್ಷದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಈ ಹಿನ್ನಲೆಯಲ್ಲಿ ಜನರು ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.


ಪ್ರಸಕ್ತ ವರ್ಷದಲ್ಲಿ ಹೋರಾಟದ ಮೂಲಕ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಿ ಭೂತಗಳನ್ನು ಶಕ್ತಿಶಾಲಿ ಮಾಡಲಾಗುವುದು. ಸದಸ್ಯತ್ವ ಅಭಿಯಾನದ ಮೂಲಕ ಕನಿಷ್ಠ 50ಲಕ್ಷ ಜನರನ್ನು ಸದಸ್ಯರನ್ನಾಗಿ ನೋಂದಾಯಿಸಿಕೊಳ್ಳ ಲಾಗುವುದು, ಪಕ್ಷವನ್ನು ಮಾಸ್ ಬೇಸ್‌ದಿಂದ ಕೇಡರ್ ಬೇಸ್ ಮಾಡಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಂಬರುವ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಚುನಾವಣೆಯಲ್ಲಿ ಧಾರವಾಡ, ಗದಗ, ಹಾವೇರಿ ಜಿಲ್ಲೆಯಲ್ಲಿ ಕನಿಷ್ಠ 13 ರಿಂದ 14 ಸೀಟ್‌ಗಳನ್ನು ಗೆಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಉಭಯ ಜಿಲ್ಲಾ ಅಧ್ಯಕ್ಷರಾದ ಅನಿಲಕುಮಾರ ಪಾಟೀಲ್, ಅಲ್ತಾಫ ಹಳ್ಳೂರ, ಮಾಜಿ ಶಾಸಕರಾದ ಎನ್.ಹೆಚ್.ಕೊನರೆಡ್ಡಿ, ಎಂ.ಎಸ್.ಅಕ್ಕಿ, ಮುಖಂಡರಾದ ಸದಾನಂದ ಡಂಗನವರ, ಇಮ್ರಾನ್ ಎಲಿಗಾರ, ಶಾಜಾನ ಮುಜಾಹೀದ್ ಸೇರಿದಂತೆ ಅನೇಕರಿದ್ದರು.

administrator

Related Articles

Leave a Reply

Your email address will not be published. Required fields are marked *