15-20 ದಿನಗಳಲ್ಲಿ ಪೂರ್ಣಾವಧಿ ನೇಮಕ ಸಾಧ್ಯತೆ
ಹುಬ್ಬಳ್ಳಿ: ರಾಜ್ಯದ ಅತಿಸೂಕ್ಷ್ಮ ಹಣೆಪಟ್ಟಿಯ ಹುಬ್ಬಳ್ಳಿ ಧಾರವಾಡ ಮಹಾನಗರದ ಪೊಲೀಸ್ ಆಯುಕ್ತರ ಹುದ್ದೆಯ ಅಧಿಕಾರವನ್ನು ಹೆಚ್ಚುವರಿಯಾಗಿ ಗುಪ್ತವಾರ್ತೆಯ ಉಪ ನಿರ್ದೇಶಕರಾಗಿರುವ ಐಪಿಎಸ್ ಅಧಿಕಾರಿ ಕೆ.ಸಂತೋಷ್‌ಬಾಬು ಅವರಿಗೆ ನೀಡಿ ಸರ್ಕಾರ ದಿ. 28ರಂದು ಆದೇಶ ಹೊರಡಿಸಿದೆ.
ರಮಣ ಗುಪ್ತಾ ಬೆಂಗಳೂರಿಗೆ ವರ್ಗಾವಣೆಯಾದ ನಂತರ ಮಹಾನಗರ ಪೊಲೀಸ್ ಆಯುಕ್ತರ ಹುದ್ದೆ ಖಾಲಿ ಇದ್ದ ಹಿನ್ನೆಲೆಯಲ್ಲಿ ತಾತ್ಕಾಲಿಕ ಪ್ರಭಾರಿಯಾಗಿ 2011ನೇ ಬ್ಯಾಚಿನ ಸಂತೋಷ ಬಾಬು ನೇಮಕ ಮಾಡಿದ್ದು, ಈ ಹಿಂದೆ ಇವರು ಗದಗ ಎಸ್ ಪಿಯಾಗಿಯೂ ಅತ್ಯಂತ ದಕ್ಷ ರೀತಿಯಿಂದ ಕಾರ್ಯನಿರ್ವಹಿಸಿದ್ದಾರೆ.
ಮಹಾನಗರ ಆಯುಕ್ತರ ಹುದ್ದೆಗೆ ಇಡಾ ಮಾರ್ಟಿನ್ ಮತ್ತು ವಂಶಿ ಕೃಷ್ಣ ಇವರುಗಳ ಹೆಸರು ಮುಂಚೂಣಿಯಲ್ಲಿದ್ದು ಅನುಪಮ ಅಗ್ರವಾಲ್, ಈ ಹಿಂದೆ ಡಿಸಿಪಿಯಾಗಿದ್ದ ರೇಣುಕಾ ಸುಕುಮಾರ, ಶ್ರೀನಿವಾಸ ಗೌಡ ಹೆಸರು ಕೇಳಿ ಬರುತ್ತಿದ್ದು. ಅಧಿವೇಶನದ ನಂತರ ಇನ್ನು 15-20 ದಿನಗಳಲ್ಲಿ ಪೂರ್ಣ ಪ್ರಮಾಣದ ಆಯುಕ್ತರು ನಿಯುಕ್ತಿಗೊಳ್ಳುವದು ನಿಶ್ಚಿತವಾಗಿದೆ. ಕಾಂಗ್ರೆಸ್ ಶಾಸಕರ ಸಿಂಡಿಕೇಟ್ ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಖಡಕ್ ಐಪಿಎಸ್ ಅಧಿಕಾರಿ ಹಾಕಲು ವಿನಂತಿಸಿದೆ.