ಹುಬ್ಬಳ್ಳಿ: ಮಾನವ ದೇಹಕ್ಕೆ ಅತ್ಯವಶ್ಯವಾಗಿ ಬೇಕಾಗಿರುವ ಮ್ಯಾಗ್ನೇಷಿಯಂ, ಪೊಟ್ಯಾಷಿಯಂ, ಜಿಂಕ್, ಕ್ಯಾಲ್ಸಿಯಂ, ಮ್ಯಾಗ್ನೀಜ್, ಸೋಡಿಯಂ ಹಾಗೂ ಕ್ಯಾಲ್ಸಿಯಂ-2 ಮುಂತಾದ 7 ಖನಿಜಗಳನ್ನೊಳಗೊಂಡ ಪರಿಶುದ್ಧ ಕುಡಿಯುವ ನೀರನ್ನು ದೇಶದಲ್ಲಿಯೇ ಪ್ರಪ್ರಥಮ ಬಾರಿ ಸಂಕೇಶ್ವರ ವೆಂಚರ್ಸ ಇಂಡಿಯಾ ಪ್ರೈವೇಟ್ ಲಿಮಿಟೆಡ್, ದಸರಾ ಸಮಯದಲ್ಲಿ ಪರಿಚಯಿಸಿದೆ.
‘ಓಂಕಾರ’ ಹಾಗೂ `ಚೆಸ್’ `ಪರಿಶುದ್ಧ ಕುಡಿಯುವ ನೀರಿನ ಬ್ರ್ಯಾಂಡ್ಗಳ ಮೂಲಕ ರಾಜ್ಯದ ಎಲ್ಲೆಡೆ ಜನಜನಿತವಾಗಿರುವ ಸಂಕೇಶ್ವರ ವೆಂಚರ್ಸ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಈಗ ಸಂಸ್ಥೆಯ ಚೇರ್ಮನ್ ದಯಾನಂದ ಸಂಕೇಶ್ವರ ಅವರ ಮಾರ್ಗದರ್ಶನದಲ್ಲಿ ಸಾರ್ವಜನಿಕ ಆರೋಗ್ಯ ಗಮನದಲ್ಲಿಟ್ಟುಕೊಂಡು ಮತ್ತೊಂದು ಸಾಹಸಕ್ಕೆ ಕೈಹಾಕಿದೆ.
ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕ ಕುಡಿಯುವ ನೀರಿನ ಬಾಟಲ್ ಹಾಗೂ ಕ್ಯಾನ್ಗಳು ಕೇವಲ ಒಂದರಿಂದ ಎರಡು ಖನಿಜಗಳನ್ನು ಒಳಗೊಂಡಿವೆ ಎಂದು ಸಂಕೇಶ್ವರ ವೆಂಚರ್ಸ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಸಂಕೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಕೇಶ್ವರ ವೆಂಚರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಓಂಕಾರ್ 250 ಮಿಲಿ, 500 ಮಿಲಿ, 1, 2, 5, 15 ಹಾಗೂ 20 ಲೀಟರ್ ಬ್ರ್ಯಾಂಡ್ ಜನಮಾನಸದಲ್ಲಿ ಬೆರೆತಿವೆ. ಈಗ ಮಾರುಕಟ್ಟೆಗೆ ಪರಿಚಯಿಸುವ ಏಳು ಖನಿಜಯುಕ್ತ ನೀರು 750 ಹಾಗೂ 1500 ಮಿಲಿಲೀಟರ್ಗಳಲ್ಲಿ ಹೊರಬರುತ್ತಿವೆ ಹಾಗೂ ಪ್ರಸ್ತುತ ಮಾರುಕಟ್ಟೆಯ ಸಾಮಾನ್ಯ ದರದಲ್ಲೇ ಇವು ದೊರೆಯುತ್ತವೆ. ಇದು ಮಿನೆರಲ್ ವಾಟರ್ ವಲಯದಲ್ಲಿ ಪ್ರಪ್ರಥಮ ವೆಂದು ವಿವರಿಸಿದ್ದಾರೆ.
ಜನತೆಗೆ ಶುದ್ಧ ಕುಡಿಯುವ ನೀರನ್ನು ಕಳೆದ ಎರಡು ದಶಕಗಳಿಂದ ಪೂರೈಸುತ್ತಿರುವ ಸಂಸ್ಥೆಯು, ಗುಣಮಟ್ಟದಲ್ಲಿ ಎಂದೂ ರಾಜಿಮಾಡಿ ಕೊಂಡಿಲ್ಲ. ಇದರಿಂದಾಗಿಯೇ ನಮ್ಮ “ಕೋಮಿನ್” ನೈಸರ್ಗಿಕ ಶುದ್ಧ ಕುಡಿಯುವ ನೀರು ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ ಎಂದು ತಿಳಿಸಿದ್ದಾರೆ.