ಹುಬ್ಬಳ್ಳಿ-ಧಾರವಾಡ ಸುದ್ದಿ
’ವರ್ಲ್ಡ್ ಸ್ಕ್ವೇರ್’ ಗ್ರೂಪ್‌ನಿಂದ ಟೈಟಲ್ ಪ್ರಾಯೋಜಕತ್ವ; 30,31ರಂದು ಎಸ್ ಬಿಐ ಸಾಲ ಉತ್ಸವ

’ವರ್ಲ್ಡ್ ಸ್ಕ್ವೇರ್’ ಗ್ರೂಪ್‌ನಿಂದ ಟೈಟಲ್ ಪ್ರಾಯೋಜಕತ್ವ; 30,31ರಂದು ಎಸ್ ಬಿಐ ಸಾಲ ಉತ್ಸವ

ಹುಬ್ಬಳ್ಳಿ: ಮನೆ ಮತ್ತು ವಾಹನಗಳ ಖರೀದಿಗೆ ಸಾಲ ಸೌಲಭ್ಯ ಒದಗಿಸುವ ಎರಡು ದಿನಗಳ ಎಸ್‌ಬಿಐ ಉತ್ಸವವನ್ನು ವಿದ್ಯಾನಗರದ ರಾಯ್ಕರ ಮೈದಾನದಲ್ಲಿ 30 ಮತ್ತು 31ರಂದು ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ಎಸ್.ರಾಜೇಂದ್ರನ್ ಹೇಳಿದರು.


ನಗರದ ಕುಸುಗಲ್ ರಸ್ತೆಯಲ್ಲಿರುವ ಎಸ್ ಬಿ ಐ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಲ್ಡ್ ಸ್ಕ್ವೇರ್ ಗ್ರೂಪ್ ಟೈಟಲ್ ಪ್ರಾಯೋಜಕತ್ವದಡಿಯಲ್ಲಿ ಈ ಮೇಳ ನಡೆಯುತ್ತಿದ್ದು ಮೇಳದಲ್ಲಿ 200 ಕ್ಕೂ ಹೆಚ್ಚು ಮನೆಗಳನ್ನು ಖರೀದಿಸುವ ಗ್ರಾಹಕರಿಗೆ ಸಾಲ ಸೌಲಭ್ಯ ನೀಡಲಾಗುವುದು ಎಂದರು.
ಉತ್ಸವದಲ್ಲಿ ಕಾರು, ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.ದಿ.30 ರಂದು ಬೆಳಿಗ್ಗೆ 11 ಕ್ಕೆ ಉತ್ಸವದ ಉದ್ಘಾಟನೆ ಯಾಗಲಿದ್ದು, ಪ್ರತಿದಿನ ಬೆಳಗ್ಗೆ 10ರಿಂದ ರಾತ್ರಿ 7 ರ ತನಕ ಸಾಲ ಮೇಳ ನಡೆಯಲಿದೆ. ಅಂದಾಜು ೪೦೦ ಕೋಟಿ ಸಾಲಸೌಲಭ್ಯ ನೀಡುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಈ ಉತ್ಸವದಲ್ಲಿ ಸರ್ಕಾರದ ಪಿಎಮ್ ಎ ವಾಯ್ ಯೋಜನೆಯ ಸಹಭಾಗಿತ್ವದಲ್ಲಿ ಕೈಗಟುಕುವ ಮತ್ತು ಮಿಡ್ ಆಂಡ್ ವಿಭಾಗದಲ್ಲಿ ಹಲವಾರು ಯೋಜನೆಗಳನ್ನು ಸಾರ್ವಜನಿಕರಿಗೆ ನೀಡುವ ಗುರಿ ಹೊಂದಿದ್ದೇವೆ ಎಂದರು.
ನಗರದ ಪ್ರಮುಖ 20 ಬಿಲ್ಡರ್, ಡೆವಲಪರ್ ಮತ್ತು ವೆಹಿಕಲ್ ಡೀಲರ್ ಗಳು ಪಾಲ್ಗೊಳ್ಳುತ್ತಿದ್ದು ಬಿಲ್ಡರ್‌ಗಳು ತಮ್ಮ ಅಪಾರ್ಟ್‌ಮೆಂಟ್‌ಗಳ ಬಗೆಗೆ ವಿವರ ನೀಡಲಿದ್ದು ಜೊತೆಗೆ ಸ್ಥಳದಲ್ಲಿಯೇ ಸಾಲ ಮಂಜೂರು ಮಾಡಲಾಗು ವುದು ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕರಾದ ಜೆ.ಸಿ.ಚಂದ್ರಾ, ಮುಖ್ಯ ವ್ಯವಸ್ಥಾಪಕರಾದ ಎಸ್.ಬಿ.ದೇಶಪಾಂಡೆ, ರಾಮಚಂದ್ರ ನಾಯಕ ಇದ್ದರು.

 

administrator

Related Articles

Leave a Reply

Your email address will not be published. Required fields are marked *